1 ಲಕ್ಷ ಬೆಲೆಯ ಮೊಬೈಲ್ ಅಣೆಕಟ್ಟೆ ನೀರಿನಲ್ಲಿ ಬಿತ್ತು: 21 ಲಕ್ಷ ಲೀಟರ್ ನೀರು ಹೊರಬಿಟ್ಟು ತನ್ನ ಮೊಬೈಲ್ ಹುಡುಕಿಸಿದ ಅಧಿಕಾರಿ…!

ಯಾವುದು ಹೆಚ್ಚು ಅಮೂಲ್ಯ ..? ಮೊಬೈಲ್ ಫೋನ್ ಅಥವಾ ಒಣಗಿದ ಹೊಲಗಳಿಗೆ ಸಂಗ್ರಹಿಸಿಟ್ಟ ಲಕ್ಷಾಂತರ ಗ್ಯಾಲನ್ ನೀರು? ಛತ್ತೀಸ್‌ಗಢದ ವಿಲಕ್ಷಣ ಘಟನೆಯೊಂದರಲ್ಲಿ, ಅಣೆಕಟ್ಟಿನ ನೀರಿನಲ್ಲಿ ಬಿದ್ದ ಸರ್ಕಾರಿ ಅಧಿಕಾರಿಯ ದುಬಾರಿ ಫೋನ್ ಅನ್ನು ಮರಳಿ ಪಡೆಯಲು ಜಲಾಶಯದಿಂದ 21 ಲಕ್ಷ ಲೀಟರ್ ನೀರನ್ನು ಹೊರಕ್ಕೆ ಬಿಡಲಾಗಿದೆ …!
ಹೇಳಿಕೆಯಲ್ಲಿ, ಅಧಿಕಾರಿಯು ನೀರು ‘ಬಳಕೆಗೆ ಯೋಗ್ಯವಾಗಿಲ್ಲ’ ಮತ್ತು ತಾವು ತಮ್ಮ ಹಿರಿಯ ಅಧಿಕಾರಿಗಳಿಂದ ‘ಮೌಖಿಕ ಅನುಮತಿ’ ಪಡೆದಿರುವುದಾಗಿ ಹೇಳಿದ್ದಾರೆ.
ಭಾನುವಾರ ಕೊಯಲಿಬೀಡ ಬ್ಲಾಕ್‌ನ ಆಹಾರ ನಿರೀಕ್ಷಕ ರಾಜೇಶ ವಿಶ್ವಾಸ ಅವರು ತಮ್ಮ ರಜೆಯನ್ನು ಆನಂದಿಸಲು ಖೇರ್ಕಟ್ಟಾ ಪಾರಕೋಟ್ ಜಲಾಶಯಕ್ಕೆ ಭೇಟಿ ನೀಡಿದ್ದರು. 96,000 ರೂ.ಬೆಲೆಯ ತನ್ನ ಸ್ಯಾಮ್‌ಸಂಗ್ ಎಸ್23 ಫೋನ್ ಅನ್ನು 15 ಅಡಿ ಆಳದ ನೀರಿನಲ್ಲಿ ಬೀಳಿಸಿಕೊಂಡಿದ್ದರು. ರಾಜೇಶ್ ವಿಶ್ವಾಸ ಅವರು ಸೆಲ್ಫಿ ತೆಗೆದುಕೊಳ್ಳುವಾಗ ಅವರ ಫೋನ್ ಕೈಯಿಂದ ಕೆಳಗೆ ಬಿದ್ದಿದೆ. ರಜೆಯ ದಿನದಂದು ಕೆಲವು ಸ್ನೇಹಿತರೊಂದಿಗೆ ಸ್ನಾನ ಮಾಡಲು ಭಾನುವಾರ ಅಣೆಕಟ್ಟಿಗೆ ಹೋಗಿದ್ದೆ ಮತ್ತು ತಮ್ಮ ಫೋನ್ ಕೈ ಜಾರಿ ಕೆಳಗೆ ಬಿತ್ತು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

ಇದರಿಂದ ಕಂಗಾಲಾದ ರಾಜೇಶ ವಿಶ್ವಾಸ ಅವರು ನೀರಾವರಿ ಇಲಾಖೆಗೆ ಹೋಗಿ ನೀರಿನಲ್ಲಿ ಮುಳುಗಿದ ತನ್ನ ಮೊಬೈಲ್‌ ಫೋನ್ ಅನ್ನು ಹುಡುಕುವ ಮಾರ್ಗಗಳ ಕುರಿತು ಚರ್ಚಿಸಿದರು. ಅಂತಿಮವಾಗಿ, ಜಲಾಶಯದ ನೀರನ್ನು ಅಲ್ಲಿಂದ ಹೊರಕ್ಕೆ ಹರಿಸುವುದಕ್ಕಾಗಿ 30-ಅಶ್ವಶಕ್ತಿಯ ಪಂಪ್ ಅನ್ನು ಅಲ್ಲಿ ನಿಯೋಜಿಸಲಾಯಿತು, ಇದರ ಪರಿಣಾಮವಾಗಿ ನೀರಾವರಿ ಉದ್ದೇಶಗಳಿಗಾಗಿ ಬಳಸಲು ಸಂಗ್ರಹವಾದ ನೀರನ್ನು ಹೊರಹಾಕಲಾಯಿತು.
ಒಂದು ದಿನದಲ್ಲಿ ಇಪ್ಪತ್ತೊಂದು ಲಕ್ಷ ಲೀಟರ್ ನೀರು ಹೊರಬಿಡಲಾಯಿತು. ಮತ್ತು ‘ಮಿಷನ್ ಮೊಬೈಲ್ ಖೋಜೋ’ ಎಂಬುದು ಪೂರ್ಣ ಮೂರು ದಿನಗಳ ಕಾಲ ನಡೆಯಿತು.

ಮೂರು ದಿನಗಳ ನಂತರ 41,104 ಕ್ಯೂಬಿಕ್ ಮೀಟರ್ ನೀರನ್ನು ಹೊರಹಾಕಿದ ನಂತರ ನೀರಿನಲ್ಲಿ ಮುಳುಗಿದ ಮೊಬೈಲ್‌ ಫೋನ್ ಅನ್ನು ಪತ್ತೆ ಮಾಡಲಾಯಿತು. ಸಂಗ್ರಹಿಸಿದ್ದ ಈ ಅಮೂಲ್ಯವಾದ ನೀರನ್ನು ಸುಮಾರು 1,500 ಎಕರೆ ಭೂಮಿಗೆ ನೀರಾವರಿಗಾಗಿ ಬಳಸಲಾಗುತ್ತಿತ್ತು.
ದೂರು ದಾಖಲಾದ ನಂತರ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿ ನೀರು ಹೊರಹಾಕುವ ಕಾರ್ಯಾಚರಣೆಯನ್ನು ನಿಲ್ಲಿಸಿದರು. ಆದರೆ, ಮೂರು ದಿನಗಳಕಾಲ ನೀರಿನಲ್ಲಿದ್ದ ವಿಶ್ವಾಸ ಅವರ ಮೊಬೈಲ್‌ ಫೋನ್ ಕೆಲಸ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅದನ್ನು ನಿಲ್ಲಿಸುವಷ್ಟರಲ್ಲಿ ನೀರಿನ ಮಟ್ಟ ಹತ್ತು ಅಡಿಗಳಷ್ಟು ಕಡಿಮೆಯಾಗಿತ್ತು ಮತ್ತು ಸುಮಾರು 21 ಲಕ್ಷ ಲೀಟರ್ ನೀರನ್ನು ಪಂಪ್ ಮಾಡಲಾಗಿತ್ತು. ಘಟನೆ ವರದಿಯಾದ ನಂತರ, ಸರ್ಕಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು, “ಸರ್ವಾಧಿಕಾರಿ” ರಾಜ್ಯ ಸರ್ಕಾರದ ಅಡಿಯಲ್ಲಿ ಅಧಿಕಾರಿಗಳು ಈ ಪ್ರದೇಶವನ್ನು ತಮ್ಮ ಪೂರ್ವಜರ ಆಸ್ತಿ ಎಂದು ಪರಿಗಣಿಸುತ್ತಿದ್ದಾರೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement