25 ವರ್ಷಗಳಷ್ಟು ಹಳೆಯ ಒಂದು ಜೊತೆ ಬೂಟು 18 ಕೋಟಿ ರೂ.ಗಳಿಗೆ ಮಾರಾಟ…! ಏನಿದರ ವಿಶೇಷತೆ ..?

ನವದೆಹಲಿ: ಮನೆ, ಐಷಾರಾಮಿ ಕಾರು ಅಥವಾ ಚಿನ್ನದ ವಸ್ತುವನ್ನು ಹರಾಜಿನಲ್ಲಿ ಕೋಟಿಗಟ್ಟಲೆ ಹಣ ಕೊಟ್ಟು ಖರೀದಿ ಮಾಡಿದ್ದರ ಬಗ್ಗೆ ಕೇಳಿದ್ದೇವೆ. ಆದರೆ ಒಂದು ಜೊತೆ ಶೂ ಕೋಟಿಗಟ್ಟಲೆ ಹಣಕ್ಕೆ ಮಾರಾಟವಾಗಿದ್ದನ್ನು ಕೇಳಿದ್ದೀರಾ..? ಇಲ್ಲೊಂದು ಜೊತೆ ಶೂ ಸುಮಾರು 18 ಕೋಟಿ ರೂಪಾಯಿಗೆ (2.2 ಮಿಲಿಯನ್ ಡಾಲರ್) ಹರಾಜಾಗಿದೆ…! ಅದು ಕೂಡ ಇದು 25 ವರ್ಷಗಳಷ್ಟು ಹಳೆಯ ಶೂ..!! ಇದು ಇಷ್ಟೊಂದು ಮೊತ್ತಕ್ಕೆ ಮಾರಾಟವಾಗಿದ್ದಕ್ಕೆ ಕಾರಣವೂ ಇದೆ. ಇದು ಬಾಸ್ಕೆಟ್‌ ಬಾಲ್‌ ದಂತಕಥೆ ಮೈಕೆಲ್ ಜೋರ್ಡಾನ್ ಅವರ 25 ವರ್ಷಗಳ ಹಿಂದಿನ ಶೂಗಳಾಗಿವೆ.
ಮೈಕೆಲ್ ಜೋರ್ಡಾನ್ ಅಮೆರಿಕದ ಲೆಜೆಂಡರಿ ಬ್ಯಾಸ್ಕೆಟ್‌ಬಾಲ್ ಆಟಗಾರರಲ್ಲಿ ಒಬ್ಬರು. ಅವರು 1998 ರ ಎನ್‌ಬಿಎ (NBA) ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅವರು ಈ ಶೂ ಧರಿಸಿದ್ದರು. ಆ ಪಂದ್ಯ​ವನ್ನು ಲಾಸ್ಟ್‌ ಡ್ಯಾನ್ಸ್‌ ಎಂದೇ ಈಗಲೂ ಕರೆ​ಯ​ಲಾ​ಗು​ತ್ತದೆ.

1998 ರ ಎನ್‌ಬಿಎ ಅಂತಿಮ ಪಂದ್ಯವು ಜೋರ್ಡಾನ್ ಅವರ ವೃತ್ತಿಜೀವನದ ಕೊನೆಯ ಪಂದ್ಯವಾಗಿತ್ತು, ಅದರಲ್ಲಿ ಅವರು ತಮ್ಮ ತಂಡ ಚಾಂಪಿಯನ್ ಆಗಲು ಕಾರಣರಾದರು. ಅವರು ಚಿಕಾಗೊ ಬುಲ್ಸ್ ತಂಡದ ಭಾಗವಾಗಿದ್ದರು. ಹಾಗೂ ಫೈನಲ್‌ ಪಂದ್ಯದಲ್ಲಿ 37 ಪಾಯಿಂಟ್ಸ್ ಕಲೆಹಾಕಿದ್ದರು. ಬುಲ್ಸ್ 93–88 ಅಂಕಗಳಲ್ಲಿ ಯೂಟಾ ಜಾಝ್ ತಂಡದ ವಿರುದ್ಧ ಪಂದ್ಯವನ್ನು ಗೆದ್ದುಕೊಂಡಿತ್ತು.ಈ ಶೂಗಳಿಗೆ ಜೋರ್ಡಾನ್ ಸಹಿ ಮಾಡಿದ್ದಾರೆ. ಇಷ್ಟೊಂದು ಮೊತ್ತಕ್ಕೆ ಒಂದು ಜೊತೆ ಶೂ ಮಾರಾಟವಾಗಿದ್ದು ವಿಶ್ವದಾಖಲೆ. ಈ ಹಿಂದೆ ಇಷ್ಟೊಂದು ದೊಡ್ಡಮೊತ್ತಕ್ಕೆ ಶೂ ಹರಾಜಾಗಿರಲಿಲ್ಲ. ಸ್ಪೋರ್ಟ್ಸ್ ಫುಟ್‌ವೇರ್ ಮಂಗಳವಾರ ಈ ಶೂಗಳನ್ನು ಹರಾಜು ಮಾಡಿದೆ.
ಮತ್ತೊಂದು ಜೊತೆ ಶೂಗಳನ್ನು ಸೆಪ್ಟೆಂಬರ್ 2021 ರಲ್ಲಿ ಹರಾಜು ಮಾಡಲಾಗಿತ್ತು, ಅದು 12 ಕೋಟಿ ರೂಪಾಯಿಗಳಿಗೆ ಮಾರಾಟವಾಗಿತ್ತು. ಅಚ್ಚರಿಯ ವಿಷಯವೆಂದರೆ ಇವು ಕೂಡ ಮೈಕಲ್‌ ಜೋರ್ಡಾನ್ ಅವರದ್ದೇ ಶೂಗಳಾಗಿದ್ದವು.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement