ಮುಂಬೈ: ನಾಯಿ, ಟ್ರೋಫಿ ಮತ್ತು ಡ್ರಗ್ಸ್ ಒಳಗೊಂಡ ಪಿತೂರಿ ಯುಎಇಯಲ್ಲಿ ಬಾಲಿವುಡ್ ನಟಿಯೊಬ್ಬರನ್ನು ಜೈಲಿಗೆ ತಳ್ಳಿದೆ. ಆಕೆಯ ಬಳಿಯಿದ್ದ ಟ್ರೋಫಿಯಲ್ಲಿ ಡ್ರಗ್ಸ್ ಅಡಗಿಸಿರುವುದು ಪತ್ತೆಯಾದ ನಂತರ ನಟಿ ಕ್ರಿಸಾನ್ ಪೆರೇರಾ ಅವರನ್ನು ಶಾರ್ಜಾದಲ್ಲಿ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಬಂಧಿಸಿದ್ದರು.
ಪ್ರಸ್ತುತ ಶಾರ್ಜಾ ಸೆಂಟ್ರಲ್ ಜೈಲಿನಲ್ಲಿರುವ ನಟಿ ಕ್ರಿಸಾನ್ ಪಿರೇರಾ ಅವರನ್ನು ಏಪ್ರಿಲ್ 1 ರಂದು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಮಾದಕವಸ್ತುಗಳನ್ನು ಬಚ್ಚಿಟ್ಟಿದ್ದ ಸ್ಮರಣಿಕೆಯನ್ನು ಕೊಂಡೊಯ್ದಿದ್ದಕ್ಕಾಗಿ ಬಂಧಿಸಲಾಯಿತು. ಆದರೆ ಮುಂಬೈ ಕ್ರೈಂ ಬ್ರಾಂಚ್ ತನಿಖೆಯ ನಂತರ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ನಾಯಿಯೊಂದರ ಜಗಳಕ್ಕೆ ಪ್ರತೀಕಾರವಾಗಿ ನಟಿಯನ್ನು ಸಂಚು ಮಾಡಿ ಇದರಲ್ಲಿ ಸಿಲುಕಿಸಲಾಗಿದೆ ಎಂದು ಪತ್ತೆ ಮಾಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಆಂಟನಿ ಪೌಲ್ ಮತ್ತು ರವಿ ಎಂಬ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಆಂಟನಿ ಬಂಧನವಾದ ಒಂದು ದಿನದ ನಂತರ ಇಂದು, ಮಂಗಳವಾರ ರವಿಯನ್ನು ಬಂಧಿಸಲಾಗಿದೆ.
ಮುಂಬೈನ ಉಪನಗರವಾದ ಮೀರಾ ರೋಡ್‌ನ ನಿವಾಸಿಗಳು, ಡ್ರಗ್ಸ್ ಜೊತೆ ಸಿಕ್ಕಿಬಿದ್ದ ನಂತರ ಕ್ರಿಸಾನ್ ಪಿರೇರಾ ಅವರನ್ನುಸಿಲುಕಿಸಿರುವ ಸಂಚು ಬೆಳಕಿಗೆ ಬಂದಿದೆ.
ಅಪರಾಧ ವಿಭಾಗದ ಪ್ರಾಥಮಿಕ ತನಿಖೆಯಿಂದ ಆರೋಪಿ ಆಂಟನಿ ಸಹೋದರಿ ನಟಿ ಕ್ರಿಸಾನ್ ತಾಯಿಯೊಂದಿಗೆ ನಾಯಿ ಸಲುವಾಗಿ ಜಗಳವಾಡಿದ್ದರು ಎಂದು ತಿಳಿದುಬಂದಿದೆ. ಇಬ್ಬರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ, ನಟಿ ಕ್ರಿಸಾನ್ ಪಿರೇರಾ ತಾಯಿ ಒಮ್ಮೆ ಆಂಟನಿಯೊಂದಿಗೂ ನಾಯಿಯ ವಿಷಯದಲ್ಲಿ ಜಗಳವಾಡಿದ್ದಳು ಎನ್ನಲಾಗಿದೆ. ಇದೇ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿ ನಟಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಆಂಥೋನಿ ಪೌಲ್ ಟ್ಯಾಲೆಂಟ್ ಕನ್ಸಲ್ಟೆಂಟ್‌ನಂತೆ ನಟಿಸಿದ ರವಿ ಎಂಬಾತನ ಮೂಲಕ ನಟಿಯನ್ನು ಸಂಪರ್ಕಿಸಿದ್ದ ಮತ್ತು ಶಾರ್ಜಾದಲ್ಲಿ ವೆಬ್-ಸರಣಿಯ ಆಡಿಷನ್ ಬಗ್ಗೆ ಕತೆ ಕಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಡ್ರಗ್ಸ್ ಬಚ್ಚಿಟ್ಟಿದ್ದ ಟ್ರೋಫಿಯನ್ನು ಒಯ್ಯುವಂತೆ ನಟಿಗೆ ಹೇಳಿದ್ದಾನೆ. ಸ್ಮರಣಿಕೆಯು ಅತ್ಯಗತ್ಯ ಎಂದು ಆಕೆಗೆ ತಿಳಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇವರಿಬ್ಬರು ಇದೇ ಮಾದರಿಯಲ್ಲಿ ಈ ಮೊದಲು ಡಿಜೆ – ಕ್ಲೇಟನ್ ರೋಡ್ರಿಗಸ್ ಅವರಿಗೂ ಮೋಸ ಮಾಡಿದ್ದರು ಎಂದು ಆರೋಪಿಸಲಾಗಿದೆ. ಅವರು ಆತನಿಗೆ ಒಂದು ಕೇಕ್ ನೀಡಿದ್ದರು, ಅದರಲ್ಲಿ ಮಾದಕವಸ್ತುಗಳನ್ನು ಮುಚ್ಚಿಟ್ಟು ಪ್ರಕರಣದಲ್ಲಿ ಆತನನ್ನು ಸಿಲುಕಿಸಲಾಗಿತ್ತು.
ಈ ಪ್ರಕರಣದಲ್ಲಿಯೂ ಕ್ರಿಸಾನ್ ಪಿರೇರಾ ಅವರ ವಿರುದ್ಧ ಸಂಚು ರೂಪಿಸಿ ಸಿಲುಕಿಸಲಾಗಿದೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ ಮತ್ತು ಮುಂಬೈ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಟಿಯ ತಾಯಿ ಪ್ರೀಮಿಳಾ ಪೆರೇರಾ ವಿರುದ್ಧ ಸೇಡಿಗಾಗಿ ಆಕೆಯ ಮಗಳು ಕ್ರಿಸಾನ್ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಪೌಲ್ ಯೋಜನೆ ರೂಪಿಸಿದ್ದರು ಎಂದು ಪೊಲೀಸ್ ಅಧಿಕಾರಿಗಳಿಂದ ತಿಳಿದುಬಂದಿದೆ.
ಪೌಲ್, ತನ್ನ ಸಹಚರನೊಂದಿಗೆ ಸೇರಿಕೊಂಡು, ನಟಿ ಕ್ರಿಸಾನ್ ಅವರನ್ನು ಅಂತಾರಾಷ್ಟ್ರೀಯ ವೆಬ್ ಸರಣಿಯ ಉದ್ದೇಶಿತ ಆಡಿಷನ್‌ಗಾಗಿ ಯುಎಇಗೆ ಕಳುಹಿಸಲು ಸಂಚು ರೂಪಿಸಿದ್ದಾನೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ, ಅವರು ಡ್ರಗ್ಸ್ ಅಡಗಿಸಿಟ್ಟಿದ್ದ ಟ್ರೋಫಿಯನ್ನು ಆಕೆಗೆ ನೀಡಿದ್ದರು. ಈ ಬಗ್ಗೆ ಗೊತ್ತಿಲ್ಲದ ಆಕೆ ಅನ್ನು ಒಯ್ದಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೌಲ್ ಇತರ ನಾಲ್ವರನ್ನು ಇದೇ ರೀತಿಯಲ್ಲಿ ಪ್ರಕರಣದಲ್ಲಿ ಸಿಲುಕಿಸಿದ್ದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಮುಂಬೈನ ಮಲಾಡ್ ಮತ್ತು ಬೊರಿವಲಿ ಪ್ರದೇಶಗಳಲ್ಲಿ ಪೌಲ್ ಬೇಕರಿ ನಡೆಸುತ್ತಿದ್ದಾನೆ. ಕ್ರಿಸಾನ್ ಅವರ ತಾಯಿ ಕೂಡ ವಾಸಿಸುವ ಅದೇ ಕಟ್ಟಡದಲ್ಲಿ ಪೌಲ್ ಸಹೋದರಿಯೊಬ್ಬರು ಉಳಿದುಕೊಂಡಿದ್ದಾರೆ. 2020 ರಲ್ಲಿ ಕೋವಿಡ್ -19 ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ, ಪೌಲ್ ತನ್ನ ಸಹೋದರಿಯನ್ನು ನೋಡಲು ಹೋಗಿದ್ದಾಗ ಪ್ರೀಮಿಳಾ ಅವರ ಸಾಕು ನಾಯಿ ಆತನ ಮೇಲೆ ದಾಳಿ ಮಾಡಲು ಪ್ರಯತ್ನಿಸಿತ್ತು. ನಂತರ ನಾಯಿ ಹೊಡೆಯಲು ಈತ ಕುರ್ಚಿಯನ್ನು ಎತ್ತಿಕೊಂಡಿದ್ದ. ಈ ವಿಚಾರವಾಗಿ ನಟಿಯ ತಾಯಿ ಹಾಗೂ ಈತನಿಗೆ ಜಗಳವಾಗಿತ್ತು. ಈ ಘಟನೆಗೆ ಸೇಡು ತೀರಿಸಿಕೊಳ್ಳಲು ಪೌಲ್ ನಟಿ ಕ್ರಿಸಾನ್ ಅವರನ್ನು ಡ್ರಗ್ ಪ್ರಕರಣದಲ್ಲಿ ಸಿಲುಕಿಸುವ ಯೋಜನೆ ರೂಪಿಸಿದ್ದ ಎನ್ನಲಾಗಿದೆ.
ಯೋಜನೆಯ ಕಾರ್ಯಗತಗೊಳಿಸುವಿಕೆ
ರಿಯಲ್ ಎಸ್ಟೇಟ್ ಸಂಬಂಧಿತ ಕೆಲಸದ ಬಗ್ಗೆ ಪ್ರೀಮಿಳಾ ಮೊಬೈಲ್ ಸಂಖ್ಯೆಗೆ SMS ಬಂದಾಗ ಯೋಜನೆ ಕಾರ್ಯಗೊಳಿಸುವಿಕೆಗೆ ಚಾಲನೆ ದೊರೆಯಿತು. ಪ್ರೀಮಿಳಾ ಆ ಎಸ್‌ಎಂಸ್ ನಲ್ಲಿದ್ದ ನಂಬರ್‌ಗೆ ಸಂಪರ್ಕಿಸಿದ್ದಾಳೆ. ಅದು ಸಂಚಿನ ಭಾಗವಾಗಿದ್ದ ಪೌಲ್ ಸಹಚರ ರವಿ ನಂಬರ್ ಆಗಿತ್ತು. ಪ್ರೀಮೀಳಾ ಆ ನಂಬರ್ ಗೆ ಕರೆ ಮಾಡಿದಾಗ ರವಿ ಸಂಪರ್ಕಕ್ಕೆ ಬಂದಿದ್ದಾಳೆ. ಆತ ಅವಳಿಗೆ ತನ್ನ ಕಚೇರಿಯಲ್ಲಿ ಭೇಟಿಯಾಗುವಂತೆ ಹೇಳಿದ್ದಾನೆ. ಭೇಟಿ ಸಂದರ್ಭದಲ್ಲಿ ರವಿ ಆಕೆಯ ಕುಟುಂಬದ ಬಗ್ಗೆ ಕೇಳಿದ್ದಾನೆ ಮತ್ತು ಆಕೆ ತಮ್ಮ ಮಗಳು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಹೇಳಿದ್ದಾಳೆ. ಆಗ ರವಿ ತಾನು ‘ಟ್ಯಾಲೆಂಟ್ ಪೂಲ್’ ಹೆಸರಿನ ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಹೊಂದಿದ್ದೇನೆ ಮತ್ತು ಅದು ಅಂತಾರಾಷ್ಟ್ರೀಯ ಪ್ರದರ್ಶನಕ್ಕಾಗಿ ನಟಿಯೊಬ್ಬಳನ್ನು ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾನೆ.
ನಂತರ ಹೋಟೆಲ್ ಗ್ರ್ಯಾಂಡ್ ಹಯಾತ್‌ನಲ್ಲಿ ಈತ ಮತ್ತು ನಟಿ ಕ್ರಿಸಾನ್ ಭೇಟಿ ನಿಗದಿಪಡಿಸಲಾಯಿತು. ಮತ್ತು ಭೇಟಿ ನಂತರ ಕ್ರಿಸಾನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಯಿತು. ಆಡಿಷನ್‌ಗಾಗಿ ದುಬೈಗೆ ಹೋಗಬೇಕು ಎಂದು ಆಕೆಗೆ ಸೂಚಿಸಲಾಯಿತು.
ಏಪ್ರಿಲ್ 1 ರಂದು, ಕ್ರಿಸಾನ್ ಅವರಿಗೆ ನಿಮ್ಮ ಟಿಕೆಟ್‌ಗಳನ್ನು ಶಾರ್ಜಾಕ್ಕೆ ಕಾಯ್ದಿರಿಸಲಾಗಿದೆ ಮತ್ತು ಶಾರ್ಜಾದಿಂದ ದುಬೈಗೆ ಪ್ರಯಾಣ ಏರ್ಪಡಿಸಲಾಗಿದೆ ಎಂದು ರವಿ ತಿಳಿಸಿದ್ದಾನೆ. ಹಿಲ್ಟನ್ ಹೋಟೆಲ್‌ನಲ್ಲಿ ಆಕೆಯ ವಾಸ್ತವ್ಯವನ್ನು ಸಹ ಬುಕಿಂಗ್ ಮಾಡಲಾಗಿದೆ ಎಂದು ತಿಳಿಸಲಾಯಿತು. ನಟಿ ಕ್ರಿಸಾನ್ ಶಾರ್ಜಾಗೆ ಹೊರಡುವ ಮೊದಲು, ರವಿ ಡ್ರಗ್ಸ್ ಇರುವ ಟ್ರೋಫಿಯೊಂದನ್ನು ಕೊಟ್ಟು ಅದನ್ನು ಅಲ್ಲಿಗೆ ಒಯ್ಯುವಂತೆ ಸೂಚಿಸಿದ್ದಾನೆ. ಮತ್ತು ಆಡಿಷನ್‌ಗೆ ಇದು ಅಗತ್ಯವಿದೆ ಎಂದು ಹೇಳಿದ್ದಾನೆ. ಆತನ ನಂಬಿದ ನಟಿ ಕ್ರಿಸಾನ್ ತನ್ನೊಂದಿಗೆ ಟ್ರೋಫಿಯನ್ನು ಒಯಿದ್ದಾರೆ.
ಕ್ರಿಸಾನ್ ಶಾರ್ಜಾವನ್ನು ತಲುಪಿದಾಗ, ತನ್ನ ಬುಕಿಂಗ್ ಖಚಿತಪಡಿಸಿಕೊಳ್ಳಲು ಅಲ್ಲಿನ ಹೋಟೆಲ್ ಸಂಪರ್ಕಿಸಿ ಪರಿಳಿಸಿದಾಗ ಹೋಟೆಲ್‌ನ ಬುಕ್ಕಿಂಗ್‌ಗಳ ದಾಖಲೆಯಲ್ಲಿ ಅವರ ಹೆಸರು ನಮೂದಾಗಿಲ್ಲ ಎಂದು ಗೊತ್ತಾಗಿದೆ. ನಂತರ ಆಕೆ ಟ್ರೋಫಿಯೊಂದಿಗೆ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಟ್ರೋಫಿಯೊಳಗೆ ಡ್ರಗ್ಸ್ ಪತ್ತೆಯಾಗಿದ್ದು ಆಕೆಯನ್ನು ಬಂಧಿಸಿ ನಂತರ ಬಂಧಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ