ವಿಚಾರಣೆಗೆ ಹಾಜರಾಗುವಂತೆ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕಗೆ ಸಿಬಿಐ ಸೂಚನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್‌ ಅವರನ್ನು ವಿಚಾರಣೆಗೆಂದು ನವದೆಹಲಿ ಕಚೇರಿಗೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದೆ.
ಇದೇ ಏಪ್ರಿಲ್ 28ರಂದು ನವದೆಹಲಿಯ ಸಿಬಿಐ ಮುಖ್ಯ ಕಚೇರಿಯಲ್ಲಿ ಸತ್ಯಪಾಲ ಮಲಿಕ್ ವಿಚಾರಣೆಗೆ ಹಾಜರಾಗಬೇಕಿದೆ.
ರಿಲಯನ್ಸ್ ಇನ್‌ಶೂರೆನ್ಸ್ ಮಂಜೂರಾತಿ ರದ್ದು ವಿಚಾರದ ಬಗ್ಗೆ ಅವರು ವಿಚಾರಣೆ ಎದುರಿಸಲಿದ್ದಾರೆ. ಮಲಿಕ್ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಈ ಯೋಜನೆಯನ್ನು ರದ್ದು ಮಾಡಿದ್ದರು.
ಏಪ್ರಿಲ್ 14ರಂದು ಮಲಿಕ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ರಿಲಯನ್ಸ್ ಇನ್‌ಶೂರೆನ್ಸ್ ಯೋಜನೆಯನ್ನು ಮಂಜೂರು ಮಾಡಲು ರಾಮ್ ಮಹಾದೇವ್ ತಮ್ಮ ಮೇಲೆ ಒತ್ತಡ ಹೇರಿರುವ ಬಗ್ಗೆ ಸುದ್ದಿ ವೆಬ್‌ ಸೈಟ್‌ ಒಂದರಲ್ಲಿ ಹೇಳಿಕೊಂಡಿದ್ದರು.
“ರಾಮ್‌ ಮಹಾದೇವ್ ಅವರು ಸ್ವತಃ ಕಾಶ್ಮೀರಕ್ಕೆ ಬಂದು ನನ್ನನ್ನು ಭೇಟಿಯಾಗಿ ರಿಲಯನ್ಸ್ ಇನ್‌ಶೂರೆನ್ಸ್ ಪ್ರಸ್ತಾಪಿಸಿದ ಯೋಜನೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿದ್ದರು. ಯೋಜನೆಯನ್ನು ರದ್ದುಪಡಿಸಲಾಗಿದೆ ಮತ್ತು ಕಾಗದ ಪತ್ರಗಳು ಅಂತಿಮಗೊಂಡಿವೆ ಎಂದು ತಿಳಿಸಿದಾಗ ರಾಮ್ ಮಾಧವ ನಿರಾಶರಾಗಿ ಮರಳಿದ್ದರು” ಅವರು ಹೇಳಿಕೊಂಡಿದ್ದರು.
ಮಲಿಕ್ ಅವರು ಈ ಹೇಳಿಕೆಯನ್ನು ರಾಮ ಮಾಧವ ಅವರು ಅಲ್ಲಗಳೆದಿದ್ದು, ಸತ್ಯಪಾಲ ಮಲಿಕ್‌ ವಿರುದ್ಧ ರಾಮ್ ಮಹಾದೇವ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement