ಅಪರೂಪದಲ್ಲಿ ಅಪರೂಪ…ಸೀರೆ ಉಟ್ಟು 42.5 ಕಿಮೀ ದೂರದ ಬ್ರಿಟನ್‌ ಮ್ಯಾರಾಥಾನ್​ ಓಡಿದ ಭಾರತೀಯ ಮಹಿಳೆ : ನಿಬ್ಬೆರಗಾದ ಜನ | ವೀಕ್ಷಿಸಿ

ಸಂಬಲ್‌ಪುರಿ ಕೈಮಗ್ಗದ ಸೀರೆಯನ್ನು ಉಟ್ಟು, ಒರಿಸ್ಸಾದ ಮಹಿಳೆಯೊಬ್ಬರು ಭಾನುವಾರ ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ 42.5 ಕಿಮೀ ಮ್ಯಾರಥಾನ್‌ ಓಡಿ ತನ್ನ ಸಹ ಓಟಗಾರರನ್ನು ಬೆರಗುಗೊಳಿಸಿದ್ದಾರೆ ಮತ್ತು ಭಾರತೀಯರು ಹೆಮ್ಮೆಪಡುವಂತೆ ಮಾಡಿದ್ದಾರೆ.
41 ವರ್ಷದ ಮಧುಸ್ಮಿತಾ ಜೆನಾ ಎಂಬ ಮಹಿಳೆ ಸೀರೆಯುಟ್ಟು ಮ್ಯಾರಥಾನ್‌ ಓಡಿದ ಮಹಿಳೆ ಹಾಗೂ ಮ್ಯಾರಥಾನ್ ಅನ್ನು 4 ಗಂಟೆ 50 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.. ಮ್ಯಾಂಚೆಸ್ಟರ್‌ನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿರುವ ಅವರು ವಾಯುವ್ಯ ಇಂಗ್ಲೆಂಡ್ ಒಡಿಯಾ ಸಮುದಾಯದ ಸಕ್ರಿಯ ಸದಸ್ಯರಾಗಿದ್ದಾರೆ.
ಅವರು ಜಗತ್ತಿನಾದ್ಯಂತ ಅನೇಕ ಮ್ಯಾರಥಾನ್‌ಗಳು ಮತ್ತು ಅಲ್ಟ್ರಾ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿದ್ದಾರೆ. ಆದರೆ ಮಧುಸ್ಮಿತಾ ಅವರು ಸೀರೆ ಉಟ್ಟು ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದು ಇದೇ ಮೊದಲು. “ಸೀರೆ ಉಟ್ಟುಕೊಂಡು ಮ್ಯಾರಥಾನ್ ಓಡಿದ ಏಕೈಕ ವ್ಯಕ್ತಿ ನಾನು. ಅಂತಹ ವಿಸ್ತೃತ ಅವಧಿಗೆ ಓಡುವುದು ಸ್ವತಃ ಒಂದುಕಷ್ಟದ ಕೆಲಸ, ಆದರೆ ಸೀರೆಯಲ್ಲಿ ಅಷ್ಟು ದೂರ ಓಡುವುದು ಇನ್ನೂ ಕಷ್ಟ. ಆದರೆ ನಾನು ಸಂಪೂರ್ಣ ದೂರವನ್ನು 4:50 ಗಂಟೆಗಳಲ್ಲಿ ಪೂರ್ಣಗೊಳಿಸಿರುವುದು ನನಗೆ ಸಂತೋಷವಾಗಿದೆ ಎಂದು ಮಧುಸ್ಮಿತಾ ಹರ್ಷ ವ್ಯಕ್ತಪಡಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮಧುಸ್ಮಿತಾ ಅವರು ತನ್ನ ತಾಯಿ ಮತ್ತು ಅಜ್ಜಿಯಿಂದ ಸ್ಫೂರ್ತಿ ಪಡೆದಿರುವುದಾಗಿ ಹೇಳಿದ್ದಾರೆ. ಅವರು ಮನೆಯಲ್ಲಿ ಪ್ರತಿನಿತ್ಯವೂ ಸೀರೆಗಳನ್ನು ಧರಿಸುತ್ತಾರೆ. “ಮಹಿಳೆಯರು ಸೀರೆಯನ್ನು ಧರಿಸಿ ಓಡಲು ಸಾಧ್ಯವಿಲ್ಲ ಎಂದು ಹಲವರು ನಂಬುತ್ತಾರೆ ಆದರೆ ನಾನು ಸಂಬಲ್ಪುರಿ ಕೈಮಗ್ಗದ ಸೀರೆ ಉಟ್ಟು ಓಡುವ ಮೂಲಕ ಅಂಥ ವಿಚಾರ ತಪ್ಪು ಎಂದು ಸಾಬೀತುಪಡಿಸಿದೆ. ನಾನು ಯುಕೆಯಲ್ಲಿ ಬೇಸಿಗೆಯಲ್ಲಿ ಸೀರೆಯನ್ನು ಧರಿಸುತ್ತೇನೆ ಎಂದು 41 ವರ್ಷದ ಮಧುಸ್ಮಿತಾ ಹೇಳಿದ್ದಾರೆ. ಅವರ ಕುಟುಂಬವು ಒಡಿಶಾ ರಾಜ್ಯದ ಕೇಂದ್ರಪಾರಾದಿಂದ 30 ಕಿಮೀ ದೂರದಲ್ಲಿರುವ ಕುಸುಪುರ್ ಗ್ರಾಮಕ್ಕೆ ಸೇರಿದೆ.

ಕಳೆದ ವರ್ಷ ಒಡಿಶಾ ಸೊಸೈಟಿ ಆಫ್ ಯುಕೆ ಸಮಾವೇಶದಲ್ಲಿ ಮಧುಸ್ಮಿತಾ ಅವರನ್ನು ಕ್ರೀಡಾ ಶ್ರೇಷ್ಠತೆಗಾಗಿ ಗೌರವಿಸಲಾಯಿತು. ಅವರು ಯಾವಾಗಲೂ ಹೊಸ ಸಾಹಸಗಳೊಂದಿಗೆ ನಮಗೆ ಸ್ಫೂರ್ತಿ ನೀಡುತ್ತಾರೆ ಆದರೆ ಈ ಬಾರಿ ಅವರು ಸೀರೆಯಲ್ಲಿ ಓಡುವ ಮೂಲಕ ಹೆಚ್ಚುವರಿ ಸಾಹಸ ಮಾಡಿದ್ದಾರೆ. ಬ್ರಿಟನ್‌ನ ಇಡೀ ಒಡಿಯಾ ಸಮುದಾಯವು ಆಕೆಯ ಸಾಧನೆಗಳ ಬಗ್ಗೆ ಹೆಮ್ಮೆಪಡುತ್ತದೆ ಎಂದು ಯುಕೆ ಜಗನ್ನಾಥ್ ಸೊಸೈಟಿಯ ಟ್ರಸ್ಟಿ ಮತ್ತು ಯುಕೆ ಒಡಿಶಾ ಸೊಸೈಟಿಯ ಮಾಜಿ ಕಾರ್ಯದರ್ಶಿ ಸುಕಾಂತಕುಮಾರ ಸಾಹು ಹೇಳಿದ್ದಾರೆ. ಮಧುಸ್ಮಿತಾ ಅವರ ಪತಿ ಸಚಿನ ದಾಸ್ ಅವರು ಈಜಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಆಕೆಯ ಸಾಧನೆಯಿಂದ ಆಕೆಯ ತಂದೆ ನಿರೇಂದ್ರ ಮೋಹನ್ ಜೆನಾ ಮತ್ತು ಇಬ್ಬರು ಪುತ್ರರು ಸಂತೋಷಪಟ್ಟಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.3 / 5. ಒಟ್ಟು ವೋಟುಗಳು 4

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement