ಮೈಯಲ್ಲಿ ಹೊಕ್ಕ ‘ಭೂತʼ ಓಡಿಸಲು ಮಾಂತ್ರಿಕನಿಂದ ಬಾಲಕನಿಗೆ ಥಳಿತ : ಗಾಯಗಳಿಂದ ಬಾಲಕ ಸಾವು

ಮುಂಬೈ,: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ 14 ವರ್ಷದ ಅಸ್ವಸ್ಥ ಬಾಲಕನೊಬ್ಬನಿಗೆ ಮೈಯಲ್ಲಿ ಹೊಕ್ಕಿರುವ ಭೂತ ಬಿಡಿಸುವುದಾಗಿ ಹೇಳಿ ಮಾಂತ್ರಿಕರೊಬ್ಬರು ತೀವ್ರವಾಗಿ ಥಳಿಸಿದ ನಂತರ ಆತ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಜಿಲ್ಲೆಯ ಕವಠೆ ಮಹಾಂಕಲ್‌ನಲ್ಲಿ ವಾಸವಿದ್ದ ಆರ್ಯನ್ ದೀಪಕ್ ಲಾಂಜೆ ಎಂಬ ಹದಹರೆಯದ ಬಾಲಕ ಮೇ 20 ರಂದು ಗಾಯಗೊಂಡು ಮೃತಪಟ್ಟಿದ್ದಾನೆ. ಆದರೆ ಮೂಢನಂಬಿಕೆ ವಿರೋಧಿ ಕಾರ್ಯಕರ್ತರು ಪೊಲೀಸರನ್ನು ಸಂಪರ್ಕಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿ ಹೇಳಿದರು.
ಮೂಢನಂಬಿಕೆ ಮತ್ತು ಅಂಧಶ್ರದ್ಧೆ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಕಾರ್ಯಕರ್ತರು ದೂರಿನಂತೆ ದೀಪಕ ಲಾಂಜೆಗೆ ಹಲವು ದಿನಗಳಿಂದ ಜ್ವರವಿತ್ತು, ಚಿಕಿತ್ಸೆ ನೀಡಿದರೂ ಕಡಿಮೆಯಾಗಿರಲಿಲ್ಲ. ಕುಟುಂಬವು ಆತನನ್ನು ನೆರೆಯ ಕರ್ನಾಟಕದ ಶಿರಗೂರಿನ ‘ಮಾಂತ್ರಿಕ’ ಅಪ್ಪಾಸಾಹೇಬ್ ಕಾಂಬಳೆ ಎಂಬಾತನ ಬಳಿಗೆ ಕರೆದೊಯ್ದರು ಎಂದು ಅಧಿಕಾರಿ ಹೇಳಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಹುಡುಗನಿಗೆ “ಭೂತ” ಹಿಡಿದಿದೆ ಎಂದು ಕಾಂಬ್ಳೆ ಹೇಳಿಕೊಂಡಿದ್ದಾನೆ ಮತ್ತು ಮಾಂತ್ರಿಕ ಭೂತವನ್ನು ಓಡಿಸಲು ಬಾಲಕನಿಗೆ ಥಳಿಸಿದ್ದಾನೆ. ಆದರೆ, ಥಳಿತದಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ನಂತರ ಆತನನ್ನು ಕುಟುಂಬಸ್ಥರು ಶಿರ್ಗೂರಿನಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಸಾಂಗ್ಲಿ ಜಿಲ್ಲೆಯ ಮೀರಜ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ವೇಳೆ ಬಾಲಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕನ ಸಾವಿನ ಬಗ್ಗೆ ತಿಳಿದ ನಂತರ, ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಕಾರ್ಯಕರ್ತರು ಆತನ ಕುಟುಂಬ ಸದಸ್ಯರನ್ನು ಮತ್ತು ನಂತರ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ಜಿತೇಂದ್ರ ಶಹಾನೆ ಅವರನ್ನು ಕವಠೆ ಮಹಂಕಲ್ ಪೊಲೀಸ್ ಠಾಣೆಯಲ್ಲಿ ಭೇಟಿಯಾಗಿ ದೂರು ದಾಖಲಿಸಿದ್ದಾರೆ.
ಘಟನೆ ಮಹಾರಾಷ್ಟ್ರ ಗಡಿಯ ಕರ್ನಾಟಕದಲ್ಲಿ ನಡೆದಿದ್ದು, ಆದರೆ ಕರ್ನಾಟಕದಲ್ಲಿ ಯಾವುದೇ ಮೂಢನಂಬಿಕೆ ವಿರೋಧಿ ಕಾನೂನು ಇಲ್ಲದಿರುವುದರಿಂದ, ಮಂತ್ರವಾದಿಯ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ನಿರ್ಲಕ್ಷ್ಯದಿಂದ ಸಾವಿಗೆ ಕಾರಣ) ಅಡಿಯಲ್ಲಿ ಶೂನ್ಯ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.
ಶೂನ್ಯ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ಯಾವುದೇ ಪೊಲೀಸರಿಗೆ ದೂರನ್ನು ಸ್ವೀಕರಿಸಲು ಮತ್ತು ಕ್ರಮಕ್ಕಾಗಿ ಸೂಕ್ತ ಠಾಣೆಗೆ ರವಾನಿಸಲು ಅನುಮತಿಸುತ್ತದೆ.

ಇಂದಿನ ಪ್ರಮುಖ ಸುದ್ದಿ :-   ಪ್ರಧಾನಿ ಮೋದಿ ಭೇಟಿ ಮಾಡಿದ ಚಾಟ್‌ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮನ್ : ಭಾರತದಲ್ಲಿ ಕೃತಕಬುದ್ಧಿಮತ್ತೆ (AI) ಬಳಕೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 2

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement