ಟ್ವಿಟರ್‌ಗೆ ಈಗ ಬ್ಲೂ ಸ್ಕೈ ಸವಾಲು : ಆಂಡ್ರಾಯ್ಡ್ ಅಪ್ಲಿಕೇಶನಿನಲ್ಲಿ ಬ್ಲೂ ಸ್ಕೈ ಪ್ರಾರಂಭಿಸಿದ ಜ್ಯಾಕ್ ಡಾರ್ಸೆ…!

ಟ್ವಿಟರ್‌ ಸಹ-ಸಂಸ್ಥಾಪಕ ಮತ್ತು ಮಾಜಿ ಟ್ವಿಟರ್ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ಗೆ ಪರ್ಯಾಯವಾಗಿ ಬ್ಲೂ ಸ್ಕೈ ಎಂಬ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಆಂಡ್ರಾಯ್ಡ್‌ನಲ್ಲಿ ಅನಾವರಣಗೊಳಿಸಿದ್ದಾರೆ ಎಂದು ವರದಿಯಾಗಿದೆ.
ನಾವು AT ಪ್ರೋಟೋಕಾಲ್ ಅನ್ನು ನಿರ್ಮಿಸುತ್ತಿದ್ದೇವೆ, ಇದು ಸಾಮಾಜಿಕ ನೆಟ್‌ವರ್ಕಿಂಗ್‌ಗಾಗಿ ಹೊಸ ಅಡಿಪಾಯವನ್ನು ರಚಿಸುತ್ತಿದೆ, ಇದು ಪ್ಲಾಟ್‌ಫಾರ್ಮ್‌ಗಳಿಂದ ರಚನೆಕಾರರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ, ಡೆವಲಪರ್‌ಗಳಿಗೆ ನಿರ್ಮಿಸುವ ಸ್ವಾತಂತ್ರ್ಯ ಮತ್ತು ಬಳಕೆದಾರರಿಗೆ ಅವರ ಅನುಭವದಲ್ಲಿ ಆಯ್ಕೆಯನ್ನು ನೀಡುತ್ತದೆ, ”ಎಂದು ಬ್ಲೂ ಸ್ಕೈ ವೆಬ್‌ಸೈಟ್ ಹೇಳಿದೆ.
ಎಲಾನ್ ಮಸ್ಕ್ ಅವರು ಟ್ವಿಟರ್ ಸಂಸ್ಥೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ನಂತರ ಟ್ವಿಟರ್‌ನ ಮಾಜಿ ಸಿಇಒ ಜ್ಯಾಕ್ ಡಾರ್ಸೆ ಅವರು ಟ್ವಿಟರ್‌ಗೆ ಪರ್ಯಾಯವಾಗಿ ತಮ್ಮ ಹೊಸ ಬ್ಲೂಸ್ಕೈ ಅಪ್ಲಿಕೇಶನನ್ನು ಐಓಎಸ್ ಬಳಕೆದಾರರಿಗೆ ಪರಿಚಯಿಸಿದ್ದರು. ಇದೀಗ ಜ್ಯಾಕ್ ಡಾರ್ಸೆ ಅವರು ಆಂಡ್ರಾಯ್ಡ್ ಬಳಕೆದಾರರಿಗೆ ಸಹ ಈ ‘ಬ್ಲೂ ಸ್ಕೈ’ ಅಪ್ಲಿಕೇಶನನ್ನು ಪರಿಚಯಿಸಿದ್ದು, ಇದು ಎಲಾನ್ ಮಸ್ಕ್ ಒಡೆತನದ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟರ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ ಎಂದು ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ಇತ್ತೀಚಿನ ವರದಿಯು ತಿಳಿಸಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ಮುಸ್ಲಿಂ ಮತಗಳು ಬೇಕು, ಆದರೆ ಟಿಕೆಟ್‌ ಕೊಡಲ್ಲ : ಕಾಂಗ್ರೆಸ್‌ ಬಗ್ಗೆ ನಸೀಂ ಖಾನ್ ತೀವ್ರ ಅಸಮಾಧಾನ, ಹುದ್ದೆಗೆ ರಾಜೀನಾಮೆ

ಬ್ಲೂ ಸ್ಕೈ ಗುರಿಯು ಯಾವುದೇ ಏಕ ಘಟಕದಿಂದ ನಿಯಂತ್ರಿಸಲ್ಪಡದ ಮುಕ್ತ ಮತ್ತು ವಿಕೇಂದ್ರೀಕೃತ ಸಾಮಾಜಿಕ ಮಾಧ್ಯಮ ಪ್ರೋಟೋಕಾಲ್ ಅನ್ನು ರಚಿಸುವುದು ಎಂದು ಹೇಳಿದೆ. ಬ್ಲೂ ಸ್ಕೈ ಯೋಜನೆಯು ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಬಂದ ಕೆಲವು ಸಮಸ್ಯೆಗಳು ಮತ್ತು ಟೀಕೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ, ಇದರಲ್ಲಿ ವಿಷಯ ಮಾಡರೇಶನ್, ಗೌಪ್ಯತೆ ಮತ್ತು ಡೇಟಾ ಮಾಲೀಕತ್ವದ ಸಮಸ್ಯೆಗಳು ಸೇರಿವೆ ಎಂದು ಹೇಳಲಾಗಿದೆ.
ಬ್ಲೂ ಸ್ಕೈ ಯೋಜನೆಯು ತನ್ನ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸುವಲ್ಲಿ ಎಷ್ಟು ಯಶಸ್ವಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

TechCrunch ಪ್ರಕಾರ, Bluesky ಟ್ರ್ಯಾಕಿಂಗ್ ಇಷ್ಟಗಳು ಅಥವಾ ಬುಕ್‌ಮಾರ್ಕ್‌ಗಳು, ನೇರ ಸಂಭಾಷಣೆಗಳು, ಟ್ವೀಟ್‌ಗಳನ್ನು ಸಂಪಾದಿಸುವುದು, ಉಲ್ಲೇಖ-ಟ್ವೀಟಿಂಗ್ ಅಥವಾ ಪ್ರಾರಂಭದಲ್ಲಿ ಟ್ವಟರಿನಲ್ಲಿ ಪ್ರವೇಶಿಸಬಹುದಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವಂತಹ ಮೂಲಭೂತ ಸಾಮರ್ಥ್ಯಗಳನ್ನು ಒಳಗೊಂಡಿಲ್ಲ ಎಂದು ಹೇಳಲಾಗಿದೆ. ಅಪ್ಲಿಕೇಶನ್‌ಗೆ ಬೇಡಿಕೆ ಹೆಚ್ಚುತ್ತಿದೆ ಮತ್ತು ಪ್ರಸ್ತುತ 20,000 ಸಕ್ರಿಯ ಬಳಕೆದಾರರನ್ನು ಹೊಂದಿದೆ.
ಆದಾಗ್ಯೂ, ಅಪ್ಲಿಕೇಶನ್ ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಕಾರಣ, ಇನ್ವೈಟ್ ಕೋಡ್‌ ಬಳಸಿ ಮಾತ್ರವೇ ಈ ಆಪ್‌ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು ಎಂದು ಹೇಳಿದೆ. ಇಷ್ಟೇ ಅಲ್ಲದೇ, “ನಾವು ಎಟಿ ಪ್ರೋಟೋಕಾಲ್ ನಿರ್ಮಿಸುತ್ತಿದ್ದೇವೆ ಮತ್ತು ಬಳಕೆದಾರರಿಗೆ ಅವರ ಅನುಭವದಲ್ಲಿ ಆಯ್ಕೆಯನ್ನು ನೀಡುತ್ತೇವೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement