ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಐಎಎಫ್ ವಿಮಾನಗಳು, ನೌಕಾಪಡೆಯ ಹಡಗು ಸನ್ನದ್ಧ : ಸರ್ಕಾರ

ನವದೆಹಲಿ : ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿದ್ದು, ಎರಡು C-130s ವಿಮಾನಗಳು ಮತ್ತು ನೌಕಾಪಡೆಯ ಹಡಗು ಐಎಸ್‌ಎಸ್‌ (INS) ಸುಮೇಧಾ ಸ್ಟ್ಯಾಂಡ್‌ ಬೈನಲ್ಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಭಾನುವಾರ ತಿಳಿಸಿದೆ.
ಸಚಿವಾಲಯವು ತನ್ನ ಇತ್ತೀಚಿನ ಹೇಳಿಕೆಯಲ್ಲಿ ಭಾರತವು ಸಂಕೀರ್ಣ ಭದ್ರತಾ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದೆ ಮತ್ತು ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ನಿಕಟವಾಗಿ ಸಮನ್ವಯ ಸಾಧಿಸುತ್ತಿದೆ ಎಂದು ಹೇಳಿದೆ.
ನಮ್ಮ ಸಿದ್ಧತೆಗಳ ಭಾಗವಾಗಿ, ಮತ್ತು ವೇಗವಾಗಿ ಕರೆತರುವ ಸಲುವಾಗಿ, ಭಾರತ ಸರ್ಕಾರವು ಬಹು ಆಯ್ಕೆಗಳನ್ನು ಅನುಸರಿಸುತ್ತಿದೆ. ಎರಡು ಭಾರತೀಯ ವಾಯುಪಡೆಯ C-130J ಪ್ರಸ್ತುತ ಜೆಡ್ಡಾದಲ್ಲಿ ಸ್ಟ್ಯಾಂಡ್‌ ಬೈ ಸ್ಥಾನದಲ್ಲಿದೆ. ಮತ್ತು, ಐಎನ್‌ಎಸ್‌ (INS) ಸುಮೇಧಾ ಪೋರ್ಟ್ ಸುಡಾನ್ ತಲುಪಿದೆ” ಎಂದು ಎಂಇಎ (MEA) ಹೇಳಿದೆ. .
ಸುಡಾನ್ ಅಧಿಕಾರಿಗಳ ಹೊರತಾಗಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸುಡಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿಶ್ವಸಂಸ್ಥೆ, ಸೌದಿ ಅರೇಬಿಯಾ, ಯುಎಇ, ಈಜಿಪ್ಟ್ ಮತ್ತು ಅಮೆರಿಕ ಇತರರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ” ಎಂದು ಅದು ಹೇಳಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಮೈಸೂರು: ಭೀಕರ ರಸ್ತೆ ಅಪಘಾತದಲ್ಲಿ ಮಗು ಸೇರಿ 10 ಮಂದಿ ಸಾವು

ಸುಡಾನ್‌ನಲ್ಲಿ, ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ದೇಶಾದ್ಯಂತ ಆತಂರಿಕ ಯುದ್ಧ ಆರಂಭವಾಗಿದೆ. ಸರ್ವಾಧಿಕಾರಿ ಒಮರ್ ಅಲ್-ಬಶೀರ್ ಪತನದ ನಾಲ್ಕು ವರ್ಷಗಳ ನಂತರ ಮತ್ತು ಮಿಲಿಟರಿ ದಂಗೆಯ ಎರಡು ವರ್ಷಗಳ ನಂತರ ಹೊಸ ನಾಗರಿಕ ಸರ್ಕಾರವನ್ನು ಪುನಃ ಸ್ಥಾಪಿಸುವ ಅಂತಾರಾಷ್ಟ್ರೀಯ ಬೆಂಬಲಿತ ಯೋಜನೆಗೆ ಭಿನ್ನಾಭಿಪ್ರಾಯದಿಂದ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (RSF) ನಡುವೆ ಸಂಘರ್ಷ ಆರಂಭವಾಗಿದೆ . ಎರಡೂ ಕಡೆಯವರು ಪರಸ್ಪರರ ವಿರುದ್ಧ ನಾಗರಿಕ ಸರ್ಕಾರದ ಸ್ಥಾಪನೆಯನ್ನು ತಡೆಯುತ್ತಿದ್ದಾರೆ ಎಂದು ಆರೋಪಿಸುತ್ತಾರೆ.

ಅಧಿಕೃತ ಮಾಹಿತಿಯ ಪ್ರಕಾರ, ಸುಡಾನ್‌ನಲ್ಲಿರುವ ಭಾರತೀಯರ ಸಂಖ್ಯೆ ಸುಮಾರು 4,000 ಆಗಿದೆ.
ಎಲ್ಲ ವಿದೇಶಿ ವಿಮಾನಗಳಿಗೆ ಪ್ರಸ್ತುತ ಸುಡಾನ್ ವಾಯುಪ್ರದೇಶವನ್ನು ಮುಚ್ಚಲಾಗಿದೆ. ಭೂಪ್ರದೇಶದ ಚಲನೆಯು ಅಪಾಯದ ಸವಾಲುಗಳನ್ನು ಹೊಂದಿದೆ” ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
“ನಮ್ಮ ರಾಯಭಾರ ಕಚೇರಿಯು ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಮತ್ತು ಸುರಕ್ಷಿತ ಸ್ಥಳಾಂತರದ ಕಾರ್ಯಸಾಧ್ಯತೆ ಮತ್ತು ಅನಗತ್ಯ ಅಪಾಯವನ್ನು ತಪ್ಪಿಸುವ ಅಗತ್ಯತೆಯ ಬಗ್ಗೆ ಅವರಿಗೆ ಸಲಹೆ ನೀಡುತ್ತಿದೆ. ಇದು ಖಾರ್ಟೂಮ್ ನಗರದಿಂದ ಸಂಭವನೀಯ ನಿರ್ಗಮನ ಸೇರಿದಂತೆ ಸಾಧ್ಯವಿರುವ ಎಲ್ಲ ಸಹಾಯವನ್ನು ಸಹ ಸಂಘಟಿಸುತ್ತಿದೆ.

ಇಂದಿನ ಪ್ರಮುಖ ಸುದ್ದಿ :-   ಅಮಿತ್ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಬಂದೂಕು ಸಮೇತ 25 ಮಂದಿ ಬಂಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement