ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದೆ. ಮೇ13ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಇಂದು ಬುಧವಾರ ಮತದಾನ ಮುಕ್ತಾಯವಾದ ನಂತರ ಹಲವಾರು ಸಂಸ್ಥೆಗಳು ರಾಜ್ಯದ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಿವೆ. ಮೂರು ಎಕ್ಸಿಟ್ ಪೋಲ್‌ಗಳು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪಮಟ್ಟಿನ ಮುನ್ನಡೆ ತೋರಿಸಿದ್ದು ಅತಂತ್ರ ವಿಧಾನಸಭೆ ಬಗ್ಗೆ ಭವಿಷ್ಯ ನುಡಿದಿವೆ. ಎರಡು ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಸ್ವಲ್ಪಮಟ್ಟಿನ ಮುನ್ನಡೆ ತೋರಿಸಿವೆ. ಆದರೆ ಅವುಗಳು ಕೂಡ ಬಹುತೇಕ ಅತಂತ್ರ ವಿಧಾನಸಭೆಯತ್ತಲೇ ಬೊಟ್ಟು ಮಾಡಿವೆ. ಎಚ್‌ಡಿ ಕುಮಾರಸ್ವಾಮಿ ಅವರ ಜೆಡಿಎಸ್ ಕಿಂಗ್‌ಮೇಕರ್ ಆಗುವ ಸಾಧ್ಯತೆಯಿದೆ ಎಂದು
ಅವು ಹೇಳಿವೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಸಂಜೆ 6ಕ್ಕೆ ಅಂತ್ಯಗೊಂಡಿದೆ. ಸಂಜೆ 5ಗಂಟೆಯ ವೇಳೆಗೆ ಶೇ.65.69ರಷ್ಟು ಮತದಾನ ನಡೆದಿದೆ.
ಚುನಾವಣೋತ್ತರ ಸಮೀಕ್ಷೆಯಂತೆ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು..?
ನ್ಯೂಸ್ ನೇಶನ್-ಸಿಜಿಎಸ್
ಬಿಜೆಪಿ 114
ಕಾಂಗ್ರೆಸ್- 86
ಜೆಡಿಎಸ್ 21
ಇತರರು -3
ಸಿ-ವೋಟರ್ ಸಮೀಕ್ಷೆ
ಬಿಜೆಪಿ 83-95
ಕಾಂಗ್ರೆಸ್ 100-112
ಜೆಡಿಎಸ್ 21-29
ಇತರರು 02-6 ಸ್ಥಾನ
ರಿಪಬ್ಲಿಕ್ -PMARQ
ಬಿಜೆಪಿ 85-100
ಕಾಂಗ್ರೆಸ್ 94-108
ಜೆಡಿಎಸ್ 24-32
ಇತರೆ 2-6
ಏಷ್ಯಾನೆಟ್ ಸುವರ್ಣ-ಜನ್ ಕಿ ಬಾತ್
ಬಿಜೆಪಿ 94-117
ಕಾಂಗ್ರೆಸ್ 91-106
ಜೆಡಿಎಸ್ 14 -24
ಜೀ ನ್ಯೂಸ್-ಮ್ಯಾಟ್ರೈಜ್
ಕಾಂಗ್ರೆಸ್ 103-118
ಬಿಜೆಪಿ 79-94
ಜೆಡಿಎಸ್- 25-33
ಇತರ 2-5
ಟಿವಿ9 ಭಾರತ್ ವರ್ಷ ಪೋಲ್ ಸ್ಟಾರ್ಟ್
ಬಿಜೆಪಿ 88-98
ಕಾಂಗ್ರೆಸ್ 99-109
ಜೆಡಿಎಸ್- 21-26
ಇತರ 0-4
ನಿಮ್ಮ ಕಾಮೆಂಟ್ ಬರೆಯಿರಿ