ಆಳದ ಗುಂಡಿಯಲ್ಲಿ ಬಿದ್ದ ಬೆಕ್ಕಿನ ಮರಿ ರಕ್ಷಿಸಲು ಶತಪ್ರಯತ್ನ ನಡೆಸುವ ಮಂಗ: ಈ ಮನಕರಗುವ ವೀಡಿಯೊ ವೀಕ್ಷಿಸಿ

ಪ್ರೀತಿ, ಬಾಂಧವ್ಯ, ಕಾಳಜಿ, ಕರುಣೆ ಎಂಬುದು ಕೇವಲ ಮಾನವರಿಗೆ ಮಾತ್ರ ಸೀಮಿತವಾಗಿಲ್ಲ. ಇದು ಪ್ರಾಣಿಗಳಲ್ಲಿಯೂ ಅಗಾಗ್ಗೆ ಕಾಣುತ್ತೇವೆ. ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವವರಿಗೆ ಅಥವಾ ಮತ್ತೊಂದು ಪ್ರಾಣಿ ಅಸಹಾಯಕ ಸ್ಥಿತಿಯಲ್ಲಿದ್ದುದನ್ನು ನೋಡಿದರೆ ಪ್ರಾಣಿಗಳು ತಕ್ಷಣವೇ ನೆರವಿಗೆ ಧಾವಿಸುತ್ತದೆ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ನೋಡಿದ್ದೇವೆ. ಜೀವವನ್ನು ಪಣಕ್ಕಿಟ್ಟು ಅಪಾಯದಲ್ಲಿದ್ದ ಮತ್ತೊಂದು ಪ್ರಾಣಿಯನ್ನು ಕಾಪಾಡುತ್ತವೆ ಇಂಥದ್ದೇ ಮನಕರಗುವ ಒಂದು ಘಟನೆಯಲ್ಲಿ ಬಾವಿಯಂತೆ ಕಾಣುವ ದೊಡ್ಡ ಹೊಂಡದಲ್ಲಿ ಬಿದ್ದು ಒದ್ದಾಡುತ್ತಿದ್ದ ಬೆಕ್ಕಿನ ಮರಿಯನ್ನು ಮಂಗವೊಂದು ಶತಾಯ-ಗತಾಯ ರಕ್ಷಿಸಲು ಪ್ರಯತ್ನಿಸುತ್ತಿರುವ ವೀಡಿಯೊವೊಂದು ಭಾರಿ ವೈರಲ್ ಆಗಿದೆ.
ಮಂಗಗಳು ಬಹುತೇಕ ಸಂದರ್ಭಗಳಲ್ಲಿ ಮನುಷ್ಯರಂತೆ ವರ್ತಿಸುತ್ತವೆ. ಮನುಷ್ಯರಂತೆ ಅವುಗಳು ಕೂಡ ತನ್ನವರ ಮೇಲೆ ಪ್ರೀತಿ, ಕಾಳಜಿ ತೋರುತ್ತವೆ. ಅವು ತೋರುವ ಅದ್ಭುತ ಬುದ್ಧಿವಂತಿಕೆ ಅಚ್ಚರಿ ಮೂಡಿಸುತ್ತವೆ. ಇದೀಗ ವೈರಲ್ ಆದ ದೃಶ್ಯ ಇದಕ್ಕೆ ಸಾಕ್ಷಿಯಾಗಿದೆ. ಬೆಕ್ಕಿನ ಮರಿಯೊಂದು ದೊಡ್ಡ ಪಾಳು ಗುಂಡಿಗೆ ಬಿದ್ದಿದ್ದು, ಅದನ್ನು ಕಂಡ ಕೋತಿ ಬೆಕ್ಕಿನ ರಕ್ಷಣೆಗೆ ಮುಂದಾಗಿದೆ. ಕೋತಿಯು ಅಳದ ಆ ಹೊಂಡಕ್ಕೆ ಜಿಗಿದು, ಬೆಕ್ಕಿನ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಹೊಂಡದಿಂದ ಮೇಲೆ ತರಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಆದರೆ ಅದಕ್ಕೆ ಸಾಧ್ಯವಾಗುತ್ತಿಲ್ಲ. ಆದರೆ ಮಂಗ ಪ್ರಯತ್ನ ಬಿಡುತ್ತಿಲ್ಲ. ಎರಡ್ಮೂರು ಸಲ ಗುಂಡಿಯಿಂದ ಮೇಲೆ ಬಂದು ರಕ್ಷಣೆಗೆ ತನ್ನದೇ ಆದ ತಂತ್ರ ರೂಪಿಸುವ ಕೋತಿ ಬೆಕ್ಕನ್ನು ಪಾರು ಮಾಡುವ ಯಾವ ಪ್ರಯತ್ನ ಬಿಡಲಿಲ್ಲ. ಈ ಮುಗ್ಧ ಜೀವಿಯ ಪ್ರಯತ್ನ ಸಫಲವಾಗದೇ ಿದನ್ನು ನೋಡುತ್ತಿದ್ದ ಹತ್ತಿರದಲ್ಲಿಯೇ ಇದ್ದ ಹುಡುಗಿಯೊಬ್ಬಳು ಸಹಾಯಕ್ಕೆ ಬಂದಿದ್ದಾಳೆ. ಆಕೆ ಈ ಬೆಕ್ಕನ್ನು ಹೊಂಡದಿಂದ ಹೊರಕ್ಕೆ ತೆಗೆದಿದ್ದಾಳೆ. ಬೆಕ್ಕು ಗುಂಡಿಯಿಂದ ಹೊರ ಬಂದ ತಕ್ಷಣ ಕೋತಿಯ ಸಂತಸಕ್ಕೆ ಪಾರವೇ ಇಲ್ಲ. ಅದನ್ನು ರಕ್ಷಿಸಿದ ನಂತರ, ಕೋತಿಯು ಬೆಕ್ಕಿನ ಮರಿಯನ್ನು ಬಿಗಿಯಾಗಿ ತಬ್ಬಿಕೊಳ್ಳುತ್ತದೆ.

https://twitter.com/cctvidiots/status/1647581740830199811?ref_src=twsrc%5Etfw%7Ctwcamp%5Etweetembed%7Ctwterm%5E1647581740830199811%7Ctwgr%5E0aa654a871d35ebbfec9c0be890ecbbb4f144505%7Ctwcon%5Es1_&ref_url=https%3A%2F%2Fnews.abplive.com%2Ftrending%2Fvideo-of-a-monkey-trying-to-save-a-kitten-from-muddy-well-will-melt-your-heart-watch-1596543

ಕೋತಿಯು ಬೆಕ್ಕಿನ ಮರಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು CCTV IDIOTS ಎಂಬ
ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಗ ವೀಡಿಯೊ ಭಾರಿ ವೈರಲ್ ಆಗುತ್ತಿದೆ. ಹಂಚಿಕೊಂಡಾಗಿನಿಂದ, ವೀಡಿಯೊವು ಸುಮಾರು 9 ಮಿಲಿಯನ್ ವೀಕ್ಷಣೆಗಳು, 137.6k ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಗಳಿಸಿದೆ.
ಇದು ನಾನು ನೋಡಿದ ಅತ್ಯಂತ ಸುಂದರವಾದ ವಿಷಯಗಳಲ್ಲಿ ಒಂದಾಗಿದೆ” ಎಂದು ವೀಡಿಯೊವನ್ನು ವೀಕ್ಷಿಸಿದ ನಂತರ ಒಬ್ಬ ಬಳಕೆದಾರರು ಬರೆದಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

1 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement