ಮಂಡ್ಯ : ಕಾಲುವೆಗೆ ಈಜಲು ಹೋಗಿದ್ದ ಐವರು ನೀರು ಪಾಲು

ಮಂಡ್ಯ: ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ಸಾವಿಗೀಡಾದ ದಾರುಣ ಘಟನೆ ಮಂಡ್ಯ ಜಿಲ್ಲೆಯ ದೊಡ್ಡಕೊತ್ತಗೆರೆ ಕಾಲುವೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಂಡ್ಯ ತಾಲೂಕಿನ ದೊಡ್ಡಕೊತ್ತಗೆರೆ ಬಳಿ ಈ ಘಟನೆ ನಡೆದಿದ್ದು, ನೀರಪಾಲಾದವರು ಬೆಂಗಳೂರು ನೀಲಸಂದ್ರ ಮೂಲದವರು ಎನ್ನಲಾಗಿದೆ. ರಂಜಾನ್ ಬಳಿಕ ಬಸರಾಳು ಸಮೀಪದ ಹಲ್ಲೇಗೆರೆ ಗ್ರಾಮದ ನೆಂಟರ ಮನೆಗೆ ಆಗಮಿಸಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಕ್ಕಳಿಗೆ ಬೇಸಿಗೆ ಶಾಲೆ ಮತ್ತು ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ನಂಟರ ಮನೆಗೆ ಆಗಮಿಸಿದ್ದರು. ಈ ವೇಳೆ ಎಲ್ಲರೂ ಎರಡು ಕಾರಿನಲ್ಲಿ ಬಸರಾಳು ಬಳಿಯ ದೊಡ್ಡಕೊತ್ತಗೆರೆಯ ನಾಲೆಗೆ ಈಜಲು ಹೋಗಿದ್ದರು ನೀರಿನ ಹರಿವಿನ ರಭಸಕ್ಕೆ ದೇಹಗಳು ಕೊಚ್ಚಿಕೊಂಡು ಹೋಗಿರಬಹುದೆಂದು ಭಾವಿಸಲಾಗಿದೆ. ನೀರು ಪಾಲಾದವರನ್ನು ಬೆಂಗಳೂರಿನ ನೀಲಸಂದ್ರದ ಹನಿಸಾ ಬೇಗಂ (34), ಮಹತಾಬ್ (10), ತಸ್ಸ್ಮೀಯಾ (22) ಅಫೀಕಾ(22), ಅಶ್ರಕ್(28) ಎಂದು ಗುರುತಿಸಲಾಗಿದೆ. ಮೂವರ ಶವಗಳನ್ನು ಹೊರಕ್ಕೆ ತೆಗೆದಿದ್ದು, ಇನ್ನಿಬ್ಬರಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಹುಟುಕಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ವೇಳೆ 10 ವರ್ಷದ ಮಗು ಮೆಹತಾಬ್ ನೀರಿನಲ್ಲಿ ಸಿಲುಕಿದ್ದು, ಆಕೆಯನ್ನು ರಕ್ಷಿಸಲು ಹೋದ ಉಳಿದ ನಾಲ್ಕು ಮಂದಿಯೂ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ನೀರಿನ ಹರಿವಿನ ರಭಸಕ್ಕೆ ನೀರು ಪಾಲಾಗಿರಬಹುದು ಎಂದು ಶಂಕಿಸಲಾಗಿದೆ. ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement