ಹುಬ್ಬಳ್ಳಿ:ಬಿಜೆಪಿ ಪ್ರಕಟಿಸಿದ ಎರಡು ಪಟ್ಟಿಗಳಲ್ಲಿ ತನಗೆ ಟಿಕೆಟ್ ಘೋಷಣೆಯಾಗದ ಕಾರಣ ತೀವ್ರ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಮನವೊಲಿಸುವ ಪ್ರಯತ್ನಗಳು ನಡೆಯುತ್ತಿವೆ. ಹುಬ್ಬಳ್ಳಿಯಲ್ಲಿ ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಈಗ ಅಖಾಡಾಕ್ಕೆ ಧುಮುಕಿದ್ದು ಜಗದೀಶ್ ಶೆಟ್ಟರ ಮನೆಗೆ ಆಗಮಿಸಿ ಮಾತುಕತೆ ನಡೆಸಿದ್ದಾರೆ.
ಬಿಜೆಪಿಯಿಂದ ಟಿಕೆಟ್ ಸಿಗುವುದು ಇನ್ನೂ ಖಾತ್ರಿಯಾಗದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಹಾಲಿ ಶಾಸಕರಾದ ಜಗದೀಶ ಶೆಟ್ಟರ್ ಬಿಜೆಪಿ ಹೈಕಮಾಂಡ್ ಮೇಲೆ ಕೋಪಗೊಂಡಿದ್ದು, ಇಂದು ಶನಿವಾರ ತಮ್ಮ ಬೆಂಬಲಿಗರ ಸಭೆ ನಡೆಸಲು ತಯಾರಿ ನಡೆಸಿದ್ದರು.
ಶನಿವಾರದೊಳಗೆ ಟಿಕೆಟ್ ಘೋಷಣೆಯಾಗಬೇಕು ಇಲ್ಲದಿದ್ದರೇ ನಾನು ಬೇರೆ ರೀತಿಯಲ್ಲಿ ಯೋಚನೆ ಮಾಡಬೇಕಾಗುತ್ತದೆ ಎಂದು ಪಕ್ಷದ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದರು. ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ನಾನು ಪಾಸಿಟಿವ್ ಆಗಿ ಯೋಚನೆ ಮಾಡುವವ. ಈಗಲೂ ಟಿಕೆಟ್ ಸಿಗುವ ಆಶಾಭಾವ ಹೊಂದಿದ್ದೇನೆ. ನಾಳೆಯೂ ಘೋಷಣೆ ಆಗದೆ ಹೋದರೆ ನಾನು ಬೇರೆ ಯೋಚನೆ ಮಾಡುತ್ತೇನೆ. ಅಭಿಮಾನಿಗಳ ಸಭೆ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಈ ಸಂದೇಶದ ಬೆನ್ನಲ್ಲೇ ಹುಬ್ಬಳ್ಳಿಯ ನಿವಾಸಕ್ಕೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಿ ಮಾತುಕತೆ ನಡೆಸಿದ್ದಾರೆ.
ವಿಧಾನಸಭಾ ಚುನಾವಣೆಗೆ ಬಿಜೆಪಿ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಎರಡು ಪಟ್ಟಿಯಲ್ಲಿಯೂ ಶೆಟ್ಟರ ಹೆಸರಿಲ್ಲ ಹಾಗೂ ಅವರ ಕ್ಷೇತ್ರದಲ್ಲಿ ಯಾರಿಗೂ ಟಿಕೆಟ್ ಘೋಷಣೆ ಮಾಡದೆ ಕಾಯ್ದಿರಿಸಲಾಗಿದೆ. ಶೆಟ್ಟರ ಅವರಿಗೆ ವಿಳಂಬದ ಹಿನ್ನೆಲೆಯಲ್ಲಿ ಮೂರನೇ ಪಟ್ಟಿಯಲ್ಲಿಯೂ ಶೆಟ್ಟರ ಹೆಸರು ಕೈಬಿಟ್ಟರೆ ಶೆಟ್ಟರ್ ಅವರು ಪಕ್ಷೇತರರಾಗಿ ಸ್ಪರ್ಧಿಸಬಹುದು ಎಂಬ ವದಂತಿಗಳು ಕ್ಷೇತ್ರದಾದ್ಯಂತ ಹಬ್ಬಿವೆ. ಈಗ ಪ್ರಹ್ಲಾದ ಜೊತೆ ಮಾತುಕತೆ ನಡೆದಿರುವುದರಿಂದ ಹೈಕಮಾಂಡ್ ಇಂದೇ ಸಂಜೆಯೊಳಗೆ ಪಟ್ಟಿ ಬಿಟುಗಡೆ ಮಾಡುತ್ತದೆಯೇ ಎಂಬುದು ಮಹತ್ವ ಪಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ