ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಲ್. ಎಸ್. ಶಾಸ್ತ್ರಿ ನೇಮಕ

ಬೆಳಗಾವಿ : ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಚುಸಾಪ ರಾಜ್ಯ ಸಂಚಾಲಕ ಡಾ. ಎಂ. ಜಿ. ಆರ್. ಅರಸ್ ಅವರು ಪ್ರಕಟಿಸಿದ್ದಾರೆ.
ಕಳೆದ ನಾಲ್ಕು ವರ್ಷ ಚುಸಾಪ ಅಧ್ಯಕ್ಷರಾಗಿದ್ದ ಅಶೋಕ ಮಳಗಲಿ ಅವರ ಸ್ಥಾನದಲ್ಲಿ ಶಾಸ್ತ್ರಿಯವರು ನೇಮಕವಾಗಿದ್ದು, ಶಾಸ್ತ್ರಿಯವರು 1987 ರಲ್ಲಿ ಜಿಲ್ಲಾ ಘಟಕ ಸ್ಥಾಪಿಸಿ 21 ವರ್ಷಗಳ ಕಾಲ ಮುನ್ನಡೆಸಿ ಎರಡು ರಾಜ್ಯ ಸಮ್ಮೇಳನ, ಎರಡು ಜಿಲ್ಲಾ ಸಮ್ಮೇಳನಗಳ ಸಹಿತ ನೂರಾರು ಕಾರ್ಯಕ್ರಮ ನಡೆಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸ್ತ್ರಿಯವರು ಪ್ರಸ್ತುತ ವರ್ಷ ನವೆಂಬರದಲ್ಲಿ ಚುಸಾಪ ಬೆಳ್ಳಿ ಹಬ್ಬ ಆಚರಿಸಲಿರುವುದಾಗಿ ಪ್ರಕಟಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರವೇಶ ಪತ್ರ ಪ್ರಕಟ: ಜೂನ್‌ 30 ರಂದು ಪರೀಕ್ಷೆ

ನಿಮ್ಮ ಕಾಮೆಂಟ್ ಬರೆಯಿರಿ

advertisement