ಹೊನ್ನಾವರ: ಮೈಸೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹೆಲಿಕ್ಯಾಪ್ಟರ್ ಇಳಿದ ಪಟ್ಟಣದ ರಾಮತೀರ್ಥದ ಹೆಲಿಪ್ಯಾಡಿನ ಸಮೀಪದಲ್ಲಿ ಸ್ಮೋಕ್ ಕ್ಯಾಂಡಲ್ ಬೆಂಕಿ ಒಣಹುಲ್ಲಿಗೆ ತಗುಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.
ಡಿ.ಕೆ. ಶಿವಕುಮಾರ ಅವರು ಹ್ಯಾಲಿಕ್ಯಾಪ್ಟರ್ ನಿಂದ ಇಳಿದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಗಾಳಿ ಇತ್ತು. ಹೆಲಿಕ್ಯಾಪ್ಟರ್ ಇಳಿದ ಸ್ಥಳದಿಂದ ಸ್ವಲ್ಪ ದೂರದಲ್ಲಿ ಗಾಳಿಯಿಂದಾಗಿ ಒಣಹುಲ್ಲು ಕಸಕಡ್ಡಿಗಳ ಮೇಲೆ ಸ್ಮೋಕ್ ಕ್ಯಾಂಡಲ್‌ನ ಕಿಡಿ ತಾಗಿ ಬೆಂಕಿ ಹತ್ತಿಕೊಂಡಿತು. ತಕ್ಷಣವೇ ಅಲ್ಲಿದ್ದ ಅಗ್ನಿಶಾಮಕ ದಳದವರು, ಪೊಲೀಸರು ಅದನ್ನು ನಂದಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಹೊನ್ನಾವರದ ಸೇಂಟ್ ಥಾಮಸ್ ಸಭಾಂಗಣದ ಆವರಣದಲ್ಲಿ ಅಭ್ಯರ್ಥಿಗಳ ಪರ ಮತ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಶಿವಕುಮಾರ ಅವರು ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ್ದರು. ಹೊನ್ನಾವರಕ್ಕೆ ತೆರಳುವ ಮುನ್ನ ಡಿಕೆ ಶಿವಕುಮಾರ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ, ಚಾಮುಂಡೇಶ್ವರಿ ಸನ್ನಿಧಿಯಲ್ಲಿ 10 ನಿಮಿಷಗಳಿಗೂ ಹೆಚ್ಚು ಕಾಲ ರುದ್ರಾಕ್ಷಿ ಜಪ ಮಾಡಿದ್ದರು. ಬಳಿಕ ಗೋಪುರದ ಮುಂದೆ ಈಡುಗಾಯಿ ಸೇವೆ ಸಲ್ಲಿಸಿದ್ದರು.
ಮಂಗಳವಾರ ಡಿ.ಕೆ. ಶಿವಕುಮಾರ ಅವರು ಜಕ್ಕೂರು ವಿಮಾನ ನಿಲ್ದಾಣದಿಂದ ಮುಳಬಾಗಿಲಿಗೆ ತೆರಳುತ್ತಿದ್ದಾಗ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಹೆಲಿಕಾಪ್ಟರ್ ಮುಂಭಾಗದ ಗಾಜು ಪುಡಿಪುಡಿಯಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ