ಕೃಷ್ಣ ಸಾಗರ ಸರೋವರದಲ್ಲಿ ಮುಳುಗಿ 5 ಮಕ್ಕಳು ಸಾವು

ಗುಜರಾತ್‌ನ ಬೊಟಾಡ್ ಜಿಲ್ಲೆಯ ಕೃಷ್ಣ ಸಾಗರ ಸರೋವರದಲ್ಲಿ ಶನಿವಾರ ಕನಿಷ್ಠ ಐವರು ಮಕ್ಕಳು ಮುಳುಗಿ ಸಾವಿಗೀಡಾಗಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಮಕ್ಕಳು ಸರೋವರದಲ್ಲಿ ಈಜುತ್ತಿದ್ದಾಗ ಅವರು ಮುಳುಗಿದ್ದಾರೆ. ಸ್ಥಳದಲ್ಲಿದ್ದ ಇತರ ಮೂವರು ಮಕ್ಕಳು ಅವರನ್ನು ರಕ್ಷಿಸಲು ಕೆರೆಗೆ ಹಾರಿದ್ದಾರೆ. ಆದರೆ, ಅವರೂ ನೀರಿನಲ್ಲಿ ಮುಳುಗಿದ್ದಾರೆ. ಮೃತರೆಲ್ಲರೂ ಅಪ್ರಾಪ್ತರು. ಸಂಜೆ 4.30ರ ಸುಮಾರಿಗೆ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಬೋಟಾಡ್ ಪಟ್ಟಣದ ಹೊರಗಿನ ಕೃಷ್ಣ ಸಾಗರ ಕೆರೆಯಲ್ಲಿ ಮುಳುಗಿ ಐವರು ಮಕ್ಕಳು ಸಾವಿಗೀಡಾಗಿದ್ದಾರೆ. ಇಬ್ಬರು ಮಕ್ಕಳು ಮಧ್ಯಾಹ್ನ ಈಜುತ್ತಿದ್ದಾಗ ನೀರಿನಲ್ಲಿ ಮುಳುಗಲು ಪ್ರಾರಂಭಿಸಿದರು. ಸ್ಥಳದಲ್ಲಿದ್ದ ಇತರ ಮೂವರು ಅವರನ್ನು ರಕ್ಷಿಸಲು ನೀರಿಗೆ ಹಾರಿದರು ಆದರೆ ಅವರೂ ನೀರಿನಲ್ಲಿ ಮುಳುಗಿದರು. ಎಲ್ಲರ ವಯಸ್ಸು 16-17 ವರ್ಷಗಳು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೊಟಾಡ್ ಎಸ್ಪಿ ಕಿಶೋರ್ ಬಲೋಲಿಯಾ ಅವರು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement