ಭಾರತೀಯ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅಮೆರಿಕದ ರಕ್ಷಣಾ ಉಪ ಕಾರ್ಯದರ್ಶಿ

ವಾಷಿಂಗ್ಟನ್: ರಾಷ್ಟ್ರೀಯ ಭದ್ರತಾ ತಜ್ಞರಾದ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಸ್ವಾಧೀನ ಮತ್ತು ಸುಸ್ಥಿರತೆಯ ರಕ್ಷಣಾ ಉಪ ಕಾರ್ಯದರ್ಶಿಯಾಗಿ (Deputy Under Secretary of Defence for Acquisition and Sustainment) ಅಮೆರಿಕ ಸೆನೆಟ್ ದೃಢಪಡಿಸಿದೆ.
ಅಧ್ಯಕ್ಷ ಜೋ ಬೈಡನ್‌ ಅವರು ಪ್ರಸ್ತುತ ರಕ್ಷಣಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ರಾಧಾ ಅಯ್ಯಂಗಾರ್ ಪ್ಲಂಬ್ ಅವರನ್ನು ಜೂನ್ 2022 ರಲ್ಲಿ ಈ ಪ್ರತಿಷ್ಠಿತ ಸ್ಥಾನಕ್ಕೆ ನಾಮನಿರ್ದೇಶನ ಮಾಡಿದ್ದರು.
68-30 ಮತಗಳ ಮೂಲಕ, ಸೆನೆಟ್ ರಾಧಾ ಅಯ್ಯಂಗಾರ್ ಅವರನ್ನು ರಕ್ಷಣಾ ಉಪ ಕಾರ್ಯದರ್ಶಿ ಎಂದು ದೃಢಪಡಿಸಿತು” ಎಂದು ಅಮೆರಿಕ ಸೆನೆಟ್ ಪಿರಿಯಾಡಿಕಲ್ ಪ್ರೆಸ್ ಗ್ಯಾಲರಿ ಮಂಗಳವಾರ ಟ್ವೀಟ್ ಮಾಡಿದೆ.
ಚೀಫ್ ಆಫ್ ಸ್ಟಾಫ್ ಆಗಿ ನೇಮಕಗೊಳ್ಳುವ ಮೊದಲು, ಅವರು ಗೂಗಲ್‌ನಲ್ಲಿ ಟ್ರಸ್ಟ್ ಮತ್ತು ಸುರಕ್ಷತೆಗಾಗಿ ಸಂಶೋಧನೆ ಮತ್ತು ಒಳನೋಟಗಳ (Director of Research and Insights for Trust and Safety) ನಿರ್ದೇಶಕರಾಗಿದ್ದರು ಮತ್ತು ಈ ಹಿಂದೆ ಫೇಸ್‌ಬುಕ್‌ನಲ್ಲಿ ನೀತಿ ವಿಶ್ಲೇಷಣೆಯ ಜಾಗತಿಕ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ರಾಧಾ ಅಯ್ಯಂಗಾರ್ ಅವರು ಈ ಹಿಂದೆ RAND ಕಾರ್ಪೊರೇಶನ್‌ನಲ್ಲಿ ಹಿರಿಯ ಅರ್ಥಶಾಸ್ತ್ರಜ್ಞರಾಗಿದ್ದರು.
ಅವರು ರಕ್ಷಣಾ ಇಲಾಖೆ, ಇಂಧನ ಇಲಾಖೆ ಮತ್ತು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತು ಹಲವಾರು ಹಿರಿಯ ಸ್ಥಾನಗಳನ್ನು ಹೊಂದಿದ್ದರು.ತಮ್ಮ ವೃತ್ತಿಜೀವನದ ಆರಂಭದಲ್ಲಿ, ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು ಮತ್ತು ಹಾರ್ವರ್ಡ್‌ನಲ್ಲಿ ತಮ್ಮ ಪೋಸ್ಟ್‌ ಡಾಕ್ಟರಲ್ ಕೆಲಸ ಮಾಡಿದರು.
ಕಳೆದ ವರ್ಷ ಜೂನ್‌ನಲ್ಲಿ ಶ್ವೇತಭವನವು ಬಿಡುಗಡೆ ಮಾಡಿದ ಅವರ ಪ್ರೊಫೈಲ್ ಪ್ರಕಾರರಾಧಾ ಅಯ್ಯಂಗಾರ್ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ (Ph.D) ಮತ್ತು ಎಂ.ಎಸ್. ಪಡೆದಿದ್ದಾರೆ. ಮತ್ತು ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಎಸ್. ಪದವಿ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಹೆಲಿಕಾಪ್ಟರ್‌ ಅಪಘಾತದ ಮೊದಲಿನ ತಮ್ಮ ಅಧ್ಯಕ್ಷರ ಕೊನೆಯ ವೀಡಿಯೊ ದೃಶ್ಯಗಳನ್ನು ಹಂಚಿಕೊಂಡ ಇರಾನಿನ ಸರ್ಕಾರಿ ಮಾಧ್ಯಮ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement