ಒಂದು ಹುಲಿಯ ಆಹಾರ ಕದಿಯಲು ಪ್ರಯತ್ನಿಸುವ ಮತ್ತೊಂದು ಹುಲಿ : ಮುಂದೇನಾಯ್ತು | ವೀಕ್ಷಿಸಿ

ಪ್ರಾಣಿ ಸಾಮ್ರಾಜ್ಯವು ನಿಸ್ಸಂದೇಹವಾಗಿ ಆಕರ್ಷಕ ಹಾಗೂ ಅಚ್ಚರಿಯ ವೀಡಿಯೊಗಳನ್ನು ನೀಡುತ್ತದೆ. ಈಗ ಎರಡು ಹುಲಿಗಳ ನಡುವಿನ ಕೆಟ್ಟ ಕಾಳಗವನ್ನು ತೋರಿಸುವ ಅಂತಹ ಚಿಲ್ಲಿಂಗ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇತ್ತೀಚಿನ ದೃಶ್ಯಗಳ ಅಧಿಕೃತ ಯೂ ಟ್ಯೂಬ್ ಚಾನೆಲ್‌ನಲ್ಲಿ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
“ಹೆಣ್ಣು ಹುಲಿಯು ರಸ್ತೆಯಲ್ಲಿ ಸತ್ತು ಬಿದ್ದಿದ್ದ ಜಿಂಕೆಯನ್ನು ನೋಡುತ್ತದೆ, ಆದರೆ ಈ ಊಟವು ಅದಕ್ಕೆ ನಿರೀಕ್ಷಿಸಿದಷ್ಟು ಸುಲಭವಲ್ಲ! ಯಾಕೆಂದರೆ ದೊಡ್ಡ ಗಂಡು ಹುಲಿಯೊಂದು ಹತ್ತಿರದಲ್ಲಿಯೇ ಇತ್ತು. ಹೀಗಾಗಿ ಜಗಳವಿಲ್ಲದೆ ಊಟವನ್ನು ಕದಿಯಲು ಅದು ಪ್ರಯತ್ನಿಸಿತು. ಆದರೆ ಗಂಡು ಹುಲಿ ಬಿಡಲಿಲ್ಲ.

ವೀಡಿಯೋವು ಹುಲಿ ಮತ್ತು ಜಿಂಕೆ ನಡುವೆ ತೀವ್ರವಾದ ಸಂಘರ್ಷವನ್ನು ತೋರಿಸುತ್ತದೆ. ನಂತರ ಅದು ಜಿಂಕೆಯನ್ನು ಸಾಯಿಸುತ್ತದೆ. ರಸ್ತೆಯ ಮಧ್ಯದಲ್ಲಿ ಬಿದ್ದಿರುವ ಶವವನ್ನು ಎಳೆಯಲು ಹುಲಿ ಪ್ರಯತ್ನಿಸುತ್ತಿರುವಾಗ ಮತ್ತೊಂದು ಹುಲಿ ಕಾಣಿಸಿಕೊಳ್ಳುತ್ತದೆ. ಅದು ಹುಲಿಯನ್ನು ಎದುರಿಸುತ್ತದೆ.
ಎರಡು ಹುಲಿಗಳು ಪರಸ್ಪರರ ಮೇಲೆ ಎರಗುತ್ತವೆ ಮತ್ತು ಸ್ವಲ್ಪ ಸಮಯದವರೆಗೆ ಹೋರಾಡುತ್ತವೆ. ಆದಾಗ್ಯೂ, ಶೀಘ್ರದಲ್ಲೇ ಈ ಹಲಿಗಳು ಕದನ ವಿರಾಮ ಘೋಷಿಸುತ್ತವೆ. ಕೊನೆಗೆ ಹೆಣ್ಣು ಹುಲಿ ಹಿಂದೆ ಸರಿಯಲು ನಿರ್ಧರಿಸುತ್ತದೆ.

ಆಗ ಗಂಡು ಹುಲಿ ಪೊದೆಗಳ ಒಳಗೆ ತನ್ನ ಬೇಟೆಯನ್ನು ಎಳೆದುಕೊಂಡು ಹೋಗುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.ಈ ತಿಂಗಳ ಆರಂಭದಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದು 8,85,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು .ಕಂಡಿದೆ.

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement