ನೂತನ ಸಂಸತ್ತಿನ ಉದ್ಘಾಟನೆ: ಮೇ 28ರ ಸಮಾರಂಭದಲ್ಲಿ ಯಾವ ಪಕ್ಷಗಳು ಪಾಲ್ಗೊಳ್ಳುತ್ತಿವೆ..? ಯಾವ್ಯಾವ ಪಕ್ಷಗಳು ಬಹಿಷ್ಕರಿಸುತ್ತಿವೆ..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡುವುದನ್ನು ಪ್ರತಿಪಕ್ಷಗಳು ವಿರೋಧಿಸುತ್ತಿರುವ ಕಾರಣ ನೂತನ ಸಂಸತ್ ಭವನದ ಉದ್ಘಾಟನೆ ಈಗ ಚರ್ಚೆಗೆ ಗ್ರಾಸವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಕಟ್ಟಡವನ್ನು ಉದ್ಘಾಟಿಸಬೇಕೇ ಹೊರತು ಪ್ರಧಾನಿಯಲ್ಲ ಎಂಬುದು ವಿರೋಧ ಪಕ್ಷದ ಅಭಿಪ್ರಾಯವಾಗಿದೆ. ಪ್ರತಿಭಟನೆಯ ಸಂಕೇತವಾಗಿ, 21 ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ, ಆದಾಗ್ಯೂ, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಮೈತ್ರಿಕೂಟದ ಭಾಗವಾಗಿರುವ 25 ಪಕ್ಷಗಳು ಉದ್ಘಾಟನಾ ಸಮಾರಂಭಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ.
ನೂತನ ಸಂಸತ್ತಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ರಾಜಕೀಯ ಪಕ್ಷಗಳು….
1) ಶಿವಸೇನೆ (ಶಿಂಧೆ ಬಣ), 2) ನ್ಯಾಷನಲ್ ಪೀಪಲ್ಸ್ ಪಾರ್ಟಿ, 3) ಮೇಘಾಲಯ, 4) ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ, 5) ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, 6) ಜನ-ನಾಯಕ್ ಪಕ್ಷ, 7) ಎಐಎಡಿಎಂಕೆ, 8) ಐಎಂಕೆಎಂಕೆ, 9) ಎಜೆಎಸ್‌ಯು, 10) ಆರ್‌ಪಿಐ, 11) ಮಿಜೋ ನ್ಯಾಷನಲ್ ಫ್ರಂಟ್, 12) ತಮಿಳು ಮಾನಿಲಾ ಕಾಂಗ್ರೆಸ್, 13) ಐಟಿಎಫ್‌ಟಿ (ತ್ರಿಪುರ), 14) ಬೋಡೋ ಪೀಪಲ್ಸ್ ಪಾರ್ಟಿ, 15) ಪಟ್ಟಾಲಿ ಮಕ್ಕಳ್ ಕಚ್ಚಿ, 16) ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ, 17) ಅಪ್ನಾ ದಳ ಮತ್ತು 18) ಅಸ್ಸಾಂ ಗನ್ ಪರಿಷತ್ತು ಈ ಪಕ್ಷಗಳು ಎನ್‌ಡಿಎ ಮೈತ್ರಿಕೂಟದ ಭಾಗವಾಗಿವೆ ಹಾಗೂ ಸಂಸತ್ತಿನ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿವೆ..
ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎನ್‌ಡಿಎಯೇತರ ಪಕ್ಷಗಳೆಂದರೆ 19) ಲೋಕ ಜನಶಕ್ತಿ ಪಕ್ಷ (ಪಾಸ್ವಾನ್), 20) ಬಿಜೆಡಿ, 21) ಬಿಎಸ್‌ಪಿ, 22) ಟಿಡಿಪಿ ಮತ್ತು 23) ವೈಎಸ್‌ಆರ್‌ಸಿಪಿ, 24) ಅಕಾಲಿದಳ ಮತ್ತು 25) ಜೆಡಿಎಸ್
ನೂತನ ಸಂಸತ್ತಿನ ಉದ್ಘಾಟನೆ ಕಾರ್ಯಕ್ರಮ ಬಹಿಷ್ಕರಿಸಿರುವ ಪಕ್ಷಗಳು
1) ಕಾಂಗ್ರೆಸ್, 2) ತೃಣಮೂಲ ಕಾಂಗ್ರೆಸ್, 3) ಶಿವಸೇನೆ (ಉದ್ಧವ್ ಠಾಕ್ರೆ), 4) ಡಿಎಂಕೆ, 5) ಜನತಾ ದಳ (ಯುನೈಟೆಡ್), 6) ಎಎಪಿ, 7) ಸಿಪಿಐ-ಎಂ, 8) ಸಿಪಿಐ, 9) ಎಸ್‌ಪಿ, 10) ಎಸ್‌ಸಿಪಿ, 11) ಶಿವಸೇನೆ (ಉದ್ಧವ್‌ ಠಾಕ್ರೆ ಬಣ), 12) ಆರ್‌ಜೆಡಿ, 13) ಐಯುಎಂಎಲ್‌, 14) ಜೆಎಂಎಂ, 15) ನ್ಯಾಶನಲ್‌ ಕಾನ್ಫರೆನ್ಸ್‌ , 16) ಕೇರಳ ಕಾಂಗ್ರೆಸ್‌ (M), 18) ಆರ್‌ಎಸ್‌ಪಿ, 19) ವಿಸಿಕೆ, 20) ಎಂಡಿಎಂಕೆ 21) ಆರ್‌ಎಲ್‌ಡಿ

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಅಂಕೋಲಾ: ಸಂಶಯಕ್ಕೆ ಕಾರಣವಾದ ಗೋಡೆಗೆ ಅಂಟಿಸಿದ ಚಿತ್ರ-ವಿಚಿತ್ರ ಬರಹದ ಪೋಸ್ಟರುಗಳು...!

ಬೆಂಬಲ ನೀಡಿದ ಟಿಡಿಪಿ, ಜೆಡಿಎಸ್
ಏತನ್ಮಧ್ಯೆ, ನೂತನ ಸಂಸತ್ತಿನ ಉದ್ಘಾಟನೆಗೆ ತನ್ನ ಬೆಂಬಲ ನೀಡಿದ ಟಿಡಿಪಿ (ತೆಲುಗು ದೇಶಂ ಪಕ್ಷ) ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು, “ನೂತನ ಸಂಸತ್ತಿನ ಕಟ್ಟಡವು ಪರಿವರ್ತನಾ ನೀತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ವಾಸಸ್ಥಾನವಾಗಬೇಕೆಂದು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ.
“ನಾವು ಹೊಸ ಸಂಸತ್ತಿನ ಕಟ್ಟಡವನ್ನು ಹೊಂದಿರುವುದರಿಂದ, ಪ್ರಧಾನಿ ಮೋದಿ, ಕೇಂದ್ರ ಸರ್ಕಾರ ಮತ್ತು ಈ ಐತಿಹಾಸಿಕ ರಚನೆಯನ್ನು ನಿರ್ಮಿಸಲು ಕೊಡುಗೆ ನೀಡಿದ ಪ್ರತಿಯೊಬ್ಬರನ್ನೂ ಅಭಿನಂದಿಸುತ್ತೇನೆ” ಎಂದು ಅವರು ಹೇಳಿದರು.
ಹೊಸ ಸಂಸತ್ತಿನ ಕಟ್ಟಡವು ಪರಿವರ್ತನಾ ನೀತಿ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ನೆಲೆಯಾಗಬೇಕೆಂದು ನಾನು ಬಯಸುತ್ತೇನೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಕಡಿಮೆಗೊಳಿಸಿದ ಬಡತನ ಮುಕ್ತ ಭಾರತದ ಕನಸು ಸ್ವಾತಂತ್ರ್ಯದ 100 ವರ್ಷಗಳು 2047ರ ವೇಳೆಗೆ ಪೂರ್ಣಗೊಂಡ ನಂತರ ಸಾಧಿಸಲ್ಪಡುತ್ತದೆ ಎಂದು ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಸಂಸತ್ ಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದೇನೆ, ದೇಶದ ಜನರ ತೆರಿಗೆ ಹಣದಲ್ಲಿ ಆ ಭವ್ಯ ಕಟ್ಟಡ ನಿರ್ಮಾಣವಾಗಿದೆ.ಇದು ದೇಶಕ್ಕೆ ಸೇರಿದ್ದು, ಇದು ಬಿಜೆಪಿ ಅಥವಾ ಆರ್ ಎಸ್ ಎಸ್ ಕಚೇರಿಯಲ್ಲ ಎಂದು ಜೆಡಿಎಸ್ ವರಿಷ್ಠ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಕಿರುಕುಳ ಆರೋಪದ ಮೇಲೆ ಜ್ಞಾನವಾಪಿ ಪ್ರಕರಣಗಳಿಂದ ಹಿಂದೆ ಸರಿಯಲು ನಿರ್ಧರಿಸಿದ ಹಿಂದೂ ಅರ್ಜಿದಾರರು

ಬಹಿಷ್ಕಾರದ ಬಗ್ಗೆ ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಜ್ಯಪಾಲೆ…
ಆಯಾ ರಾಜ್ಯಗಳಲ್ಲಿ ರಾಜ್ಯಪಾಲರನ್ನು ಗೌರವಿಸದ ರಾಜ್ಯ ಸರ್ಕಾರಗಳು ನೂತನ ಸಂಸತ್ ಭವನದ ಉದ್ಘಾಟನೆಗೆ ಸಾಂವಿಧಾನಿಕ ಮುಖ್ಯಸ್ಥರನ್ನು ಆಹ್ವಾನಿಸಿಲ್ಲ ಎಂದು ಮೊಸಳೆ ಕಣ್ಣೀರು ಸುರಿಸುತ್ತಿವೆ. ತೆಲಂಗಾಣ ನೂತನ ಸಚಿವಾಲಯದ ಉದ್ಘಾಟನೆಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ ಅಥವಾ ಆಹ್ವಾನವನ್ನೂ ನೀಡಿಲ್ಲ ಎಂದು ತೆಲಂಗಾಣ ರಾಜ್ಯಪಾಲ ಡಾ.ತಮಿಳಿಸೈ ಸೌಂದರರಾಜನ್ ಹೇಳಿದ್ದಾರೆ.
ಕೇವಲ ಕೈಕುಲುಕಿದಾಗ ಅಧಿಕಾರ ವರ್ಗಾವಣೆ ಎಂದಿಗೂ ಆಗುವುದಿಲ್ಲ ಎಂದು ಪ್ರತಿಪಾದಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮೇ 28 ರಂದು ನಿಗದಿಯಾಗಿರುವ ನೂತನ ಸಂಸತ್ ಭವನದ ಲೋಕಾರ್ಪಣೆಯನ್ನು ಬಹಿಷ್ಕರಿಸುವ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ, ಇದು ಪ್ರಜಾಪ್ರಭುತ್ವದ ದೇವಾಲಯವಾಗಿದೆ ಎಂದು ಹೇಳಿದರು.
ಭಾನುವಾರ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement