ಗಿಫ್ಟ್‌ ಅಂದ್ರೆ ಇದಪ್ಪಾ..: ತನ್ನ ಆಪ್ತ ಸ್ನೇಹಿತನಿಗೆ 1500 ಕೋಟಿ ಮೌಲ್ಯದ ಆಸ್ತಿಯನ್ನೇ ಉಡುಗೊರೆ ನೀಡಿದ ರಿಲಯನ್ಸ್‌ ಮುಖ್ಯಸ್ಥ ಮುಖೇಶ ಅಂಬಾನಿ ; ಯಾರು ಈ ಆಪ್ತ ಸೇಹಿತ..?

ಮುಂಬೈ: ಮುಖೇಶ್ ಅಂಬಾನಿ, ಭಾರತದ ವ್ಯಾಪಾರ ಜಗತ್ತಿನ ಐಕಾನ್‌, ದೇಶದ ಅತ್ಯಮೂಲ್ಯ ಕಂಪನಿಗಳ ಹಿಂದಿರುವ ಮಾಸ್ಟರ್‌ಮೈಂಡ್, ಮತ್ತು ಫೋರ್ಬ್ಸ್ ಪ್ರಕಾರ, ಮುಖೇಶ ಅಂಬಾನಿ ಪ್ರಸ್ತುತ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದು, ಸುಮಾರು 7 ಲಕ್ಷ ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಮುಂಬೈನಲ್ಲಿರುವ ಅವರ ವಿಸ್ತಾರವಾದ ಮಹಲಿನಿಂದ ಹಿಡಿದು ವಿಶಾಲವಾದ ವ್ಯವಹಾರಗಳ ಸಾಮ್ರಾಜ್ಯದವರೆಗೆ, ಅವರು ಭಾರತ ಮತ್ತು ವಿದೇಶಗಳಲ್ಲಿ ವ್ಯಾಪಾರ-ವ್ಯವಹಾರದ ಕೇಂದ್ರಬಿಂದುವಾಗಿದ್ದಾರೆ. ಅಪರೂಪದಲ್ಲಿ ಅಪರೂಪದ ವಿದ್ಯಮಾನವೊಂದರಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್‌ನ ವಿಶ್ವಾಸಾರ್ಹ ಉದ್ಯೋಗಿ ಮನೋಜ ಮೋದಿ ಅವರಿಗೆ ಮುಖೇಶ ಅಂಬಾನಿ ಅವರು 1,500 ಕೋಟಿ ರೂಪಾಯಿಗಳ ಬಹುಮಹಡಿ ಕಟ್ಟಡವನ್ನು ಗಿಫ್ಟ್‌ ಆಗಿ ನೀಡಿದ್ದಾರೆ ಎಂದು ವರದಿಯಾಗಿದೆ.
ಅಂಬಾನಿಯವರ ಬಲಗೈ ಬಂಟ ಎಂದು ಕರೆಯಲ್ಪಡುವ ಮನೋಜ ಮೋದಿಯವರು ರಿಲಯನ್ಸ್ ರಿಟೇಲ್ ಮತ್ತು ರಿಲಯನ್ಸ್ ಜಿಯೋದಲ್ಲಿ ನಿರ್ದೇಶಕರಾಗಿದ್ದಾರೆ. ಮುಂಬೈನ ಯೂನಿವರ್ಸಿಟಿ ಆಫ್ ಕೆಮಿಕಲ್ ಟೆಕ್ನಾಲಜಿ ವಿಭಾಗದಲ್ಲಿ ಒಟ್ಟಿಗೆ ಓದುತ್ತಿದ್ದಾಗಿನಿಂದ ಮನೋಜ ಮೋದಿ ಮತ್ತು ಮುಕೇಶ ಅಂಬಾನಿ ಸ್ನೇಹಿತರು.

80 ರ ದಶಕದ ಆರಂಭದಲ್ಲಿ ಧೀರೂಭಾಯಿ ಅಂಬಾನಿ ಅವರ ಅಧಿಕಾರಾವಧಿಯಲ್ಲಿ ಮೋದಿ ಅವರು ರಿಲಯನ್ಸ್‌ಗೆ ಸೇರಿದರು. ವರ್ಷಗಳಲ್ಲಿ, ಅವರು ರಿಲಯನ್ಸ್‌ಗಾಗಿ ಹಲವಾರು ಬಹು-ಮಿಲಿಯನ್ ಡಾಲರ್ ಡೀಲ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವರದಿಯಾಗಿದೆ, ಇದರಲ್ಲಿ 2020 ರಲ್ಲಿ ಫೇಸ್‌ಬುಕ್‌ನೊಂದಿಗೆ ಜಿಯೋದ 43,000 ಕೋಟಿ ರೂ ಹೂಡಿಕೆ ಒಡಂಬಡಿಕೆಯೂ ಸೇರಿದೆ.
‘ವೃಂದಾವನ’ ಎಂದು ಹೆಸರಿಸಲಾದ ಮನೋಜ ಮೋದಿಗೆ ಉಡುಗೊರೆಯಾಗಿ ನೀಡಲಾದ ಹೊಸ ಕಟ್ಟಡವು ಮುಂಬೈನ ನೆಪಿಯನ್ ಸಮುದ್ರ ರಸ್ತೆಯಲ್ಲಿ 22 ಅಂತಸ್ತಿನ ಬಹುಮಹಡಿ ಕಟ್ಟಡವಾಗಿದೆ. ಇದು ಕೆಲವು ಇತರ ಬಿಲಿಯನೇರ್‌ಗಳಿಗೂ ನೆಲೆಯಾಗಿದೆ. ಮೋದಿಯವರ ಈ ಹೊಸ ಮನೆಯ ಪ್ರತಿಯೊಂದು ಮಹಡಿಯು 8,000 ಚದರ ಅಡಿಗಳಲ್ಲಿ ಹರಡಿದೆ, ಕಟ್ಟಡದ ಒಟ್ಟು ವಿಸ್ತೀರ್ಣ 1.7 ಲಕ್ಷ ಚದರ ಅಡಿಗಳು.
ಟೈಮ್ಸ್ ನೌ ಪ್ರಕಾರ, ಕಟ್ಟಡದ ಮೊದಲ ಏಳು ಮಹಡಿಗಳನ್ನು ತಲತಿ ಮತ್ತು ಪಾರ್ಟ್‌ನರ್ಸ್ ಎಲ್‌ಎಲ್‌ಪಿ (Talati & Partners LLP) ಕಂಪನಿ ವಿನ್ಯಾಸಗೊಳಿಸಿದ್ದು, ಕಾರ್ ಪಾರ್ಕಿಂಗ್‌ಗಾಗಿ ಕಾಯ್ದಿರಿಸಲಾಗಿದೆ. ಮನೆಯ ಕೆಲವು ಪೀಠೋಪಕರಣಗಳನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement