ಕರ್ನಾಟಕ ವಿಧಾನಸಭೆ ಚುನಾವಣೆ: ರಾಜ್ಯಾದ್ಯಂತ ದಾಖಲೆ ಪ್ರಮಾಣದ ಮತದಾನ, ಬೆಂಗಳೂರು ನೀರಸ – ಜಿಲ್ಲಾವಾರು ಮಾಹಿತಿ ಇಲ್ಲಿದೆ

posted in: ರಾಜ್ಯ | 0

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ದಾಖಲೆಯ ಮತದಾನವಾಗಿದ್ದು, ಕಳೆದ ಬಾರಿಗಿಂತಲೂ ಶೇಕಡಾವಾರು ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಈ ಬಾರಿ 72.67%ರಷ್ಟು ಮತದಾನವಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ 72.44%ರಷ್ಟು ಮತದಾನವಾಗಿತ್ತು ಹಾಗೂ 2013ರ ಚುನಾವಣೆಯಲ್ಲಿ 71.83ರಷ್ಟು ಮತದಾನವಾಗಿತ್ತು. ಇದಕ್ಕೆ ಮೋಸ್ಟಲ್‌ ಮತದಾನ ಹಾಗೂ ಮನೆಯಿಂದಲೇ ಮತದಾನ ಮಾಡಿದ 80 ವರ್ಷ ಮೇಲ್ಪಟ್ಟವರು ಹಾಗೂ ವಿಕಲಚೇತನರ ಮತದಾನದ ಸಂಖ್ಯೆಯೂ ಸೇರಿದರೆ ಇದು ಇನ್ನಷ್ಟು ಹೆಚ್ಚಾಗಬಹುದು. 2018ರ ವಿಧಾನಸಭೆ ಚುನಾವಣೆಯಲ್ಲಿ 72.44%ರಷ್ಟು ಮತದಾನವಾಗಿತ್ತು ಹಾಗೂ 2013ರ ಚುನಾವಣೆಯಲ್ಲಿ 71.83ರಷ್ಟು ಮತದಾನವಾಗಿತ್ತು.
ಈ ಮತದಾನ ಪ್ರಮಾಣ ಯಾರಿಗೆ ಲಾಭವಾಗಬಹುದು ಎಂಬ ಚರ್ಚೆಯೂ ಆರಂಭವಾಗಿದೆ. ಹಿಂದಿನ ಟ್ರ್ಯಾಕ್‌ ರೆಕಾರ್ಡ್‌ ಪ್ರಕಾರ ಹೇಳುವುದಾದರೆ ತಮಗೇ ಲಾಭವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಾರಿ 130ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ. ಈ ಮತದಾನದ ಪ್ರಮಾಣ ಹೆಚ್ಚಳದಿಂದ ಯಾರಗೆ ಬಹುಮತ ಸಿಗುತ್ತದೆ ಅಥವಾ ಅತಂತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಜೆಡಿಎಸ್‌ ಕಿಂಗ್‌ ಮೇಕರ್‌ ಆಗುತ್ತದೆಯೋ ಎಂಬಿತ್ಯಾದಿ ಚರ್ಚೆ ಆರಂಭವಾಗಿದೆ.
ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ವೇಳೆ ಆರಂಭದಲ್ಲಿ ಮತದಾರರಲ್ಲಿ ಮಾಡಲು ನಿರುತ್ಸಾಹ ಕಂಡು ಬಂದಿತ್ತು, ಆದರೆ ಸಮಯ ಕಳೆದಂತೆ ಮತದಾರರು ಮತದಾನ ಕೇಂದ್ರಗಳತ್ತ ಆಗಮಿಸಿ, ಮತದಾನವನ್ನು ಮಾಡಿದ್ದಾರೆ. ಆದರೆ ಬೆಂಗಳೂರು ನಗರ ಮತದಾರರು ಮಾತ್ರ ಈ ಬಾರಿಯೂ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಈ ಬಾರಿಯೂ ಬೃಹನ್‌ ಬೆಂಗಳೂರು ನಗರದಲ್ಲಿ ಮತದಾನ ಶೇ.60 ದಾಟಿಲ್ಲ. ನಗರಬುಧವಾರ ನಡೆದ ಮತದಾನದ ವೇಳೆ ಅಲ್ಲಲ್ಲಿ ಸಣ್ಣ ಪುಟ್ಟ ಗಲಾಟೆ, ಹಾಗೂ ಮತ ಯಂತ್ರಗಳ ದೋಶವನ್ನು ಹೊರತು ಪಡಿಸಿ ಮತದಾನ ಬಹುತೇಕವಾಗಿ ಶಾಂತಿಯುತವಾಗಿತ್ತು.
ಜಿಲ್ಲಾವಾರು ಮತದಾನದ ಪ್ರಮಾಣದ ವಿವರಗಳು ಈ ಕೆಳಗಿನಂತಿವೆ.
1 ಬೆಳಗಾವಿ-76.33
2 ಬಾಗಲಕೋಟೆ-74.63
3 ವಿಜಯಪುರ-70.78
4 ಕಲಬುರ್ಗಿ-65.22
5 ಯಾದಗಿರಿ-66.66
6 ಬೀದರ-71.66
7 ರಾಯಚೂರು-69.79
8 ಕೊಪ್ಪಳ-77.25
9 ಗದಗ 75.21
10 ಧಾರವಾಡ-71.02
11 ಉತ್ತರ ಕನ್ನಡ -76.72
12 ಹಾವೇರಿ- 81.17
13 ವಿಜಯನಗರ-77.62
14 ಬಳ್ಳಾರಿ-76.13
15 ಚಿತ್ರದುರ್ಗ-80.37
16 ದಾವಣಗೆರೆ-77.47
17 ಶಿವಮೊಗ್ಗ -77.22
18 ಉಡುಪಿ -78.46
19 ಚಿಕ್ಕಮಗಳೂರು-77.89
20 ತುಮಕೂರು-83.46
21 ಚಿಕ್ಕಬಳ್ಳಾಪುರ-85.83
22 ಕೋಲಾರ-81.22
23 ಬೆಂಗಳೂರು ನಗರ-56.98
24 ಬೆಂಗಳೂರು ಗ್ರಾಮಾಂತರ-83.76
25 ಬಿಬಿಎಂಪಿ (ಉತ್ತರ)-52.88
26 ಬಿಬಿಎಂಪಿ (ಕೇಂದ್ರ)-55.39
27 ಬಿಬಿಎಂಪಿ (ದಕ್ಷಿಣ)-52.80
28 ರಾಮನಗರ-84.98
29 ಮಂಡ್ಯ-84.36
30 ಹಾಸನ-81.59
31 ದಕ್ಷಿಣ ಕನ್ನಡ -76.15
32 ಕೊಡಗು-74.74
33 ಮೈಸೂರು-75.04
34 ಚಾಮರಾಜನಗರ-80.81
ಒಟ್ಟು 72.67

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್: ಡಿನೋಟಿಫಿಕೇಶನ್‌ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement