ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಮಾಡ್ಯಾರ : ಕಾರಿಗೆ ಸೆಗಣಿ ಲೇಪಿಸಿ ತಂಪು ತಂಪು ʼಕೂಲ್‌ ಕೂಲ್‌ʼ ಆದ ವೈದ್ಯ | ವೀಕ್ಷಿಸಿ

ಸಾಗರ (ಮಧ್ಯಪ್ರದೇಶ) : ಬೇಸಿಗೆ ತಾಪಮಾನಕ್ಕೆ ಇಡೀ ದೇಶವೇ ತತ್ತರಿಸುತ್ತಿದೆ. ಮಹಾರಾಷ್ಟ್ರದಲ್ಲಿ ಬಿಸಿ ಅಲೆಗೆ 13 ಜನ ಮೃತಪಟ್ಟ ಘಟನೆಯೂ ನಡೆದಿದೆ. ಅನೇಕ ರಾಜ್ಯಗಳಲ್ಲಿ ಬಿಸಿಲಿನ ತಾಪದಿಂದಾಗಿ ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳಲ್ಲಿ ಸಂಚರಿಸುವಾಗ ಜನ ಸೆಖೆಯಿಂದ ತಪ್ಪಿಸಿಕೊಳ್ಳಲು ಹವಾನಿಯಂತ್ರಣಕ್ಕೆ(ಎಸಿ)ಮೊರೆ ಹೋಗುತ್ತಿದ್ದಾರೆ. ಆದರೆ ಬಹಳ ಹೊತ್ತು ಎಸಿ ಬಳಿ ಕುಳಿತುಕೊಂಡರೆ ಅನಾರೋಗ್ಯಕ್ಕೆ ಸಮಸ್ಯೆ ಕಾಡಬಹುದು. ಹಾಗೂ ಕೆಲವರಿಗೆ ಇದು ಅಲರ್ಜಿಗೆ ಕಾರಣವಾಗಬಹುದು. ಆದರೆ ಇಲ್ಲೊಬ್ಬ ವೈದ್ಯರು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಮಧ್ಯಪ್ರದೇಶದ ಸಾಗರ ಜಿಲ್ಲೆಯ ಬುಂದೇಲ್‌ಖಂಡ್ ನಗರದ ತಿಲಕ್‌ಗಂಜ್‌ ವಾರ್ಡ್‌ನ ನಿವಾಸಿ ಹಾಗೂ ಹೋಮಿಯೋಪತಿ ವೈದ್ಯ ಸುಶೀಲ್ ಸಾಗರ ಅವರು ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ವಿನೂತನ ಉಪಾಯ ಮಾಡಿದ್ದಾರೆ. ತಮ್ಮ ಕಾರಿಗೆ ಹಸುವಿನ ಸೆಗಣಿ ಲೇಪಿಸಿಕೊಂಡು ಬಿಸಿಲಿನ ಬೇಗೆಯಿಂದ ಅವರು ಮುಕ್ತಿ ಪಡೆದಿದ್ದಾರೆ. ಹೀಗೆ ಮಾಡುವುದರಿಂದ ಕಾರಿನಲ್ಲಿ ತಂಪು ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ.

ಹಸುವಿನ ಸಗಣಿಯನ್ನು ನೆಲದ ಮೇಲೆ ಹೇಗೆ ಅನ್ವಯಿಸಲಾಗುತ್ತದೆಯೋ ಅದೇ ರೀತಿ ಸೆಗಣಿಯನ್ನು ತಮ್ಮ ಕಾರಿನ ಮೇಲೆ ಲೇಪಿಸಿದ್ದಾರೆ. ಅದನ್ನು ಒಮ್ಮೆ ಲೇಪನ ಮಾಡಿದರೆ ಸುಮಾರು ಎರಡು ತಿಂಗಳ ವರೆಗೆ ಇರುತ್ತದೆಯಂತೆ. ಎಸಿ ಅಲರ್ಜಿ ಇರುವವರು ಹಸುವಿನ ಸೆಗಣಿಯನ್ನು ಕಾರಿಗೆ ಬಳಿಯುವುದರಿಂದ ಕಾರಿನೊಳಗೆ ಸಾಮಾನ್ಯ ತಾಪಮಾನ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳುತ್ತಾರೆ. ಹಸುವಿನ ಸೆಗಣಿ ಶಾಖ ನಿರೋಧಕವಾಗಿದೆ ಮತ್ತು ಹೀಗಾಗಿ ಸೂರ್ಯನ ಶಾಖ ಕಾರಿನೊಳಗೆ ಶಾಖ ಬರಲು ಬಿಡುವುದಿಲ್ಲ. ಹೀಗಾಗಿ ಕಾರಿನ ಒಳಗೆ ತಂಪಾಗಿರುತ್ತದೆ ಎಂದು ಅವರು ಹೇಳುತ್ತಾರೆ.
ಬೇಸಿಗೆಯಲ್ಲಿ ಸಾಮಾನ್ಯವಾಗಿ ಕಾರಿನ ಮೇಲಿನ ಶೀಟ್ ಅಥವಾ ಮೇಲ್ಛಾವಣಿ ಶಾಖವನ್ನು ಸೆಳೆಯುತ್ತದೆ ಹಾಗೂ ಕಾರಿನೊಳಗೆ ತಾಪಮಾನವನ್ನು ಹೆಚ್ಚಿಸುತ್ತದೆ. ಆದರೆ ಹಸುವಿನ ಸೆಗಣಿ ಲೇಪನ ಮಾಡುವುದರಿಂದ ಅದು ಶಾಖ ನಿರೋಧಕವಗಿ ಕೆಲಸ ಮಾಡುವುದರಿಂದ ಕಾರಿನ ಒಳಗಿನ ತಾಪಮಾನವು ಹೆಚ್ಚಾಗುವುದಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಕಾರಿನೊಳಗೆ ಕುಳಿತಾಗ ಶಾಖದ ಬೇಗೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಡಾ. ಸುಶೀಲ್ ಸಾಗರ ಹೇಳಿದ್ದಾರೆ.

ವೈದ್ಯರು ಈ ಸಗಣಿ ಲೇಪಿತ ಕಾರಿನಲ್ಲಿ ಹೋಗುತ್ತಿದ್ದರೆ ಜನ ಬಾಯಿಬಿಟ್ಟುಕೊಂಡು ನೋಡುತ್ತಾರೆ. ಆದರೆ ಅವರು ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಕಾರು ತಣ್ಣಗಿದೆ, ಹಾಗಾಗಿ ನಾನು ಕೂಡ ಕೂಲ್ ಆಗಿದ್ದೇನೆ ಎಂದು ಅವರು ಹೇಳುತ್ತಾರೆ.
ಡಾ.ಸುಶೀಲ್ ಸಾಗರ ಅವರು ಜಾರುಖೇಡ ಆರೋಗ್ಯಸೇತು ಆರೋಗ್ಯಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಿಧಾನವನ್ನು ನೀವೂ ಟ್ರೈ ಮಾಡಿ ಎಂದು ಸಲಹೆ ನೀಡುತ್ತಾರೆ. ಸೆಗಣಿಯಿಂದ ಲೇಪನ ಮಾಡಿದ ಅವರ ಕಾರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಹಮದಾಬಾದ್‌ನ ಮಹಿಳೆಯೊಬ್ಬರು ಸಹ ತಮ್ಮ ಕಾರಿಗೆ ಸಗಣಿ ಲೇಪನ ಮಾಡಿದ್ದು ಸುದ್ದಿಯಾಗಿತ್ತು.

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement