ಆನೆಗಳ ಬಳಿ ತೆರಳುವಾಗ, ಅವುಗಳೊಂದಿಗೆ ತಮಾಷೆ ಮಾಡುವಾಗ ಎಚ್ಚರಿಕೆ ಅಗತ್ಯ. ಏಕೆಂದರೆ ಅವುಗಳು ಯಾವಾಗ ಬೇಕಾದರೂ ಕೆರಳಿ ದಾಳಿ ನಡೆಸಬಹುದು. ಇಲ್ಲೊಬ್ಬಳು ಯುವತಿ ಈ ತರಹ ತಮಾಷೆ ಮಾಡಲು ಹೋಗಿ ಯಡವಟ್ಟು ಮಾಡಿಕೊಂಡಿದ್ದಾಳೆ. ಯುವತಿ ಬಾಳೆಹಣ್ಣುಗಳನ್ನು ಕೊಡಲು ಆನೆ ಬಳಿ ತೆರಳಿದ್ದಾಳೆ. ಸುಮ್ಮನಿದ್ದ ಆನೆ ಏಕಾಏಕಿ ದಾಳಿ ಮಾಡಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಸಾಮಾನ್ಯವಾಗಿ ಸಾಕು ಆನೆಗಳು ಸಾಧು ಪ್ರಾಣೀಗಳು. ಆದರೆ ಅವುಗಳಿಗೆ ಕಿರಿಕಿರಿ ಉಂಟಾದರೆ ಸಾಧುವಾಗಿದ್ದ ಆನೆಗಳು ದಾಳಿ ಮಾಡುತ್ತವೆ. ವೈರಲ್ ಆದ ವೀಡಿಯೊದಲ್ಲಿ ಆನೆ ಯುವತಿ ಮೇಲೆ ದಾಳಿ ಮಾಡುವುದನ್ನು ನೋಡಬಹುದು. ಈ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ವೀಡಿಯೊದಲ್ಲಿ ನದಿ ಬಳಿ ಆನೆ ನಿಂತಿರುತ್ತದೆ. ಈ ವೇಳೆ ಯುವತಿಯೊಬ್ಬಳು ಆನೆಗೆ ಬಾಳೆ ಹಣ್ಣನ್ನು ತಿನ್ನಿಸಲು ಹೋಗುತ್ತಾಳೆ. ಆನೆ ಬಾಳೆ ಹಣ್ಣನ್ನು ತಿನ್ನಲು ಸೊಂಡಿಲನ್ನು ಮುಂದೆ ಚಾಚುತ್ತಿದ್ದಂತೆ ಯುವತಿ ಬಾಳೆಹಣ್ಣನ್ನು ಕೊಡದೇ ಸತಾಯಿಸಿದ್ದಾಳೆ. ಮತ್ತೆ ಬಾಳೆ ಆನೆ ಬಾಳೆಹಣ್ಣನ್ನು ತಿನ್ನಲು ಬಂದಾಗ ಬಾಳೆ ಗೊನೆಯನ್ನು ಹಿಡಿದು ಆನೆಗೆ ತೋರಿಸಿ ತೋರಿಸಿ ಮುಂದಕ್ಕೆ ಚಲಿಸಿದ್ದಾಳೆ. ಇದರಿಂದ ಕೋಪಗೊಂಡ ಆನೆ ಯುವತಿಯನ್ನು ಚೆಂಡಿನಂತೆ ಎತ್ತಿ ಬಿಸಾಡಿದೆ.
ಇದನ್ನು ಶೇರ್ ಮಾಡಿರುವ ಸುಸಾಂತ ನಂದಾ ಅವರು, “ಆನೆಯನ್ನು ಎಷ್ಟು ಪಳಗಿಸಿದರೂ ಅದನ್ನು ಮೋಸಗೊಳಿಸಲು ಸಾಧ್ಯವಿಲ್ಲ. ಸೆರೆಯಲ್ಲಿರುವ ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಆನೆಯೂ ಒಂದು ಎಂದು ಬರೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ