ಆನೆಗಳ ಹಿಂಡಿಗೆ ದಾರಿ ಬಿಟ್ಟುಕೊಡುವ ಹುಲಿ…. ಅದ್ಭುತ ವೀಡಿಯೊ

ಹುಲಿಗಳು ಅತ್ಯುನ್ನತ ಪರಭಕ್ಷಕಗಳು ಅಥವಾ ಮಾಂಸಹಾರಿ ಪ್ರಾಣಿ ನಿಜ, ಆದರೆ ಅವು ಆನೆಗಳೊಂದಿಗೆ ಸಂಘರ್ಷಕ್ಕೆ ಹೋಗುವುದನ್ನು ಬಯಸುವುದಿಲ್ಲ. ಇದಕ್ಕೆ ಪುಷ್ಟಿ ನೀಡುವಂತೆ ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡ ವೀಡಿಯೊದಲ್ಲಿ ಹುಲಿಯು ಕಾಡಿನಲ್ಲಿ ಆನೆಗಳ ಹಿಂಡಿಗೆ ದಾರಿ ಮಾಡಿಕೊಡುವುದನ್ನು ತೋರಿಸುತ್ತದೆ.
ಆನೆಗಳ ಗುಂಪು ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವುದನ್ನು ವೀಡಿಯೊ ತೋರಿಸುತ್ತದೆ, ಹುಲಿ ಆನೆಗಳನ್ನು ಕಂಡ ತಕ್ಷಣ, ರಸ್ತೆ ಬದಯಲ್ಲಿ ಹುದುಗಿ ಕುಳಿತು ಆನೆಗಳು ಹಾದುಹೋಗುವುದನ್ನು ಕಾಯುತ್ತದೆ. ಹಿಂಡು ನಿಧಾನವಾಗಿ ಮುನ್ನಡೆಯುತ್ತದೆ, ಹುಲಿ ಕಡೆ ದೃಷ್ಟಿ ಇದ್ದರೂ ಆ ಕಡೆ ಗಮನವಿಲ್ಲದಂತೆ ಆನೆಗಳು ಒಂದೊಂದಾಗಿ ಮುನ್ನಡೆಯುತ್ತವೆ. ಅಲ್ಲಿಯವರೆಗೂ ಹುಲಿ ಹುದುಗಿಕೊಂಡು ಕುಳಿತು ಅವುಗಳು ಹೋಗುವುದನ್ನೇ ಕಾಯುತ್ತಿತ್ತು. ಮೂರು ಆನೆಗಳು ಹೋದ ನಂತರ ಎದ್ದು ಹೋದ ಹುಲಿ ಒಮ್ಮೆ ಆನೆಗಳು ಹೋದ ದಾರಿಯನ್ನು ಅವಲೋಕಿಸುತ್ತದೆ. ನಂತರ ಅತ್ತಿಂದಿತ್ತ ತಿರುಗಾಡಿದ ನಂತರ ಅದಕ್ಕೆ ಮತ್ತೊಂದು ಆನೆ ಬರುವುದು ಕಾಣಿಸುತ್ತದೆ. ತಕ್ಷಣವೇ ಅದರ ದಾರಿಯಿಂದ ಓಡಿ ಹಲಿ ಮತ್ತೆ ಅಡಗಿಕೊಳ್ಳುತ್ತದೆ. ಆನೆ ಒಮ್ಮೆಗೇ ಘೀಳಿಡುತ್ತ ಎಚ್ಚರಿಕೆ ಸಂದೇಶ ರವಾನಿಸಿ ಮುಂದೆ ಸಾಗುತ್ತದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

ದಿನಾಂಕವಿಲ್ಲದ ವೀಡಿಯೊ ಮಾಡಿದ ಸ್ಥಳ ತಿಳಿದಿಲ್ಲ. ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು ಟ್ವಿಟರ್‌ನಲ್ಲಿ 12,000 ವೀಕ್ಷಣೆಗಳು ಮತ್ತು ನೆಟಿಜನ್‌ಗಳಿಂದ ಹಲವಾರು ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ. ಏನು ಎನ್ಕೌಂಟರ್. ಹುಲಿಯು ಪ್ರಬಲವಾದ ಭೂ ಸಸ್ತನಿಗಳಿಗೆ ಸರಿಯಾದ ಗೌರವವನ್ನು ನೀಡುತ್ತದೆ,” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.ಎಂತಹ ಸುಂದರ ದೃಶ್ಯ. ಹುಲಿಯೊಂದು ಆನೆ ಹಿಂಡಿಗೆ ಹೇಗೆ ದಾರಿ ಮಾಡಿಕೊಟ್ಟಿತು ಎಂಬುದು ಇಷ್ಟವಾಯಿತು” ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

ಅದು ನಂಬಲಾಗದ ದೃಶ್ಯವಾಗಿತ್ತು ಎಂದು ಮತ್ತೊಬ್ಬರು ಬರೆದಿದ್ದಾರೆ. ಈ ವಿಡಿಯೋವನ್ನು ಮೂಲತಃ ವನ್ಯಜೀವಿ ಛಾಯಾಗ್ರಾಹಕ ವಿಜೇತ ಸಿಂಹ ಅವರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಡಿನಲ್ಲಿ, ಹುಲಿಗಳು ಸಾಮಾನ್ಯವಾಗಿ ಜಿಂಕೆ, ಮಂಗಗಳು ಮತ್ತು ಹಂದಿಗಳಂತಹ ದೊಡ್ಡ ಅಥವಾ ಮಧ್ಯಮ ಗಾತ್ರದ ಸಸ್ತನಿಗಳನ್ನು ಬೇಟೆಯಾಡುತ್ತವೆ. ಹುಲಿಗಳು ಪೂರ್ಣವಾಗಿ ಬೆಳೆದ ಆನೆಗಳನ್ನು ಬೇಟೆಯಾಡುವ ನಿದರ್ಶನಗಳು ಕೇಳಿಬಂದಿಲ್ಲ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement