ತನ್ನ ಒಂದು ವರ್ಷದ ಮಗುವನ್ನು ಸಿಎಂ ಇದ್ದ ವೇದಿಕೆಯ ಮೇಲೆ ಎಸೆದ ವ್ಯಕ್ತಿ..! ಕಾರಣ ತಿಳಿದರೆ ನಿಮ್ಮ ಕರುಳು ಕಿತ್ತು ಬರುತ್ತದೆ

ಸಾಗರ : ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಸಾಗರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ವ್ಯಕ್ತಿಯೊಬ್ಬರು ತನ್ನ ಒಂದು ವರ್ಷದ ಮಗುವನ್ನು ವೇದಿಕೆಯ ಮೇಲೆ ಎಸೆದಿರುವ ಘಟನೆ ನಡೆದಿದೆ.
ಇದು ಮಗುವಿನ ಜೀವ ಉಳಿಸಲು ತಂದೆಯ ಹತಾಶ ಪ್ರಯತ್ನವಾಗಿತ್ತು. ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಮುಖೇಶ ಪಟೇಲ್ ಎಂಬವರು ತಮ್ಮ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳು ಗಮನ ಸೆಳೆಯಬೇಕೆಂದು ಈ ರೀತಿ ಮಾಡಿರುವುದಾಗಿ ಹೇಳಿದ್ದಾರೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮುಖೇಶ ಪಟೇಲ್ ಅವರು ತಮ್ಮ ಮಗುವನ್ನು ಮುಖ್ಯಮಂತ್ರಿ ಮಾತನಾಡುತ್ತಿದ್ದ ವೇದಿಕೆ ಮೇಲೆ ಎಸೆದಿದ್ದು ಸಾಕಷ್ಟು ಸಂಚಲನ ಮೂಡಿಸಿತ್ತು ಹಾಗೂ ಮುಖ್ಯಮಂತ್ರಿ ಚೌಹಾಣ್ ಅವರ ಗಮನವನ್ನೂ ಸೆಳೆದಿತ್ತು. ಜನರ ಗುಂಪಿನಿಂದ ಹಾರಿ ಬಂದ ಒಂದು ವರ್ಷದ ಮಗು ವೇದಿಕೆಯಿಂದ ಒಂದು ಅಡಿ ದೂರದಲ್ಲಿ ಬಿತ್ತು. ಕಾರ್ಯಕ್ರಮದಲ್ಲಿದ್ದ ಭದ್ರತಾ ಸಿಬ್ಬಂದಿ ಕೂಡಲೇ ಮಗುವನ್ನು ತಾಯಿಗೆ ಒಪ್ಪಿಸಿದರು.
ಮಗುವಿನ ತಂದೆ ಮುಖೇಶ ಪಟೇಲ್ ಮಾಡಿದ ಈ ಕ್ರಮವು ಮುಖ್ಯಮಂತ್ರಿ ಚೌಹಾಣ್ ಅವರ ಗಮನ ಸೆಳೆದಿದ್ದು ಅವರು ಆತನ ಸಮಸ್ಯೆಗಳ ಬಗ್ಗೆ ಕೇಳುವಂತಾಯಿತು. ಪಟೇಲ್ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತನ್ನ ಮಗನಿಗೆ ಹೃದಯದಲ್ಲಿ ರಂಧ್ರವಿದೆ ಮತ್ತು ತನ್ನಿಂದ ಆತನಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ತಲುಪಿದ್ದು, ಅವರು ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ತಕ್ಷಣವೇ ಮುಖ್ಯಮಂತ್ರಿಗಳ ಕಚೇರಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿ ದೀಪಕ್ ಆರ್ಯ ಅವರಿಗೆ ಸೂಚನೆ ನೀಡಿದರು.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

ಮುಖೇಶ್ ಪಟೇಲ್ ಸಾಗರದ ಕೆಸ್ಲಿ ತಹಸಿಲ್‌ನ ಸಹಜ್‌ಪುರ ಗ್ರಾಮದ ನಿವಾಸಿ. ಅವರು ತಮ್ಮ ಪತ್ನಿ ನೇಹಾ ಮತ್ತು ಅವರ ಒಂದು ವರ್ಷದ ಮಗನೊಂದಿಗೆ ವಾಸಿಸುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖೇಶ್, 3 ತಿಂಗಳ ಮಗುವಿದ್ದಾಗ ವೈದ್ಯರು ತಮ್ಮ ಮಗನ ಹೃದಯದಲ್ಲಿ ರಂಧ್ರವನ್ನು ಪತ್ತೆ ಮಾಡಿದ್ದಾರೆ. ವೆಚ್ಚ ಭರಿಸಲು ಸಾಧ್ಯವಾಗದಿದ್ದರೂ ಮಗನ ಚಿಕಿತ್ಸೆಗಾಗಿ ಇಲ್ಲಿಯವರೆಗೆ 4 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.
ನಮ್ಮ ಮಗುವಿಗೆ ಈಗ ಒಂದು ವರ್ಷ, ವೈದ್ಯರು ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ಹೇಳಿದ್ದಾರೆ. ಅವರು ಇದಕ್ಕೆ 3.50 ಲಕ್ಷ ರೂ. ವೆಚ್ಚವಾಗುತ್ತದೆ ಎಂದುತಿಳಿಸಿದ್ದಾರೆ. ಅಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಲು ನಮಗೆ ಸಾಧ್ಯವಾಗುತ್ತಿಲ್ಲ, ನಮ್ಮ ಮಗುವಿಗೆ ಚಿಕಿತ್ಸೆ ನೀಡಬೇಕೆಂದು ನಾವು ಬಯಸುತ್ತೇವೆ. ಆದರೆ ಯಾರೂ ನಮಗೆ ಸಹಾಯ ಮಾಡುತ್ತಿಲ್ಲ ಎಂದು ಮುಖೇಶ್ ಹೇಳಿದರು. ಹಾಗೂ ಇದಕ್ಕಾಗಿ ಮುಖ್ಯಮಂತ್ರಿ ಚೌಹಾಣ್ ಅವರ ಬಳಿ ಸಹಾಯ ಕೇಳಲು ಬಂದಿದ್ದೆ ಎಂದು ತಿಳಿಸಿದ್ದಾರೆ.

ಆದರೆ ನಮಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಹ ಅಧಿಕಾರಿಗಳು ಅವಕಾಶ ನೀಡಲಿಲ್ಲ, ಅವರ ಹತ್ತಿರ ಹೋಗಲು ಪೊಲೀಸರು ನಮಗೆ ಸಹಾಯ ಮಾಡಲಿಲ್ಲ, ಆದರೆ ಅವರು ನನ್ನ ಮಾತು ಕೇಳಬೇಕು, ನನ್ನನ್ನು ಗಮನಿಸಬೇಕು ಎಂಬ ಏಕೈಕ ದೃಷ್ಟಿಯಿಂದ ನಾನು ನನ್ನ ಮಗುವನ್ನು ವೇದಿಕೆಯ ಮೇಲೆ ಎಸೆದಿದ್ದೇನೆ. ಈಗ ಅಧಿಕಾರಿಗಳು ವಿಷಯದ ಬಗ್ಗೆ ಗಮನ ಹರಿಸಿದ್ದಾರೆ. ಮತ್ತು ನಾಳೆ ಮುಖ್ಯಮಂತ್ರಿಗಳನ್ನು ಅವರನ್ನು ಭೇಟಿಯಾಗಲು ನಮಗೆ ಹೇಳಿದ್ದಾರೆ” ಎಂದು ಮುಖೇಶ್ ಹೇಳಿದರು.
.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement