ಭಾರತದ 30 ಹೈ ಸ್ಟ್ರೀಟ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆಗೆ ಮೊದಲ ಸ್ಥಾನ, ಟಾಪ್ 10ರಲ್ಲಿ ಬೆಂಗಳೂರಿನ 4 ರಸ್ತೆಗಳು…!

ಬೆಂಗಳೂರು: ಸಮೀಕ್ಷೆಯೊಂದರಲ್ಲಿ ಬೆಂಗಳೂರು ಮಹಾನಗರದ ಪ್ರಮುಖ ರಸ್ತೆಗಳಲ್ಲೊಂದಾದ ಮಹಾತ್ಮಾ ಗಾಂಧಿ (ಎಂ.ಜಿ.ರಸ್ತೆ) ರಸ್ತೆಯು ದೇಶದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲೇ ನಂಬರ್ ಒನ್ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪ್ರಾಪರ್ಟಿ ಕನ್ಸಲ್ಟೆಂಟ್ ನೈಟ್ ಫ್ರಾಂಕ್ ಅವರು ಬಿಡುಗಡೆ ಮಾಡಿರುವ ಭಾರತದ ಟಾಪ್ 30 ಹೈ ಸ್ಟ್ರೀಟ್‌ಗಳ ಪಟ್ಟಿಯಲ್ಲಿ ಬೆಂಗಳೂರಿನ ಐಕಾನಿಕ್ ಮಹಾತ್ಮಾ ಗಾಂಧಿ ರಸ್ತೆ (ಎಂ.ಜಿ.ರಸ್ತೆ) ಮೊದಲ ಸ್ಥಾನದಲ್ಲಿದೆ. ಅಲ್ಲದೆ, ಸಮೀಕ್ಷೆಯಲ್ಲಿ ಟಾಪ್‌-10ರಲ್ಲಿ ಬೆಂಗಳೂರಿನ ನಾಲ್ಕು ರಸ್ತೆಗಳು ಸ್ಥಾನ ಪಡೆದಿವೆ.
‘ಥಿಂಕ್ ಇಂಡಿಯಾ ಥಿಂಕ್ ರಿಟೇಲ್ 2023’ ಎಂಬ ಶೀರ್ಷಿಕೆಯ ವರದಿಯಲ್ಲಿ ಹೈದರಾಬಾದ್‌ನ ಸೋಮಾಜಿಗುಡಾ ಮತ್ತು ಮುಂಬೈನ ಲಿಂಕಿಂಗ್ ರೋಡ್ ಎರಡನೇ ಮತ್ತು ಮೂರನೇ ಸ್ಥಾನ ಪಡೆದಿವೆ. ಬೆಂಗಳೂರಿನಿಂದ ಕಮರ್ಷಿಯಲ್ ಸ್ಟ್ರೀಟ್ 7ನೇ ಸ್ಥಾನ, ಬ್ರಿಗೇಡ್ ರಸ್ತೆ 9ನೇ ಸ್ಥಾನ, ಮತ್ತು ಚರ್ಚ್ ಸ್ಟ್ರೀಟ್ (10ನೇ) ಸ್ಥಾನ ಪಡೆದಿದೆ. ದೆಹಲಿಯ ದಕ್ಷಿಣ ವಿಸ್ತರಣೆ (ಭಾಗ 1 ಮತ್ತು ಭಾಗ 2) 4ನೇ ಸ್ಥಾನ, ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್ ಮತ್ತು ಕ್ಯಾಮಾಕ್ ಸ್ಟ್ರೀಟ್ (5 ನೇ), ಚೆನ್ನೈನ ಅಣ್ಣಾ ನಗರ 6ನೇ ಸ್ಥಾನ ಮತ್ತು ನೋಯ್ಡಾದ ಸೆಕ್ಟರ್ 18 ಮಾರುಕಟ್ಟೆ 8ನೇ ಸ್ಥಾನ ಪಡೆಯುವ ಮೂಲಕ ಮೊದಲ ಹತ್ತು ಸ್ಥಾನಗಳಲ್ಲಿ ಸ್ಥಾನ ಪಡೆದಿವೆ.

ನೈಟ್ ಫ್ರಾಂಕ್ ಎಂಬ ರಿಯಲ್ ಎಸ್ಟೇಟ್ ವಲಯದ ಸಲಹಾ ಸಂಸ್ಥೆಯೊಂದು, ದೇಶದ ನಾನಾ ನಗರಗಳಲ್ಲಿರುವ ಪ್ರಮುಖ ರಸ್ತೆಗಳ ಸಮೀಕ್ಷೆಯನ್ನು ನಡೆಸಿದೆ. ಅದರಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆ ನಂ. 1 ಎಂದು ಹೇಳಲಾಗಿದೆ. ಈ ವಿಚಾರವನ್ನು “ಥಿಂಕ್ ಇಂಡಿಯಾ, ಥಿಂಕ್ ರಿಟೇಲ್ 2023 – ಹೈ ಸ್ಟ್ರೀಟ್ ರಿಯಲ್ ಎಸ್ಟೇಟ್ ಔಟ್ ಲುಕ್’ ಎಂಬ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ, ಕೋಲ್ಕತಾ, ಹೈದರಾಬಾದ್, ಚೆನ್ನೈ ಸೇರಿದಂತೆ ದೇಶದ 9 ಪ್ರಮುಖ ನಗರಗಳ 30ಕ್ಕೂ ಹೆಚ್ಚು ವಾಣಿಜ್ಯ ರಸ್ತೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು ಎಂದು ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಹೇಳಿದೆ.
ನೈಟ್ ಫ್ರಾಂಕ್ ಸಂಸ್ಥೆಯ ಸಮೀಕ್ಷೆಯಲ್ಲಿ ಹಲವು ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿತ್ತು. ನೈಟ್ ಫ್ರಾಂಕ್ ಇಂಡಿಯಾ ಐದು ನಿಯತಾಂಕಗಳನ್ನು ಆಧರಿಸಿ ಶ್ರೇಯಾಂಕಗಳನ್ನು ನಿರ್ಧರಿಸಿದೆ. ಪಾರ್ಕಿಂಗ್, ಸಾರ್ವಜನಿಕ ಸಾರಿಗೆ, ಅಂಗಡಿ-ಮುಂಗಟ್ಟುಗಳ ಗೋಚರತೆ, ಖರ್ಚು ಪ್ರಮಾಣ ಮತ್ತು ಸರಾಸರಿ ವ್ಯಾಪಾರ ಸಾಂದ್ರತೆ — ಇದು ಗ್ರಾಹಕರಿಗೆ ಉತ್ತಮ ರಸ್ತೆಗಳು ಒದಗಿಸುವ ಅನುಭವದ ಗುಣಮಟ್ಟವನ್ನು ನಿರ್ಧರಿಸಿದೆ. ಈ ಮಾನದಂಡಗಳನ್ನು ಅಳವಡಿಸಿಕೊಂಡು ಈ ಸಮೀಕ್ಷೆ ನಡೆಸಲಾಗಿತ್ತು.

ಪ್ರಮುಖ ಸುದ್ದಿ :-   ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರವೇಶ ಪತ್ರ ಪ್ರಕಟ: ಜೂನ್‌ 30 ರಂದು ಪರೀಕ್ಷೆ

ಅಲ್ಲದೆ, ಪ್ರಮುಖ ವಾಣಿಜ್ಯ ರಸ್ತೆಗಳು ಇತರ ಯಾವ ಪ್ರಮುಖ ರಸ್ತೆಗಳನ್ನು ಸುಲಭವಾಗಿ ಸಂಪರ್ಕಿಸಬಹುದು ಎಂಬ ಮಾನದಂಡದಡಿ ಬೆಂಗಳೂರಿನ ಎಂ.ಜಿ. ರಸ್ತೆ ಅಗ್ರಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ರಸ್ತೆಯು ಪ್ರಮುಖ ರಸ್ತೆಗಳಾದ ಬ್ರಿಗೇಡ್ ರಸ್ತೆ, ರೆಸೆಡೆನ್ಸಿ ರಸ್ತೆ ಸೇರಿ ಹಲವಾರು ರಸ್ತೆಗಳನ್ನು ಸಂಪರ್ಕಿಸುತ್ತದೆ. ಇದೇ ಪಟ್ಟಿಯಲ್ಲಿ ಸೋಮಾಜಿಗುಡ (ಹೈದರಾಬಾದ್), ಕೊಲಾಬಾ ಕಾಸ್ ವೇ (ಮುಂಬೈ), ಅಣ್ಣಾನಗರ (ಚೆನ್ನೈ), ಪಾಕ್ ಸ್ಟ್ರೀಟ್ (ಕೋಲ್ಕತ್ತಾ), ಕೊಮ್ಯಾಕ್ ಸ್ಟ್ರೀಟ್ (ಕೋಲ್ಕತ್ತಾ) ರಸ್ತೆಗಳು ಆನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ ಎಂದು ಸಮೀಕ್ಷೆಯು ಹೇಳಿದೆ.

ಉತ್ತಮವಾಗಿ ಯೋಜಿತ ರಸ್ತೆಗಳು…
ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷೆ ದಿವ್ಯಾ ಅಗರ್ವಾಲ್ ಅವರು ಹೇಳುವಂತೆ, ದೇಶದ ಬಹುತೇಕ ನಗರಗಳಲ್ಲಿರುವ ವಾಣಿಜ್ಯ ರಸ್ತೆಗಳು, ಸಾರ್ವಜನಿಕ ಸಾರಿಗೆ ಸೌಲಭ್ಯದ ತಾಣಗಳಿಗೆ ಸಮೀಪದಲ್ಲಿರುವುದು, ಆ ರಸ್ತೆಗಳಲ್ಲಿ ಪಾರ್ಕಿಂಗ್ ಸೌಲಭ್ಯಕ್ಕೆ ಅವಕಾಶವಿರುವುದು ಹಾಗೂ ಆ ರಸ್ತೆಗಳಲ್ಲಿನ ಅಂಗಡಿ-ಮುಂಗಟ್ಟುಗಲು ಸಾರ್ವಜನಿಕರಿಗೆ ವಿಶೇಷವಾಗಿ ಗೋಚರಿಸುವಂತಿರುವುದು- ಇವೆಲ್ಲವೂ ಆ ರಸ್ತೆಯನ್ನು ಯೋಜನಾಬದ್ಧವಾಗಿ ನಿರ್ಮಿಸಲಾಗಿರುವುದನ್ನು ಸಾಬೀತುಪಡಿಸುತ್ತದೆ. ಹಾಗಾಗಿಯೇ, ಬೆಂಗಳೂರಿನ ನಾಲ್ಕು ರಸ್ತೆಗಳು ಅಗ್ರ ನಾಲ್ಕು ಸ್ಥಾನಗಳಲ್ಲಿ ಕಾಣಿಸಿಕೊಂಡಿವೆ ಎಂದು ಹೇಳಿದ್ದಾರೆ.
ಯೋಜನಾಬದ್ಧವಾಗಿ ನಿರ್ಮಾಣಗೊಳ್ಳದಿರುವ ದೆಹಲಿಯ, ಖಾನ್ ಮಾರ್ಕೆಟ್, ಡಿಎಲ್ಎಫ್ ಗಲ್ಲೇರಿಯಾ ರಸ್ತೆಗಳು ಸಮೀಕ್ಷೆಯಲ್ಲಿ ಅಂತಿಮ ಎರಡು ಸ್ಥಾನಗಳನ್ನು ಪಡೆದಿವೆ’’ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಸೇರಿ ನಾಲ್ವರು ಮತ್ತೆ ಪೊಲೀಸ್‌ ಕಸ್ಟಡಿಗೆ ; ಪವಿತ್ರಾಗೆ ನ್ಯಾಯಾಂಗ ಬಂಧನ

ಖಾನ್ ಮಾರ್ಕೆಟ್ (ದೆಹಲಿ) ಮತ್ತು DLF ಗ್ಯಾಲೇರಿಯಾ (ಗುರುಗ್ರಾಮ) ನಂತಹ ಒಳಮುಖವಾಗಿ ಕಾಣುವ ಮಾರುಕಟ್ಟೆಗಳು ತುಂಬಾ ಕಡಿಮೆ ಅಂಕಗಳನ್ನು ಗಳಿಸಿವೆ. ಇದಕ್ಕೆ ವ್ಯತಿರಿಕ್ತವಾಗಿ, ಎಂಜಿ ರಸ್ತೆ (ಬೆಂಗಳೂರು), ಸೋಮಾಜಿಗುಡ (ಹೈದರಾಬಾದ್), ಲಿಂಕಿಂಗ್ ರಸ್ತೆ (ಮುಂಬೈ), ಅಣ್ಣಾ ನಗರ, ಪಾರ್ಕ್ ಸ್ಟ್ರೀಟ್ ಮತ್ತು ಕ್ಯಾಮಾಕ್ ಸ್ಟ್ರೀಟ್ (ಕೋಲ್ಕತ್ತಾ) ನಂತಹ ಪ್ರವೇಶ ರಸ್ತೆಗಳ ಉದ್ದಕ್ಕೂ ಜೋಡಿಸಲಾದ ಮಾರುಕಟ್ಟೆಗಳು ಪಟ್ಟಿಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿವೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಪ್ರದೇಶವು ಹಲವಾರು ಶಾಪಿಂಗ್ ಸೆಂಟರ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಿಗೆ ನೆಲೆಯಾಗಿದೆ, ಇದು ನಗರದ ವಿವಿಧ ಭಾಗಗಳಿಂದ ಗ್ರಾಹಕರನ್ನು ಆಕರ್ಷಿಸುತ್ತದೆ. ಜಾಗತಿಕ ನಗರಗಳಿಗೆ ಹೋಲಿಸಿದರೆ, ಚಿಲ್ಲರೆ ವ್ಯಾಪಾರಿಗಳುಅಂಗಡಿಯನ್ನು ಸ್ಥಾಪಿಸಲು ಭಾರತೀಯ ಹೈ ಸ್ಟ್ರೀಟ್‌ಗಳು ಕಡಿಮೆ ದುಬಾರಿಯಾಗಿದೆ ಎಂದು ವರದಿಯು ಕಂಡುಹಿಡಿದಿದೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement