ನವದೆಹಲಿ: ವಿದೇಶಾಂಗ ಸಚಿವ ಎಸ್.ಜೈಶಂಕರ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು “ಭಯೋತ್ಪಾದನೆ ಉದ್ಯಮದ ಪ್ರವರ್ತಕ, ಸಮರ್ಥಕ ಮತ್ತು ವಕ್ತಾರ” ಎಂದು ಕರೆದಿದ್ದಾರೆ.
ಗೋವಾದಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ನಂತರ, “ಭಯೋತ್ಪಾದನೆಯ ಬಲಿಪಶುಗಳು ಭಯೋತ್ಪಾದನೆಯ ಬಗ್ಗೆ ಚರ್ಚಿಸಲು ಭಯೋತ್ಪಾದನೆಯ ಪ್ರವರ್ತಕರೊಂದಿಗೆ ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ ಎಂದು ಸಚಿವ ಜೈಶಂಕರ ಹೇಳಿದರು.
ಬಿಲಾವಲ್ ಭುಟ್ಟೋ ಜರ್ದಾರಿ ಅವರು ಎಸ್‌ಸಿಒ ಸದಸ್ಯ ರಾಷ್ಟ್ರದ ವಿದೇಶಾಂಗ ಸಚಿವರಾಗಿ ಬಂದರು; ಅದು ಬಹುಪಕ್ಷೀಯ ರಾಜತಾಂತ್ರಿಕತೆಯ ಭಾಗವಾಗಿದೆ ಮತ್ತು ಅದಕ್ಕಿಂತ ಹೆಚ್ಚಿನದನ್ನು ನಾವು ನೋಡುವುದಿಲ್ಲ” ಎಂದು ಜೈಶಂಕರ ಹೇಳಿದರು.
ಶಾಂಘೈ ಸಹಕಾರ ಸಂಘಟನೆ (SCO) ಸಭೆಯಲ್ಲಿ ಇಬ್ಬರು ವಿದೇಶಾಂಗ ಮಂತ್ರಿಗಳು ದ್ವಿಪಕ್ಷೀಯ ಮಾತುಕತೆ ನಡೆಸಲಿಲ್ಲ.
ಭಯೋತ್ಪಾದನೆಯ ವಿಷಯದಲ್ಲಿ, ಪಾಕಿಸ್ತಾನದ ವಿಶ್ವಾಸಾರ್ಹತೆಯು ಅದರ ವಿದೇಶೀ ವಿನಿಮಯ ರಿಸರ್ವ್‌ಗಿಂತ ವೇಗವಾಗಿ ಕ್ಷೀಣಿಸುತ್ತಿದೆ ಎಂದು ಅವರು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಬಳಿಯ ಅರಣ್ಯದಲ್ಲಿ ಅಡಗಿರುವ ಭಯೋತ್ಪಾದಕರನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯ ಸಂದರ್ಭದಲ್ಲಿ ಐವರು ಭಾರತೀಯ ಸೇನೆಯ ಯೋಧರು ಹುತಾತ್ಮರಾದ ದಿನದಂದು ಜೈಶಂಕರ ಅವರ ಕಾಮೆಂಟ್‌ಗಳು ಬಂದಿವೆ. ಪಾಕಿಸ್ತಾನಿಗಳೆಂದು ಶಂಕಿಸಲಾದ ಭಯೋತ್ಪಾದಕರು ಕಳೆದ ವಾರ ಸೇನಾ ಟ್ರಕ್‌ಗೆ ಹೊಂಚು ದಾಳಿ ನಡೆಸಿದಾಗ ಐವರು ಸೈನಿಕರು ಸಾವಿಗೀಡಾಗಿದ್ದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಜಮ್ಮು ಮತ್ತು ಕಾಶ್ಮೀರಕ್ಕೆ ಭಯೋತ್ಪಾದಕರನ್ನು ಸಜ್ಜುಗೊಳಿಸಲು ಮತ್ತು ಕಳುಹಿಸಲು ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುವಲ್ಲಿ ಪಾಕಿಸ್ತಾನವು ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂಬುದಕ್ಕೆ ಭಾರತ ಹದಿನೆಂಟು ಬಾರಿ ಪುರಾವೆಗಳನ್ನು ತೋರಿಸಿದೆ. ವಿಶ್ವಸಂಸ್ಥೆಯ ನಿಯೋಜಿತ ಜಾಗತಿಕ ಭಯೋತ್ಪಾದಕ ಮಸೂದ್ ಅಜರ್, 26/11 ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಸೇರಿದಂತೆ ಹಲವರು ಪಾಕಿಸ್ತಾನದಲ್ಲಿದ್ದಾರೆ.
ಹತ್ಯೆಗೀಡಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಭಿಲಾವಲ್ ಭುಟ್ಟೋ ಜರ್ದಾರಿ ಅವರು ಸುಮಾರು 12 ವರ್ಷಗಳ ನಂತರ ಭಾರತಕ್ಕೆ ಭೇಟಿ ನೀಡಿದ ಮೊದಲ ಪಾಕಿಸ್ತಾನಿ ವಿದೇಶಾಂಗ ಸಚಿವರಾಗಿದ್ದಾರೆ. 2011ರಲ್ಲಿ ಆಗಿನ ಪಾಕ್ ವಿದೇಶಾಂಗ ಸಚಿವೆ ಹಿನಾ ರಬ್ಬಾನಿ ಖಾರ್ ಭಾರತಕ್ಕೆ ಭೇಟಿ ನೀಡಿದ್ದರು. 2016 ರಲ್ಲಿ ಸರ್ತಾಜ್ ಅಜೀಜ್ ಅವರು ಭಾರತಕ್ಕೆ ಭೇಟಿ ನೀಡಿದ ಪಾಕಿಸ್ತಾನದಿಂದ ಕೊನೆಯ ಮಂತ್ರಿಯಾಗಿದ್ದರು.
ಎಸ್‌ಸಿಒ ಸಭೆಯಲ್ಲಿ, ಭಯೋತ್ಪಾದನೆ ವಿರುದ್ಧ ಹೋರಾಡಲು ಒಗ್ಗಟ್ಟಿನ ಪ್ರಯತ್ನಗಳಿಗೆ ಜೈಶಂಕರ್ ಕರೆ ನೀಡಿದರು. ಭಯೋತ್ಪಾದನೆಯಿಂದ ದೃಷ್ಟಿ ಬೇರೆಡೆ ಹೊರಳಿಸುವುದು ಎಸ್‌ಸಿಒಗೆ ಕೆಟ್ಟದ್ದ ಎಂದು ಅವರು ಪ್ರತಿಪಾದಿಸಿದರು.
“ನಾವು ಯಾರನ್ನೂ – ವ್ಯಕ್ತಿ ಅಥವಾ ರಾಜ್ಯ – ರಾಜ್ಯೇತರ ಆಟಗಾರರ ಹಿಂದೆ ಅಡಗಿಕೊಳ್ಳಲು ಅವಕಾಶ ನೀಡಬಾರದು … ಜಗತ್ತು ಕೋವಿಡ್ ಮತ್ತು ಅದರ ಪರಿಣಾಮಗಳನ್ನು ಎದುರಿಸಲು ತೊಡಗಿರುವಾಗ, ಭಯೋತ್ಪಾದನೆಯ ಬೆದರಿಕೆಯು ಅಡೆತಡೆಯಿಲ್ಲದೆ ಮುಂದುವರೆಯಿತು. ಈ ಬೆದರಿಕೆಯಿಂದ ನಾವು ದೃಷ್ಟಿ ಬೇರೆಡೆ ಹರಿಸಿದರೆ ನಮ್ಮ ಭದ್ರತಾ ಹಿತಾಸಕ್ತಿ ದೃಷ್ಟಿಯಿಂದ ಅದು ನಮಗೆ ಹಾನಿಕಾರಕವಾಗುತ್ತದೆ ಎಂದು ಜೈಶಂಕರ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ