ಕರ್ನಾಟಕದ ಚುನಾವಣೆ: ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ, ಜಗದೀಶ ಶೆಟ್ಟರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಇಂದು, ಸೋಮವಾರ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಬಾಕಿ 12 ಕ್ಷೇತ್ರಗಳಲ್ಲಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳ ಮೂರನೇ ಪಟ್ಟಿ
ಕ್ಷೇತ್ರ         ಅಭ್ಯರ್ಥಿ
ನಾಗಠಾಣ-ಸಂಜೀವ ಐಹೊಳೆ
ಸೇಡಂ-ರಾಜಕುಮಾರ ಪಾಟೀಲ
ಕೊಪ್ಪಳ-ಮಂಜುಳಾ ಅಮರೇಶ
ರೋಣ – ಕಳಕಪ್ಪ ಬಂಡಿ,
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-ಮಹೇಶ್ ಟೆಂಗಿನಕಾಯಿ
ಹಗರಿಬೊಮ್ಮನಹಳ್ಳಿ (ಎಸ್‌ಸಿ) -ಬಿ ರಾಮಣ್ಣ
ಬೆಂಗಳೂರಿನ ಹೆಬ್ಬಾಳ-ಕಟ್ಟಾ ಜಗದೀಶ್
ಬೆಂಗಳೂರಿನ ಗೋವಿಂದರಾಜನಗರ-ಉಮೇಶ್ ಶೆಟ್ಟಿ,
ಮಹದೇವಪುರ (ಎಸ್‌ಸಿ)- ಮಂಜುಳ ಅರವಿಂದ ಲಿಂಬಾವಳಿ
ಕೃಷ್ಣರಾಜನಗರ-ಶ್ರೀವತ್ಸ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಜತೆಗೆ ಮಾನ್ವಿ ಕ್ಷೇತ್ರದ ಟಿಕೆಟ್​ ಅನ್ನೂ ಬಾಕಿ ಇರಿಸಿಕೊಂಡಿದೆ. ಶಿವಮೊಗ್ಗ ನಗರ ಕ್ಷೇತ್ರವನ್ನು ಈವರೆಗೆ ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದರು. ಇತ್ತೀಚೆಗಷ್ಟೇ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ, ತಮ್ಮ ಮಗ ಕಾಂತೇಶ್​ಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ : 9 ಮಂದಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement