ಕ್ಷುಲ್ಲಕ ಕಾರಣಕ್ಕೆ ಮದುವೆ ವೇಳೆ ವಿಷ ಕುಡಿದ ಜೋಡಿ; ವರ ಸಾವು, ವಧು ಗಂಭೀರ

ಇಂದೋರ್‌: ಬಹಳ ವರ್ಷಗಳ ಕಾಯುವಿಕೆ ನಂತರ ವಿವಾಹ ಆಗುತ್ತಿರುವುದಕ್ಕೆ ನವ ಜೋಡಿಯೊಂದು ತಾಳಿ ಕಟ್ಟುವ ಮುನ್ನವೇ ಹಸೆಮಣೆ ಮೇಲೆ ವಿಷ ಸೇವಿಸಿರುವ ಘಟನೆ ಮಧ್ಯಪ್ರದೇಶ ಇಂದೋರ್‌ ನಗರದಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ವಿಷ ಸೇವನೆಯಿಂದ 21 ವರ್ಷದ ವರ ಮೃತಪಟ್ಟಿದ್ದು, 20 ವರ್ಷದ ವಧುವಿನ ಸ್ಥಿತಿ ಗಂಭೀರವಾಗಿದೆ. ಘಟನೆ ಮೇ 16 ರಂದು ನಡೆದಿದೆ.
ಮಧ್ಯಪ್ರದೇಶ ಇಂದೋರಿನಲ್ಲಿ ಈ ಘಟನೆ ನಡೆದಿದ್ದು, ವಧು-ವರರ ಮಧ್ಯೆ ಜಗಳವಾಗಿ ವರ ಮೊದಲು ವಿಷಯ ಸೇವಿಸಿದ್ದಾನೆ ಎನ್ನಲಾಗಿದೆ. ವಿಷ ಸೇವಿಸಿದ ವಧು, ವರರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ವರ ಮೃತಪಟ್ಟಿದ್ದು, ವಧು ಜೀವನ್ಮರಣ ಹೋರಾಟ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನಾಡಿಯಾ ಪ್ರದೇಶದ ಆರ್ಯ ಸಮಾಜ ದೇವಾಲಯದಲ್ಲಿ ವಿವಾಹ ಸಮಾರಂಭ ನಡೆಯುವ ವೇಳೆ ವಧು, ವರರ ನಡುವೆ ವಿವಾಹದ ಕುರಿತು ವಾಗ್ವಾದ ನಡೆದಿದೆ. ಬಳಿಕ ವರ ತಾನು ವಿಷ ಸೇವಿಸಿರುವುದಾಗಿ ವಧುವಿಗೆ ತಿಳಿಸಿದ್ದಾನೆ. ಆಗ ವಧು ಸಹ ವಿಷ ಸೇವಿಸಿದ್ದಾಳೆ” ಎಂದು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ರಂಜಾನ್ ಖಾನ್‌ ಸುದ್ದಿಗಾರರಿಗೆ ತಿಳಿಸಿದರು.

ಪ್ರಮುಖ ಸುದ್ದಿ :-   ಇತ್ತೀಚಿನ ಚುನಾವಣೆಯ ನಂತರ ರಾಜ್ಯಸಭೆಯಲ್ಲಿ ಬಹುಮತ ಪಡೆಯಲು ಎನ್‌ಡಿಎಗೆ ಕೇವಲ 3 ಸ್ಥಾನದ ಕೊರತೆ

ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ವರ ಮೃತಪಟ್ಟಿರುವುದಾಗಿ ಘೋಷಿಸಿದರು. ವಧು ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಮುಂದುವರಿದಿದೆ” ಎಂದು ಅವರು ಹೇಳಿದರು.
ಯುವತಿಯು ಯುವಕನನ್ನು ಮದುವೆಯಾಗುವಂತೆ ಹಲವು ದಿನಗಳಿಂದ ಪೀಡಿಸುತ್ತಿದ್ದಳು. ತನ್ನ ವೃತ್ತಿಯಲ್ಲಿ ಮೇಲೆ ಬರಲು ಎರಡು ವರ್ಷ ಕಾಲಾವಕಾಶ ಬೇಕು ಎಂದು ಯುವಕ ಹೇಳಿದ್ದ. ಇದರಿಂದ ಸಿಟ್ಟಿಗೆದ್ದ ಯುವತಿ ಯುವಕನ ಮೇಲೆ ಪೊಲೀಸರಿಗೆ ದೂರು ನೀಡಿದ್ದಳು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಗೆ ಸೂಚಿಸಿದ್ದಾನೆ ಎಂದು ಹೇಳಲಾಗಿದೆ. ಈ ವಿಚಾರ ಮದುವೆ ವೇಳೆ ಮತ್ತೆ ಪ್ರಸ್ತಾಪವಾಗಿ ವಾಗ್ವಾದ ಉಂಟಾಯಿತು ಎಂದು ವರನ ಕುಟುಂಬ ಸದಸ್ಯರು ತಿಳಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.
ಮಧ್ಯಪ್ರದೇಶ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ವಧು ಮತ್ತು ವರನ ಕಡೆಯವರ ವಿಚಾರಣೆ ನಡೆಸಿದ್ದಾರೆ. ಶೀಘ್ರವೇ ಇಬ್ಬರ ಆತ್ಮಹತ್ಯೆಗೆ ಕಾರಣ ಏನೆಂಬುದು ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement