ಕುಮಟಾ: ದ್ವಿತೀಯ ಪಿಯು ಫಲಿತಾಂಶ; ಮೊದಲ ಬ್ಯಾಚಿನಲ್ಲೇ ಗೋರೆ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜು ೧೦೦ಕ್ಕೆ ನೂರು ಫಲಿತಾಂಶ

 ಕುಮಟಾ : ಈ ವರ್ಷದ ದ್ವಿತೀಯ ಪಿಯಿಸಿ ಪರೀಕ್ಷೆಯಲ್ಲಿ ಶ್ರೀ ಜಿ. ಎನ್. ಹೆಗಡೆ ಟ್ರಸ್ಟ್ (ರಿ) ಪ್ರಾಯೋಜಕತ್ವದಲ್ಲಿ ನಡೆಯುವ ಕುಮಟಾ ತಾಲೂಕು ಗೋರೆಯ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿಗೆ ನೂರಕ್ಕೆ ನೂರು ಫಲಿತಾಂಶ ಬಂದಿದೆ.
ಕಾಲೇಜಿಗೆ ಇದು ಮೊದಲನೇ ಬ್ಯಾಚ್‌ ಆಗಿದ್ದು, ಆದರೂ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ – ವೈಶಾಲಿ ವೆಂಕಟರಮಣ ಭಟ್ಟ ೬೦೦ರಲ್ಲಿ – ೫೮೨ (೯೭%), ಸಮರ್ಥ ಚಂದ್ರಶೇಖರ ಹೆಗಡೆ ೬೦೦ರಲ್ಲಿ – ೫೫೫ (೯೨.೫%), ರಕ್ಷಿತಾ ರಾಮಚಂದ್ರ ಹೆಗಡೆ ೬೦೦ರಲ್ಲಿ – ೫೩೯ (೮೯.೮%) ಗಳಿಸಿದ್ದಾರೆ.
ವಿಜ್ಞಾನ ವಿಭಾಗದಲ್ಲಿ – ಶ್ರೀನಿಧಿ ರಮೇಶ ಹೆಗಡೆ ೬೦೦ಕ್ಕೆ ೫೬೩ (೯೩.೮%) ಕಾಲೇಜಿಗೆ ಪ್ರಥಮ, ಧನ್ಯಾ ಮಹಾದೇವ ದೇವಾಡಿಗ ೬೦೦ಕ್ಕೆ ೫೪೪ (೯೦%) ಅಂಕ ಪಡೆದು ಕಾಲೇಜಿಗೆ ದ್ವಿತೀಯ ಹಾಗೂ ರೋಹನ್‌ ಗಣಪತಿ ಗುನಗಾ ೬೦೦ರಲ್ಲಿಕ್ಕೆ ೫೨೫ (೮೭.೫%) ಅಂಕ ಪಡೆದು ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾದ ಡಾ, ಜಿ. ಜಿ. ಹೆಗಡೆ, ಪ್ರಾಚಾರ್ಯರಾದ ಡಿ. ಎನ್. ಭಟ್ಟ, ಆಡಳಿತ ಮಂಡಳಿಯ ಪದಾಧಿಕಾರಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement