ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ: ಶೇ. 74.64 ಮಂದಿ ಉತ್ತೀರ್ಣ, ಫಲಿತಾಂಶದಲ್ಲಿ ಕರಾವಳಿ ಜಿಲ್ಲೆಗಳ ಮೇಲುಗೈ

ಬೆಂಗಳೂರು: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಇಂದು(ಏಪ್ರಿಲ್ 21) ಬೆಂಗಳೂರಿನ ಮಲ್ಲೇಶ್ವರಂನ ಕಚೇರಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಫಲಿತಾಂಶ ಬಿಡುಗಡೆ ಮಾಡಿದ್ದು, ಶೇ. 74.64ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಾಗೂ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದಿದೆ.
ಕವಾಣಿಜ್ಯ ವಿಭಾಗದಲ್ಲಿ ಅನನ್ಯಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಅವರು 600 ಕ್ಕೆ 600 ಅಂಕಗಳನ್ನು ಪಡೆದಿದ್ದಾರೆ. ಅವರು ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಗಳಿಸುವ ಮೂಲಕ ಶಿವಮೊಗ್ಗದ ಪಿಯು ಕಾಲೇಜಿನ ಡಿ.ಎನ್., ಅನ್ವಿತಾ ಎರಡನೇ ಸ್ಥಾನದಲ್ಲಿದ್ದಾರೆ.
ಕಲಾ ವಿಭಾಗದ ಟಾಪರ್ಸ್
1) ತಬಸುಂ ಶೇಕ್​ – 593 ಅಂಕಗಳು, ಬೆಂಗಳೂರಿನ ಜಯನಗರದಲ್ಲಿರುವ NMKRV ಕಾಲೇಜಿನ ವಿದ್ಯಾರ್ಥಿನಿ.
2) ಕುಶಾನಿಕ್​ – 592 ಅಂಕಗಳು, ಡಡ್ಡಿ ಕರಿಬಸಮ್ಮ- 592 ಅಂಕಗಳು-ಬಳ್ಳಾರಿಯ ಹಿಂದೂ ಇನೋವೇಟಿವ್​ ಕಾಲೇಜಿನಿ ವಿದ್ಯಾರ್ಥಿಗಳು, ಬಳ್ಳಾರಿಯ ಮುತ್ತೂರು ಮಲ್ಲಮ್ಮ, ಬೆಳಗಾವಿಯ ಪ್ರಿಯಾಂಕಾ ಕುಲಕರ್ಣಿ, ವಿಜಯಪುರದ ರಾಹುಲ್​ ಕೂಡ 592 ಅಂಕಗಳನ್ನು ಗಳಿಸುವ ಮೂಲಕ 2ನೇ ರ್ಯಾಂಕ್​ ಪಡೆದುಕೊಂಡಿದ್ದಾರೆ. ಕಲಾ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳು 2ನೇ  ಸ್ಥಾನ ಪಡೆದಿದ್ದಾರೆ. 3)ಸಹನ ಉಲ್ಲಾವಪ್ಪ ಕಡಕೋಳ-ಬೈಲಹೊಂಗಲ, ಬೆಳಗಾವಿ, ಕೆ. ಕೃಷ್ಣ- ಕೂಡ್ಲಿಗಿ, ಬಳ್ಳಾರಿ, ಭಾಗಪ್ಪ,-ಬಸವನಗರ, ಸಿಂದಗಿ, ವಿಜಯಪುರ, ಮಂಜುಶ್ರೀ-ಪುತ್ತೂರು, ದಕ್ಷಿಣ ಕನ್ನಡ

ಕಾಮರ್ಸ್​ ವಿಭಾಗದ ಟಾಪರ್ಸ್​
1) ಅನನ್ಯಾ ಕೆ.ಎ – 600 ಕ್ಕೆ 600 ಅಂಕಗಳನ್ನು – ಪ್ರಥಮ-ದಕ್ಷಿಣ ಕನ್ನಡದ ಆಳ್ವಾ ಕಾಲೇಜಿನ ವಿದ್ಯಾರ್ಥಿನಿ.
2) ವಾಣಿಜ್ಯ ವಿಭಾಗದಲ್ಲಿ 596 ಅಂಕಗಳನ್ನು 9 ವಿದ್ಯಾರ್ಥಿಗಳು ಪಡೆಯುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ಅನ್ವಿತಾ ಡಿ.ಎ, ಬೆಂಗಳೂರಿನ ರವಿ ಕುಮಾರ್​, ಮಂಗಳೂರಿನ ಖುಷಿ, ಮಂಗಳೂರಿನ ಸ್ವಾತಿ, ಬೆಂಗಳೂರಿನ ಧನ್ಯಶ್ರೀ, ಬೆಂಗಳೂರಿನ ವರ್ಷಾ, ಆಳ್ವಾಸ್ ಕಾಲೇಜಿನ ದಿಶಾ ರಾವ್​ , ಬೆಂಗಳೂರಿನ ಇಂಚರಾ ಹಾಗೂ ಗಾನಾ 2ನೇ ರ್ಯಾಂಕ್​ ಪಡೆದಿದ್ದಾರೆ. 600ಕ್ಕೆ 596 ಅಂಕ ಪಡೆದ ಛಾಯಾ ರವಿಕುಮಾರ್​ ಮೂರನೇ ಸ್ಥಾನದಲ್ಲಿದ್ದಾರೆ.
ವಿಜ್ಞಾನ ವಿಭಾಗ ಟಾಪರ್ಸ್‌
ಕೋಲಾರದ ಶ್ರೀನಿವಾಸಪುರದ ಗಂಗೋತ್ರಿ ಪಿಯು ಕಾಲೇಜಿನ ವಿದ್ಯಾರ್ಥಿ ಎಸ್.ಎಂ.ಕೌಶಿಕ್ ಹಾಗೂ ಬೆಂಗಳೂರಿನ ಜಯನಗರದ ಆರ್​. ವಿ. ಪಿಯು ಕಾಲೇಜಿನ ವಿದ್ಯಾರ್ಥಿನಿ ಸುರಭಿ ಎಸ್​ ಇಬ್ಬರೂ 596 ಅಂಕಗಳನ್ನು ಗಳಿಸಿ ಮೊದಲ ಸ್ಥಾನ ಗಳಿಸಿದ್ದಾರೆ.
ಪರೀಕ್ಷೆಗೆ ಕುಳಿತ ಒಟ್ಟು 7,26,195 ವಿದ್ಯಾರ್ಥಿಗಳ ಪೈಕಿ 5,24,209 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ1,34,876 ಶ್ರ( ಶೇಕಡಾ 61.22ರಷ್ಟು) ವಿದ್ಯಾರ್ಥಿ ಪಾಸ್ ಆಗಿದ್ದರೆ, ವಾಣಿಜ್ಯ ವಿಭಾಗದಲ್ಲಿ 1,82,246 (ಶೇಕಡಾ 75.89ರಷ್ಟು) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 2,07,087 (ಶೇಕಡಾ 85.71ರಷ್ಟು) ಉತ್ತೀರ್ಣರಾಗಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ಜಿಲ್ಲೆ 2ನೇ ಸ್ಥಾನ, ಕೊಡಗು ಜಿಲ್ಲೆಗೆ 3ನೇ ಸ್ಥಾನ ಹಾಗೂ ಉತ್ತರ ಕನ್ನಡ ಜಿಲ್ಲೆ  4ನೇ ಸ್ಥಾನ ಪಡೆದಿದೆ. ಯಾದಗಿರಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ.
ಯಾವ ಜಿಲ್ಲೆಗೆ ಯಾವ ಸ್ಥಾನ?
1.ದಕ್ಷಿಣ ಕನ್ನಡ((95.34%)
2.ಉಡುಪಿ(95.24%)
3.ಕೊಡಗು (90.55%)
4.ಉತ್ತರ ಕನ್ನಡ (90%)
5.ವಿಜಯಪುರ (84.69%)
6. ಚಿಕ್ಕಮಗಳೂರು(83.28%)
7. ಹಾಸನ(83.14 %)
8. ಶಿವಮೊಗ್ಗ (83.13%)
9. ಬೆಂಗಳೂರು ಗ್ರಾಮಾಂತರ(83.04%)
10.ಬೆಂಗಳೂರು ದಕ್ಷಿಣ(82.03%)
11.ಬೆಂಗಳೂರು ಉತ್ತರ(82.25%)
12. ಚಾಮರಾಜನಗರ (81.82%)
13.ಮೈಸೂರು (79.89%)
14.ಕೋಲಾರ (79.02%)
15. ಬಾಗಲಕೋಟೆ (78.79%)
16. ಚಿಕ್ಕೋಡಿ (78.76%)
17. ರಾಮನಗರ (78.12%)
18. ಬೀದರ್ (78%)
19. ಚಿಕ್ಕಬಳ್ಳಾಪುರ (77.77 %)
20. ಮಂಡ್ಯ (77.47%)
21. ದಾವಣಗೆರೆ (75.72%)
22. ಕೊಪ್ಪಳ (74.08%)
23. ತುಮಕೂರು (74.05%)
24. ಹಾವೇರಿ (74.13%)
25. ಬೆಳಗಾವಿ (73.98%)
26. ಧಾರವಾಡ (73.54%)
27. ಬಳ್ಳಾರಿ (69.55%)
28. ಚಿತ್ರದುರ್ಗ (69.5%)
29. ಕಲಬುರಗಿ (69.37%)
30 ಗದಗ (66.91%)
31. ರಾಯಚೂರು (66.21%)
32. ಯಾದಗಿರಿ ( 62.98%)

ಪ್ರಮುಖ ಸುದ್ದಿ :-   ಹಿರಿಯ ಪತ್ರಕರ್ತ ರಾಮ ಮನಗೂಳಿ ನಿಧನ

ಉತ್ತಮ ಶ್ರೇಣಿ ಪಡೆದ ವಿದ್ಯಾರ್ಥಿಗಳು…
ಉನ್ನತ ಶ್ರೇಣಿ ಪಡೆದವರು(ಶೇ 85 ಕ್ಕಿಂತ ಹೆಚ್ಚಿನ ಅಂಕ‌ ಪಡೆದವರು)-1,09,509
ಪ್ರಥಮ ದರ್ಜೆ (ಶೇ 60ಕ್ಕಿಂತ ಹೆಚ್ಚು) -2,47,315
ದ್ವೀತಿಯ ದರ್ಜೆ (50ಕ್ಕಿಂತ ಹೆಚ್ಚು ಅಂಕ)-90,014
ತೃತೀಯ ದರ್ಜೆ (ಶೇ 50 ಕ್ಕಿಂತ ಕಡಿಮೆ ಅಂಕ)-77,371
ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
 ಆನ್​ಲೈನ್​ ಮೂಲಕ ಚೆಕ್​ ಮಾಡುವುದು ಹೇಗೆ ಎನ್ನುವುದು ಈ ಕೆಳಗಿನಂತಿದೆ ನೋಡಿ.
ಕರ್ನಾಟಕ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ (karresults.nic.in/) ಭೇಟಿ ನೀಡಿ
ಫಲಿತಾಂಶದ ಲಿಂಕ್ ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
ದ್ವಿತೀಯ ಪಿಯುಸಿ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ
ಫಲಿತಾಂಶದ ಲಿಂಕ್‌ನಲ್ಲಿ ದ್ವಿತೀಯ ಪಿಯುಸಿ ರೋಲ್ ಸಂಖ್ಯೆ ನಮೂದಿಸಿ ಸಬ್ಮಿಟ್‌ ಮಾಡಿ
ನಿಮ್ಮ ಫಲಿತಾಂಶವು ಪರದೆಯ ಮೇಲೆ ಸ್ಕ್ರೀನ್‌ ಮೇಲೆ ಕಾಣಿಸಿಕೊಳ್ಳುತ್ತದೆ
ಸ್ಕ್ರೀನ್‌ ಮೇಲೆ ಕಾಣಿಸಿದ ಫಲಿತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement