ಅಮೃತಸರ ಸುವರ್ಣ ಮಂದಿರದ ಬಳಿ ಸ್ಫೋಟ ; ಹಲವರಿಗೆ ಗಾಯ

ಅಮೃತಸರ : ಪಂಜಾಬ್‌ನ ಅಮೃತಸರ ನಗರದ ಸುವರ್ಣ ಮಂದಿರದ ಬಳಿ ಶನಿವಾರ (ಮೇ 6) ತಡರಾತ್ರಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಹೆರಿಟೇಜ್‌ ಸ್ಟ್ರೀಟ್‌ನಲ್ಲಿ ಮಧ್ಯರಾತ್ರಿ ವೇಳೆ ಪ್ರವಾಸಿಗರು ಮತ್ತು ಭಕ್ತರು ಸಂಚರಿಸುತ್ತಿದ್ದಾಗ ಸಾರಗಾರ್ಹಿ ಸಾರಾಯ್‌ ಪ್ರದೇಶದ ವಾಹನ ತಂಗುದಾಣ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಅಮೃತಸರ ಹೆರಿಟೇಜ್‌ ಸ್ಟ್ರೀಟ್‌ನ ರೆಸ್ಟೋರೆಂಟ್‌ವೊಂದರ ಚಿಮಣಿಯಲ್ಲಿ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಸ್ಫೋಟದಿಂದ ಸಾರಗಾರ್ಹಿ ಸಾರಾಯ್‌ ಪ್ರದೇಶ ಮತ್ತು ಅಮೃತಸರ ಸನಿಹದ ರೆಸ್ಟೋರೆಂಟ್‌ಗಳ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಪಾದಚಾರಿಗಳು ಗಾಯಗೊಂಡಿದ್ದಾರೆ.
“ಸ್ಫೋಟಕ್ಕೆ ಕಾರಣ ಇನ್ನೂ ಪತ್ತೆಯಾಗಿಲ್ಲ. ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು ಸ್ಫೋಟದ ಮಾದರಿ ಸಂಗ್ರಹಿಸಿದ್ದಾರೆ. ಹೆರಿಟೇಜ್ ಸ್ಟ್ರೀಟ್‌ನ ಕಟ್ಟಡಗಳಿಗೆ ಹಾನಿಯಾಗಿಲ್ಲ. ಯಾವುದೇ ಸಾವು ಸಂಭವಿಸಿಲ್ಲ” ಎಂದು ಅಮೃತಸರ ಹೆಚ್ಚುವರಿ ಉಪ ಪೊಲೀಸ್‌ ಆಯುಕ್ತ ಡಾ ಮೆಹ್ತಾಬ್‌ ಸಿಂಗ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಯಾರೂ ಭೀತಿಗೊಳ್ಳುವ ಅಗತ್ಯವಿಲ್ಲ” ಎಂದು ಪೊಲೀಸ್‌ ಆಯುಕ್ತರ ಕಚೇರಿ ಟ್ವೀಟ್‌ ಮಾಡಿದೆ.

ಪ್ರಮುಖ ಸುದ್ದಿ :-   ಅಹಮದಾಬಾದ್‌ ವಿಮಾನ ನಿಲ್ದಾಣದಲ್ಲಿ ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement