ಕುಸ್ತಿಪಟುಗಳ ಪ್ರತಿಭಟನೆಗೆ ಬೆಂಬಲ : ಇಂದು ಜಂತರ್ ಮಂತರ್ ತಲುಪಲಿರುವ ಖಾಪ್ ನಾಯಕರು

ನವದೆಹಲಿ: ಭಾರತದ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿ ಪ್ರತಿಭಟನೆ ನಡೆಸುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ನೀಡಲು ಹರಿಯಾಣದ ಎಲ್ಲಾ ಖಾಪ್‌ಗಳ ಪ್ರತಿನಿಧಿಗಳು ಭಾನುವಾರ ದೆಹಲಿಯ ಜಂತರ್ ಮಂತರ್ ತಲುಪಲಿದ್ದಾರೆ.
20ಕ್ಕೂ ಹೆಚ್ಚು ಖಾಪ್‌ಗಳ ಮುಖ್ಯಸ್ಥರು ಶನಿವಾರ ಮೆಹಂ ಚೌಬಿಸಿ ಚಬುತಾರಾದಲ್ಲಿ (24 ಹಳ್ಳಿಗಳ ಕ್ಲಸ್ಟರ್) ಸಭೆಯನ್ನು ಆಯೋಜಿಸಿದರು ಮತ್ತು ಭಾನುವಾರ ದೆಹಲಿಗೆ ತಲುಪುವ ನಿರ್ಧಾರ ಪ್ರಕಟಿಸಿದರು ಮತ್ತು ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಬೆಂಭಲ ಸೂಚಿಸಲು ಹರಿಯಾಣ, ಪಶ್ಚಿಮ ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.
ಮೆಹಮ್ ಚೌಬಿಸಿ ಸರ್ವ್ ಖಾಪ್ ಮುಖ್ಯಸ್ಥ ಮೆಹರ್ ಸಿಂಗ್ ನಂಬರ್ದಾರ್ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ರಾತ್ರಿ ಪೊಲೀಸರು ಕುಸ್ತಿಪಟುಗಳನ್ನು ನಡೆಸಿಕೊಂಡ ರೀತಿಯನ್ನು ಖಂಡಿಸಿದರು.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ನಮ್ಮ ಹೆಣ್ಣುಮಕ್ಕಳ ಗೌರವಕ್ಕಾಗಿ ಇದು ಹೋರಾಟವಾಗಿದೆ. ಈ ವಿಷಯದ ಬಗ್ಗೆ ಪ್ರಧಾನಿ ಮತ್ತು ಅವರ ಮಂತ್ರಿಮಂಡಲ ಯಾಕೆ ಮೌನವಾಗಿದೆ. ಬಿಜೆಪಿಯವರು ಈ ಹೆಣ್ಣುಮಕ್ಕಳ ಈ ಪ್ರತಿಭಟನೆಯನ್ನು ತಡೆಯುವ ಮೂಲಕ ಸಮಸ್ಯೆಯನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿರುವುದು ನಮಗೆ ಆಘಾತಕಾರಿಯಾಗಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಇದೇ ಆರೋಪ ಎದುರಿಸುತ್ತಿರುವ ಹರಿಯಾಣ ಸಚಿವ ಸಂದೀಪ್ ಸಿಂಗ್ ಕೂಡ ಸಚಿವ ಸ್ಥಾನವನ್ನು ಅನುಭವಿಸುತ್ತಿದ್ದು, ಅವರನ್ನು ಬಂಧಿಸುವಲ್ಲಿ ಚಂಡೀಗಢ ಪೊಲೀಸರು ವಿಫಲರಾಗಿದ್ದಾರೆ. ಬಿಜೆಪಿ ಮಹಿಳೆಯರಿಗೆ ಯಾವ ಸಂದೇಶವನ್ನು ನೀಡಲು ಬಯಸುತ್ತದೆ ಎಂದು ಅವರು ಪ್ರಶ್ನಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ....| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ...!

ಪಶ್ಚಿಮ ಉತ್ತರ ಪ್ರದೇಶ, ದೆಹಲಿ, ರಾಜಸ್ಥಾನದ ಖಾಪ್ ನಾಯಕರು ಮತ್ತು ಉತ್ತರದ ರಾಜ್ಯಗಳ ರೈತ ಮುಖಂಡರು ಸಹ ಭಾನುವಾರ ಅಲ್ಲಿಗೆ ತಲುಪುತ್ತಾರೆ ಮತ್ತು ಅವರು ಮತ್ತೊಂದು ಬಲವಾದ ನಿರ್ಧಾರವನ್ನು ತೆಗೆದುಕೊಂಡಿದ್ದು, ಭಾನುವಾರದ ಕುಸ್ತಿಪಟುಗಳ ಧರಣಿಯಲ್ಲಿಯೇ ಅದನ್ನು ಘೋಷಿಸಲಿದ್ದಾರೆ ಎಂದು ಅವರು ಹೇಳಿದರು.
ದೇಸ್ವಾಲ್ ಖಾಪ್‌ನ ಪ್ರತಿನಿಧಿ ಸುಭಾಷ್ ದೇಸ್ವಾಲ್ ಮಾತನಾಡಿ, ಇಡೀ ರಾಷ್ಟ್ರವು ಕುಸ್ತಿಪಟುಗಳ ಬಗ್ಗೆ ಹೆಮ್ಮೆಪಡುತ್ತದೆ. ಆದರೆ ಕೇಂದ್ರ ಸರ್ಕಾರವು ತನ್ನ ಸಂಸದರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬ್ರಿಜ್ ಭೂಷಣ್ ಅವರ ತಪ್ಪುಗಳ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಈ ಮಹಿಳಾ ಕುಸ್ತಿಪಟುಗಳಿಗೆ ಎಲ್ಲ ರೀತಿಯಿಂದಲೂ ಕಿರುಕುಳ ನೀಡಲಾಗುತ್ತಿದೆ. ಈ ಹೋರಾಟದಲ್ಲಿ ಕುಸ್ತಿಪಟುಗಳು ಒಬ್ಬರೇ ಅಲ್ಲ, ಇಡೀ ಖಾಪ್‌ಗಳು, ರೈತ ಸಮುದಾಯ ಮತ್ತು ಮಹಿಳೆಯರು ಗಟ್ಟಿಯಾದ ಬಂಡೆಯಂತೆ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬಿಜೆಪಿ ಹೇಳುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸವಿದೆ ಎಂದು ಅವರು ಹೇಳಿದರು.
ಹಿಸಾರ್‌ನ ಹಂಸಿಯಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಜನನಾಯಕ ಜನತಾ ಪಾರ್ಟಿ (ಜೆಜೆಪಿ) ಮುಖ್ಯಸ್ಥ ಅಜಯ್ ಸಿಂಗ್ ಚೌತಾಲಾ ಅವರು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದೆ ಮತ್ತು ಪೊಲೀಸರು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.
ಅವರ (ಕುಸ್ತಿಪಟುಗಳ) ಬೇಡಿಕೆಯನ್ನು ಸರ್ಕಾರವು ಅಂಗೀಕರಿಸಿದೆ ಮತ್ತು ವಿಚಾರಣೆಗಾಗಿ ಎರಡು ಸಮಿತಿಗಳನ್ನು ರಚಿಸಲಾಗಿದೆ ಮತ್ತು ಎರಡು ಎಫ್ಐಆರ್‌ಗಳನ್ನು ಸಹ ದಾಖಲಿಸಲಾಗಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಟಿ20 ವಿಶ್ವಕಪ್ ಕ್ರಿಕೆಟ್‌ 2024 : 15 ಆಟಗಾರರ ಭಾರತದ ತಂಡ ಪ್ರಕಟ ; ಕೆಎಲ್ ರಾಹುಲ್ ಗೆ ಕೊಕ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement