ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಪ್ರಚಾರದ ಅಂತಿಮ ಘಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಬೆಂಗಳೂರಿನ ಬ್ರಿಗೇಡ್ ಮಿಲೇನಿಯಂ ರಸ್ತೆಯಿಂದ ಪ್ರಾರಂಭವಾದ ರೋಡ್ ಶೋ ಜಯನಗರ, ಚಾಮರಾಜಪೇಟೆ, ಗಾಂಧಿನಗರ ಸೇರಿದಂತೆ ಅನೇಕ ಕಡೆ ನಡೆದು ಮಲ್ಲೇಶ್ವರಂನಲ್ಲಿ ಅಂತ್ಯಗೊಂಡಿದೆ. 13 ಕ್ಷೇತ್ರಗಳ ಮತದಾರರನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಧಾನಿ ಮೋದಿ ಪ್ರಯತ್ನ ಮಾಡಿದರು. ಲ ಕಾಲೇಜು ಹೆಲಿಪ್ಯಾಡ್ನಿಂದ ರಸ್ತೆ ಮಾರ್ಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸೋಮೇಶ್ವರ ಭವನದತ್ತ ತೆರಳಿದರು. ಸೋಮೇಶ್ವರ ಭವನದಿಂದ 10:20ಕ್ಕೆ ಪ್ರಧಾನಿ ಮೋದಿಯವರ ರೋಡ್ ಶೋ ಆರಂಭವಾಯಿತು. ರೋಡ್ ಶೋ ಉದ್ದಕ್ಕೂ ಸಂಸದರಾದ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಪ್ರಧಾನಿ ಮೋದಿಯವರ ಜೊತೆ ಇದ್ದರು. ಪ್ರಧಾನಿ ಮೋದಿ ಅವರು ತೆರೆದ ವಾಹನದಲ್ಲಿ ಬರೋಬ್ಬರಿ 26.5 ಕಿಮೀ ರೋಡ್ ಶೋ ನಡೆಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155
ಮೋದಿ ರೋಡ್ ಶೋ ಆರಂಭವಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಮೋದಿ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಆಂಜನೇಯನ ಭಾವಚಿತ್ರವಿರುವ ಧ್ವಜ, ಬಿಜೆಪಿ ಬಾವುಟಗಳು ರಾರಾಜಿದವು. ಮೋದಿಯವರ 26 ಕಿ.ಮೀ ರೋಡ್ ಶೋಗೆ ಅಭಿಮಾನಿಗಳು ಚೆಂಡು ಹೂವು, ಸೇವಂತಿಗೆ ಹೂವು, ಗುಲಾಬಿ ಹೂವಿನ ಮಳೆ ಸುರಿಸಿದರು. ದಾರಿ ಸಂಪೂರ್ಣ ಹೂವಿನಿಂದ ಮುಚ್ಚಿ ಹೋಗಿತ್ತು.
ಮೋದಿ ರೋಡ್ ಶೋಗೆ ಕಲಾತಂಡಗಳು ಮೆರುಗು ತಂದುಕೊಟ್ಟವು. ಬಿಜೆಪಿ ಕಾರ್ಯಕರ್ತರು ಹೂಮಳೆ ಸುರಿಸಿ ಸಂಭ್ರಮಿಸಿದರು. ಈ ವೇಳೆ ಜನರತ್ತ ಪ್ರಧಾನಿ ಮೋದಿ ಅವರು ಹೂವನ್ನು ಎಸೆದು ಸಂತಸ ವ್ಯಕ್ತಪಡಿಸಿದರು. ರೋಡ್ ಶೋ ವೇಳೆ ಮೋದಿಯನ್ನು ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಸೇರಿದ್ದರು. ರೋಡ್ ಶೋ ವೇಳೆ ಹನುಮಂತನ ಮುಖವಾಡಗಳನ್ನು ಧರಿಸಿ ಕೆಲವರು ಭಾಗವಹಿಸಿದ್ದರು. ಶ್ರೀರಾಮ, ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮಹರಾಜ್, ಹನುಮಂತನ ವೇಷಗಳನ್ನು ಧರಿಸಿ ಪ್ರಧಾನಿ ಮೋದಿಯವರ ಗಮನವನ್ನು ತಮ್ಮತ್ತ ಸೆಳೆದರು. 3 ಗಂಟೆಗಳ ಕಾಲ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಯಿತು.
ಬೆಂಗಳೂರಿನ ಇತಿಹಾಸದಲ್ಲಿ ಪ್ರಧಾನಮಂತ್ರಿಯೊಬ್ಬರು ಇಷ್ಟೊಂದು ದೊಡ್ಡ ಮಟ್ಟದ (26 ಕಿಮೀ) ರೋಡ್ ಶೋ ನಡೆಸಿರುವುದು ಇದೇ ಮೊದಲಾಗಿದ್ದು, ಅಹಿತಕರ ಘಟನೆ ನಡೆಯದೆ ರೋಡ್ ಶೋ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ