2022ರ ಯುಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ : ಇಶಿತಾ ಕಿಶೋರ ಟಾಪರ್ | ಟಾಪ್‌-20 ಸ್ಥಾನ ಪಡೆದವರ ಪಟ್ಟಿ ಇಲ್ಲಿದೆ…

ನವದೆಹಲಿ : ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಇಂದು, ಮಂಗಳವಾರ ನಾಗರಿಕ ಸೇವೆಗಳು 2022 ಪರೀಕ್ಷೆ ಫಳಿತಾಂಶವನ್ನು ಬಿಡುಗಡೆ ಮಾಡಿದೆ. ಈ ವರ್ಷ ಮೂರು ವಿಭಿನ್ನ ಹಂತಗಳಲ್ಲಿ ಸಂದರ್ಶನ ನಡೆಸಲಾಗಿದೆ.
ಈ ವರ್ಷವೂ ಮಹಿಳೆಯರು ಪ್ರಾಬಲ್ಯ ಸಾಧಿಸಿದ್ದಾರೆ. ಇಶಿತಾ ಕಿಶೋರ್ ಅಖಿಲ ಭಾರತ ಮಟ್ಟದಲ್ಲಿ ಮೊದಲನೇ ರ್ಯಾಂಕ್‌ ಪಡೆದುಕೊಂಡಿದ್ದಾರೆ. ನಂತರದ ಸ್ಥಾನವನ್ನು ಗರಿಮಾ ಲೋಹಿಯಾ, ಉಮಾ ಹರತಿ ಎನ್ ಮತ್ತು ಸ್ಮೃತಿ ಮಿಶ್ರಾ ಅವರು ಪಡೆದಿದ್ದಾರೆ. ಮೊದಲ ನಾಲ್ಕು ಸ್ಥಾನಗಳನ್ನು ಮಹಿಳೆಯರೇ ಪಡೆದಿರುವುದು ವಿಶೇಷ.
ಯುಪಿಎಸ್‌ಸಿ ಸಿಎಸ್‌ಇ (UPSC CSE) ಪ್ರಿಲಿಮ್ಸ್ ಜೂನ್ 5, 2022 ರಂದು ನಡೆಯಿತು ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 22 ರಂದು ಬಿಡುಗಡೆ ಮಾಡಲಾಯಿತು. ಒಟ್ಟು 11,35,697 ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 5,73,735 ಅಭ್ಯರ್ಥಿಗಳು ವರ್ಚುವಲ್‌ನಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
ಸೆಪ್ಟೆಂಬರ್ 16 ರಿಂದ 25 ರವರೆಗೆ ನಡೆದ ಲಿಖಿತ (ಮುಖ್ಯ) ಪರೀಕ್ಷೆಯಲ್ಲಿ ಒಟ್ಟು 13,090 ಅಭ್ಯರ್ಥಿಗಳು ಹಾಜರಾಗಲು ಅರ್ಹತೆ ಪಡೆದಿದ್ದು, ಡಿಸೆಂಬರ್ 6 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು.
ಪರೀಕ್ಷೆಯ ಭಾಗವಾಗಿರುವ ವ್ಯಕ್ತಿತ್ವ ಪರೀಕ್ಷೆಗೆ ಒಟ್ಟು 2,529 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಸಂದರ್ಶನಗಳು ಮೇ 18 ರಂದು ಮುಕ್ತಾಯಗೊಂಡವು.
ಒಟ್ಟು 933 ಅಭ್ಯರ್ಥಿಗಳನ್ನು (613 ಪುರುಷರು ಮತ್ತು 320 ಮಹಿಳೆಯರು) ವಿವಿಧ ಸೇವೆಗಳಿಗೆ ನೇಮಕ ಮಾಡಲು ಆಯೋಗವು ಶಿಫಾರಸು ಮಾಡಿದೆ.
ಟಾಪ್ 25 ಅಭ್ಯರ್ಥಿಗಳಲ್ಲಿ 14 ಮಹಿಳೆಯರು ಮತ್ತು 11 ಪುರುಷರು ಇದ್ದಾರೆ. ಅಂತಿಮ ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ, ಮೊದಲ ನಾಲ್ಕು ಸ್ಥಾನವನ್ನು ಮಹಿಳಾ ಅಭ್ಯರ್ಥಿಗಳೇ ಪಡೆದಿದ್ದಾರೆ.
ಇಶಿತಾ ಕಿಶೋರ್ (ರೋಲ್ ಸಂಖ್ಯೆ. 5809986) ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಅವರು ರಾಜಕೀಯ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳನ್ನು ತನ್ನ ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಪರೀಕ್ಷೆಗೆ ಅರ್ಹತೆ ಪಡೆದಿದ್ದರು. ಅವರು ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ ಕಾಲೇಜ್ ಆಫ್ ಕಾಮರ್ಸ್‌ನಿಂದ ಅರ್ಥಶಾಸ್ತ್ರದಲ್ಲಿ (ಆನರ್ಸ್) ಪದವಿ ಪಡೆದಿದ್ದಾರೆ.
ಗರಿಮಾ ಲೋಹಿಯಾ (ರೋಲ್ ಸಂಖ್ಯೆ 1506175), ದೆಹಲಿ ವಿಶ್ವವಿದ್ಯಾಲಯದ ಕಿರೋರಿಮಲ್ ಕಾಲೇಜಿನಿಂದ ವಾಣಿಜ್ಯ ಪದವೀಧರರಾಗಿದ್ದಾರೆ, ವಾಣಿಜ್ಯ ಮತ್ತು ಅಕೌಂಟೆನ್ಸಿಯನ್ನು ಐಚ್ಛಿಕ ವಿಷಯವಾಗಿ ಪಡೆದು ಎರಡನೇ ಸ್ಥಾನ ಪಡೆದರು.
ಉಮಾ ಹರತಿ ಎನ್. (ರೋಲ್ ನಂ.1019872), ಹೈದರಾಬಾದ್‌ನ ಐಐಟಿಯಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ (ಬಿಟೆಕ್) ಪಡೆದಿದ್ದು, ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಹೊಂದಿರುವ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
ಸ್ಮೃತಿ ಮಿಶ್ರಾ (ರೋಲ್ ಸಂಖ್ಯೆ. 0858695), ದೆಹಲಿ ವಿಶ್ವವಿದ್ಯಾನಿಲಯದ ಮಿರಾಂಡಾ ಹೌಸ್ ಕಾಲೇಜ್‌ನಿಂದ ಪದವಿ (BSc) ಅವರು ಪ್ರಾಣಿಶಾಸ್ತ್ರವನ್ನು ಐಚ್ಛಿಕ ವಿಷಯವಾಗಿಟ್ಟುಕೊಂಡು ನಾಲ್ಕನೇ ಸ್ಥಾನ ಪಡೆದಿದ್ದಾರೆ.
20 ಟಾಪರ್‌ಗಳ ಪಟ್ಟಿ
ಇಶಿತಾ ಕಿಶೋರ್
ಗರಿಮಾ ಲೋಹಿಯಾ
ಉಮಾ ಹರತಿ ಎನ್
ಸ್ಮೃತಿ ಮಿಶ್ರಾ
ಮಯೂರ ಹಜಾರಿಕಾ
ಗಹನಾ ನವ್ಯಾ ಜೇಮ್ಸ್
ವಸೀಮ್ ಅಹ್ಮದ್ ಭಟ್
ಅನಿರುದ್ಧ ಯಾದವ
ಕನಿಕಾ ಗೋಯಲ್
ರಾಹುಲ್ ಶ್ರೀವಾಸ್ತವ
ಪರಸಂಜೀತ್ ಕೌರ್
ಅಭಿನವ ಸಿವಾಚ್
ವಿದುಷಿ ಸಿಂಗ್
ಕೃತಿಕಾ ಗೋಯಲ್
ಸ್ವಾತಿ ಶರ್ಮಾ
ಶಿಶಿರಕುಮಾರ ಸಿಂಗ್
ಅವಿನಾಶಕುಮಾರ
ಸಿದ್ಧಾರ್ಥ್ ಶುಕ್ಲಾ
ಲಘಿಮಾ ತಿವಾರಿ
ಅನುಷ್ಕಾ ಶರ್ಮಾ

ಪ್ರಮುಖ ಸುದ್ದಿ :-   "ಇದು ಕಾಂಗ್ರೆಸ್ ಸೋಲು, ಜನರ ಸೋಲಲ್ಲ": 3 ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಮತಾ ಬ್ಯಾನರ್ಜಿ

ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS), ಭಾರತೀಯ ಪೊಲೀಸ್ ಸೇವೆ (IPS) ಮತ್ತು ಇತರ ಕೇಂದ್ರ ಸೇವೆಗಳ ಗುಂಪಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ – ಪ್ರಿಲಿಮ್ಸ್, ಮುಖ್ಯ ಮತ್ತು ಸಂದರ್ಶನ (ವ್ಯಕ್ತಿತ್ವ ಪರೀಕ್ಷೆ) ಎ, ಬಿ ಹುದ್ದೆಗಳು.
ಮೂರು ಹಂತದ ಆಯ್ಕೆ ಪ್ರಕ್ರಿಯೆಯ ನಂತರ ಒಟ್ಟು 933 ಅಭ್ಯರ್ಥಿಗಳನ್ನು ಈ ಸೇವೆಗಳಿಗೆ ನೇಮಕಾತಿಗೆ ಶಿಫಾರಸು ಮಾಡಲಾಗಿದೆ.
ಒಟ್ಟು ಶಿಫಾರಸು ಮಾಡಿದ ಅಭ್ಯರ್ಥಿಗಳಲ್ಲಿ 345 ಸಾಮಾನ್ಯ ವರ್ಗಕ್ಕೆ ಸೇರಿದವರು, 99 ಇಡಬ್ಲ್ಯೂಎಸ್, 263 ಒಬಿಸಿ, 154 ಎಸ್ಸಿ ಮತ್ತು 72 ಎಸ್ಟಿ ಅಭ್ಯರ್ಥಿಗಳು ಎಂದು ಆಯೋಗ ಮಾಹಿತಿ ನೀಡಿದೆ. ಶಿಫಾರಸು ಮಾಡಿದ 101 ಅಭ್ಯರ್ಥಿಗಳ ಉಮೇದುವಾರಿಕೆಯು ತಾತ್ಕಾಲಿಕವಾಗಿದೆ ಎಂದು ಆಯೋಗ ಹೇಳಿದೆ.

ಕಳೆದ ವರ್ಷ, UPSC CSE 2021 ರ ಅಂತಿಮ ಫಲಿತಾಂಶದಲ್ಲಿ ಶ್ರುತಿ ಶರ್ಮಾ ಅಖಿಲ ಭಾರತ 1 ರ ರ್ಯಾಂಕ್‌ ಗಳಿಸಿದ್ದರು. ಮೊದಲ ಮೂರು ಸ್ಥಾನಗಳನ್ನು ಮಹಿಳೆಯರೇ ಪಡೆದುಕೊಂಡಿದ್ದರು. ಅಂಕಿತಾ ಅಗರ್ವಾಲ್ ಎಐಆರ್ 2 ಮತ್ತು ಚಂಡೀಗಢದ ಗಾಮಿನಿ ಸಿಂಗ್ಲಾ 3 ನೇ ರ್ಯಾಂಕ್‌ ಪಡೆದಿದ್ದರು.
ಈ ವರ್ಷ, ಐಆರ್‌ಟಿಎಸ್ ಅನ್ನು ಮತ್ತೆ ನಾಗರಿಕ ಸೇವೆಗಳಿಗೆ ಸೇರಿಸಿದ ನಂತರ, ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಾಯಿತು. ಪರಿಣಾಮವಾಗಿ, ಈ ವರ್ಷ ಒಟ್ಟು 933 ಅಭ್ಯರ್ಥಿಗಳನ್ನು ಮೆರಿಟ್ ಪಟ್ಟಿಯಲ್ಲಿ ಶಿಫಾರಸು ಮಾಡಲಾಗಿದೆ.
ಟಾಪ್ 25 ಯಶಸ್ವಿ ಅಭ್ಯರ್ಥಿಗಳು ಲಿಖಿತ (ಮುಖ್ಯ) ಪರೀಕ್ಷೆಯಲ್ಲಿ ತಮ್ಮ ಐಚ್ಛಿಕ ಆಯ್ಕೆಯಾಗಿ ಮಾನವಶಾಸ್ತ್ರ, ವಾಣಿಜ್ಯ ಮತ್ತು ಅಕೌಂಟೆನ್ಸಿ, ಅರ್ಥಶಾಸ್ತ್ರ, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಾನೂನು, ಇತಿಹಾಸ, ಗಣಿತ, ರಾಜಕೀಯ ವಿಜ್ಞಾನ ಮತ್ತು ಅಂತರರಾಷ್ಟ್ರೀಯ ಸಂಬಂಧಗಳು, ತತ್ವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಶಿಫಾರಸು ಮಾಡಿದ ಅಭ್ಯರ್ಥಿಗಳಲ್ಲಿ ಬೆಂಚ್‌ಮಾರ್ಕ್ ಅಸಾಮರ್ಥ್ಯ ಹೊಂದಿರುವ 41 ವ್ಯಕ್ತಿಗಳು (14 ಮೂಳೆ ಅಂಗವಿಕಲರು, 07 ದೃಷ್ಟಿ ಚಾಲೆಂಜ್ಡ್, 12 ಶ್ರವಣದೋಷವುಳ್ಳವರು ಮತ್ತು 08 ಬಹು ಅಸಾಮರ್ಥ್ಯಗಳು) ಸೇರಿದ್ದಾರೆ.

ಪ್ರಮುಖ ಸುದ್ದಿ :-   ಮಿಜೋರಾಂ ವಿಧಾನಸಭಾ ಚುನಾವಣೆ ಮತ ಎಣಿಕೆ : ಆಡಳಿತಾರೂಢ ಎಂಎನ್‌ಎಫ್ ಪಕ್ಷಕ್ಕೆ ಭಾರೀ ಹಿನ್ನಡೆ

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement