ಕಲಹ ಪೀಡಿತ ಸುಡಾನಿನಿಂದ ಸ್ಥಳಾಂತರಗೊಂಡು ಮುಂಬೈಗೆ ಬಂದಿಳಿದ ಭಾರತೀಯರ 2ನೇ ಬ್ಯಾಚ್‌

ನವದೆಹಲಿ : ಕಲಹ ಪೀಡಿತ ಸುಡಾನ್‌ನಿಂದ 246 ಭಾರತೀಯರನ್ನು ಸ್ಥಳಾಂತರಿಸಿದ ಭಾರತೀಯ ವಾಯುಪಡೆಯ ವಿಮಾನ ಗುರುವಾರ ಮುಂಬೈಗೆ ಬಂದಿಳಿಯಿತು. ಇಂದು ಗುರುವಾರ (ಏಪ್ರಿಲ್‌ 27) ಬೆಳಿಗ್ಗೆ 11 ಗಂಟೆಗೆ ಜೆಡ್ಡಾದಿಂದ ಟೇಕಾಫ್ ಆದ ವಿಮಾನವು ಮಧ್ಯಾಹ್ನ 3:30 ರ ಸುಮಾರಿಗೆ ಮುಂಬೈಗೆ ಬಂದಿಳಿಯಿತು.
ಸೇನೆ ಮತ್ತು ಅರೆಸೇನಾ ಪಡೆಗಳ ನಡುವೆ ಮಾರಣಾಂತಿಕ ಯುದ್ಧಕ್ಕೆ ಸಾಕ್ಷಿಯಾಗಿರುವ ಸುಡಾನ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಕಲಹದಿಂದ ಹಾನಿಗೊಳಗಾದ ಆಫ್ರಿಕನ್ ರಾಷ್ಟ್ರದಿಂದ ತನ್ನ ನಾಗರಿಕರನ್ನು ಸ್ಥಳಾಂತರಿಸಲು ಭಾರತವು ಪ್ರಯತ್ನಗಳನ್ನು ಹೆಚ್ಚಿಸಿದೆ.
‘ಆಪರೇಷನ್ ಕಾವೇರಿ’ ತೆರವು ಕಾರ್ಯಾಚರಣೆಯ ಅಡಿಯಲ್ಲಿ, ಸರ್ಕಾರವು ಅಲ್ಲಿ ಸಿಲುಕಿದ ಭಾರತೀಯರನ್ನು ಸುಡಾನ್‌ನಿಂದ ಸ್ಥಳಾಂತರಿಸಿ ಸೌದಿ ಅರೇಬಿಯಾದ ಜೆಡ್ಡಾ ನಗರಕ್ಕೆ ಕರೆದೊಯ್ಯುತ್ತಿದೆ, ಅಲ್ಲಿಂದ ಅವರು ಭಾರತಕ್ಕೆ ಮರಳುತ್ತಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಬುಧವಾರ ರಾತ್ರಿ, ಸುಡಾನ್‌ನಿಂದ ರಕ್ಷಿಸಲ್ಪಟ್ಟ 360 ಭಾರತೀಯರನ್ನು ಹೊತ್ತ ವಾಣಿಜ್ಯ ವಿಮಾನವು ನವದೆಹಲಿಗೆ ಬಂದಿಳಿದಿದೆ. ಇಂದು ಗುರುವಾರ, ಸುಡಾನ್‌ನಿಂದ ಸ್ಥಳಾಂತರಿಸಲಾದ 246 ಭಾರತೀಯ ಪ್ರಜೆಗಳನ್ನು ಹೊತ್ತ ಎರಡನೇ ವಿಮಾನ ಮುಂಬೈಗೆ ಬಂದಿಳಿಯಿತು.
ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಗುರುವಾರ ನಡೆಯುತ್ತಿರುವ ‘ಆಪರೇಷನ್ ಕಾವೇರಿ’ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದರು. ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯು ತುಂಬಾ ಸಂಕೀರ್ಣವಾಗಿದೆ, ಹೆಚ್ಚು ಅಸ್ಥಿರವಾಗಿದೆ ಮತ್ತು ಅನಿರೀಕ್ಷಿತವಾಗಿದೆ ಎಂದು ಕ್ವಾತ್ರಾ ಹೇಳಿದರು, ಆ ದೇಶದಲ್ಲಿ ಸಿಲುಕಿರುವ ಪ್ರತಿಯೊಬ್ಬ ಭಾರತೀಯನನ್ನು ಅಲ್ಲಿಂದ ಹೊರತರುವುದು ಭಾರತದ ಪ್ರಥಮ ಆದ್ಯತೆಯಾಗಿದೆ ಎಂದು ಹೇಳಿದರು.
ಸರಿಸುಮಾರು 1700 ರಿಂದ 2000 ಭಾರತೀಯ ಪ್ರಜೆಗಳನ್ನು ಸುಡಾನಿನ ಸಂಘರ್ಷದ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಮತ್ತು ರಾಜಧಾನಿ ಖಾರ್ಟೂಮ್‌ನಿಂದ ಪೋರ್ಟ್ ಸುಡಾನ್‌ಗೆ ಹೋಗುತ್ತಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   1 ಲಕ್ಷ ಬೆಲೆಯ ಮೊಬೈಲ್ ಅಣೆಕಟ್ಟೆ ನೀರಿನಲ್ಲಿ ಬಿತ್ತು: 21 ಲಕ್ಷ ಲೀಟರ್ ನೀರು ಹೊರಬಿಟ್ಟು ತನ್ನ ಮೊಬೈಲ್ ಹುಡುಕಿಸಿದ ಅಧಿಕಾರಿ...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement