ಹಿಂದೂಜಾ ಗ್ರೂಪ್‌ ಅಧ್ಯಕ್ಷ ಎಸ್‌.ಪಿ. ಹಿಂದೂಜಾ ನಿಧನ

ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಶ್ರೀಚಂದ್ ಪರಮಾನಂದ ಹಿಂದುಜಾ ಅವರು ಬುಧವಾರ ಲಂಡನ್‌ನಲ್ಲಿ 87 ನೇ ವಯಸ್ಸಿನಲ್ಲಿ ನಿಧನರಾದರು.
ಕುಟುಂಬದ ವಕ್ತಾರರು ಈ ಸುದ್ದಿಯನ್ನು ತಿಳಿಸಿದ್ದಾರೆ. ಎಸ್‌.ಪಿ.ಹಿಂದುಜಾ ಅವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ನಾಲ್ವರು ಹಿಂದೂಜಾ ಸಹೋದರರಲ್ಲಿ ಎಸ್‌.ಪಿ.ಹಿಂದುಜಾ ಅವರು ಹಿರಿಯರಾಗಿದ್ದರು. ಅವರು ಭಾರತೀಯ ಮೂಲದ ಬ್ರಿಟನ್‌ ಪ್ರಜೆಯಾಗಿದ್ದರು.ಗೋಪಿಚಂದ್, ಪ್ರಕಾಶ್, ಅಶೋಕ್ ಮತ್ತು ಇಡೀ ಹಿಂದೂಜಾ ಕುಟುಂಬವು ಇಂದು ಹಿಂದೂಜಾ ಗ್ರೂಪ್‌ನ ಅಧ್ಯಕ್ಷರಾದ ಎಸ್‌.ಪಿ. ಹಿಂದುಜಾ ಅವರ ನಿಧನವನ್ನು ವಿಷಾದಿಂದ ತಿಳಿಸುತ್ತಿದ್ದೇವೆ ಎಂದು ವಕ್ತಾರರು ತಿಳಿಸಿದ್ದಾರೆ.
ಅವರು ನಮ್ಮ ದಿವಂಗತ ತಂದೆ ಪಿ.ಡಿ. ಹಿಂದುಜಾ ಅವರ ಸಂಸ್ಥಾಪಕ ತತ್ವಗಳು ಮತ್ತು ಮೌಲ್ಯಗಳನ್ನು ನೀಡುವ ಮೂಲಕ ಕುಟುಂಬಕ್ಕೆ ಮಾರ್ಗದರ್ಶಕರಾಗಿದ್ದರು. ಅವರು ತಮ್ಮ ಆತಿಥೇಯ ದೇಶವಾದ ಯುಕೆ ಮತ್ತು ಅವರ ತವರು ದೇಶವಾದ ಭಾರತದ ನಡುವೆ ಬಲವಾದ ಸಂಬಂಧವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು ಎಂದು ಕುಟುಂಬ ತಿಳಿಸಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement