ಬೆಂಗಳೂರಿನಲ್ಲಿ ‘ನಮೋ’ ಭರ್ಜರಿ ರೋಡ್ ಶೋ….ಪ್ರಧಾನಿ ಮೋದಿಗೆ ಹೂಮಳೆಯ ಸ್ವಾಗತ | ವೀಕ್ಷಿಸಿ

posted in: ರಾಜ್ಯ | 0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಶನಿವಾರ ಉತ್ತರ ಬೆಂಗಳೂರಿನಲ್ಲಿ ನಡೆದ ಮೆಗಾ ರೋಡ್‌ ಶೋನಲ್ಲಿ ಪಾಲ್ಗೊಂಡಿದ್ದಾರೆ. ಬೆಂಗಳೂರಿನಲ್ಲಿ ಶನಿವಾರ ಸಂಜೆ ನರೇಂದ್ರ ಮೋದಿ ಭರ್ಜರಿಯಾಗಿಯೇ ರೋಡ್ ಶೋ ನಡೆಸಿದ್ದಾರೆ. ಸಂಜೆ 6:15ಕ್ಕೆ ಮಾಗಡಿ ರಸ್ತೆ ಜಂಕ್ಷನ್‌ನಿಂದ ಆರಂಭವಾದ ರೋಡ್‌ ಶೋ, ರಿಂಗ್‌ ರೋಡ್‌ ಮೂಲಕ ಸುಮನಹಳ್ಳಿ ಜಂಕ್ಷನ್‌ವರೆಗೂ ಸಾಗಿತು. ಪ್ರಧಾನಿ ಮೋದಿಗೆ ಬಿಜೆಪಿ ಬೆಂಬಲಿಗರು ಹೂ ಮಳೆ ಸ್ವಾಗತ ನೀಡಿದರು. ಜನರತ್ತ ಕೈ ಬೀಸಿದ ಮೋದಿಗೆ ಬಿಜೆಪಿ ಬೆಂಬಲಿಗರು ದಾರಿಯುದ್ದಕ್ಕೂ ಹೂವು ಎಸೆಯುವ ಮೂಲಕ ಸಂತಸ ಪಟ್ಟರು. ಕರ್ನಾಟಕದ ಪ್ರಸಿದ್ಧ ಜಾನಪದ ಕಲಾತಂಡಗಳಾದ ಡೊಳ್ಳು ಕುಣಿತ, ಪಟ ಕುಣಿತ, ಹುಲಿ ವೇಷ, ಮದ್ದಳೆ ಸೇರಿದಂತೆ ಹಲವು ತಮಡಗಳಿಂದ ನೃತ್ಯ ವಾದ್ಯತಂಡಗಳು ಭಾಗವಹಿಸಿದ್ದವು.
ಬೆಳಗಾವಿಯ ಕುಡಚಿಯಲ್ಲಿ ಶನಿವಾರದ ಮೂರನೇ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ, ಮೋದಿ ಅವರು ಸಂಜೆ 5 ಗಂಟೆ ಬೆಂಗಳೂರಿಗೆ ಆಗಮಿಸಿದರು. ನಂತರ ಸಂಜೆ 6:15ಕ್ಕೆ ರೋಡ್‌ ಶೋ ಆರಂಭವಾಯಿತು. ಈ ವೇಳೆ ಕೇಸರಿ ಟೋಪಿ ಧರಿಸಿದ್ದ ಪ್ರಧಾನಿ ಮೋದಿ ಜೊತೆ ಬೆಂಗಳೂರು ಉತ್ತರ ಸಂಸದ ಡಿ.ವಿ. ಸದಾನಂದಗೌಡ, ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ ನಾರಾಯಣಸ್ವಾಮಿ ಮೋದಿ ಜೊತೆಗಿದ್ದರು. ಬೆಂಗಳೂರಿನ ಶಾಸಕರಾದ ಎಸ್‌.ಟಿ. ಸೋಮಶೇಖರ, ಮುನಿರತ್ನ ನಾಯ್ಡು, ಗೋಪಾಲಯ್ಯ ಅವರು ರೋಡ್‌ ಶೋನ ಮುಂದಾಳತ್ವ ವಹಿಸಿಕೊಂಡಿದ್ದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಪ್ರಧಾನಿ ಮೋದಿ ಸಾಗುವ ರಸ್ತೆ ಉದ್ದಕ್ಕೂ ಬಿಗಿ ಭದ್ರತೆ ವಹಿಸಲಾಗಿತ್ತು. ನೈಸ್‌ ರೋಡ್‌ ಜಂಕ್ಷನ್‌ನಿಂದ ಸಮನಹಳ್ಳಿವರೆಗೆ ಮೋದಿ ರೋಡ್‌ ಶೋ ನಡೆಸಿದರು. ಸುಮಾರು 5.3 ಕಿಲೋ ಮೀಟರ್‌ ರೋಡ್‌ ಶೋ ನಡೆಸಿದ್ದು, ರಸ್ತೆ ಉದ್ದಕ್ಕೂ ಮೋದಿ ಮೋದಿ ಎಂದು ಬಿಜೆಪಿ ಬೆಂಬಲಿಗರು ಜೈಕಾರ ಕೂಗಿದರು. ರೋಡ್‌ಶೋ ಮಾಗಡಿ ರಸ್ತೆ, ನೈಸ್ ರಸ್ತೆ ಜಂಕ್ಷನ್ ಮತ್ತು ಸುಮನಹಳ್ಳಿ ಸೇರಿದಂತೆ ಉತ್ತರ ಬೆಂಗಳೂರಿನ ಹಲವಾರು ಪ್ರದೇಶಗಳ ಮೂಲಕ ಹಾದುಹೋಯಿತು.ರೋಡ್‌ ಶೋ ಹಲವೆಡೆ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಮೋದಿ ಪಥಸಂಚಲನ ನಡೆಯುವ ಮಾರ್ಗದುದ್ದಕ್ಕೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ದೆಹಲಿಯಿಂದ ವಿಮಾನದ ಮೂಲಕ ಬೆಳಗ್ಗೆ ಬೀದರ್‌ಗೆ ಮೋದಿ ಆಗಮಿಸಿದರು. ಹುಮನಾಬಾದ್, ವಿಜಯಪುರ, ಮತ್ತು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಸಾರ್ವಜನಿಕ ಸಭೆಗಳಲ್ಲಿ ಅವರು ಮಾತನಾಡಿದರು. ನಂತರ ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಿದರು.
ಕೋಲಾರ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಭಾನುವಾರ ಬೆಳಿಗ್ಗೆ ಸಾರ್ವಜನಿಕ ಸಭೆಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ. ದೆಹಲಿಗೆ ವಾಪಸಾಗುವ ಮುನ್ನ ಭಾನುವಾರ ಮೈಸೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement