ಅಂಕೋಲಾ: ಸಂಶಯಕ್ಕೆ ಕಾರಣವಾದ ಗೋಡೆಗೆ ಅಂಟಿಸಿದ ಚಿತ್ರ-ವಿಚಿತ್ರ ಬರಹದ ಪೋಸ್ಟರುಗಳು…!

ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಬಂಡೀಬಜಾರದ ನಾಲ್ಕು ರಸ್ತೆ ಕೂಡಿದ ಚಿಕನ್ ಅಂಗಡಿಯ ಪಕ್ಕದ ಸ್ಪೋರ್ಟ್ಸ್ ಅಂಗಡಿಯ ಗೋಡೆಗೆ ಮೂರು ಪೋಸ್ಟರಗಳನ್ನು ಅಂಟಿಸಲಾಗಿದೆ. ಬೆಳಿಗ್ಗೆ ಹಲವರು ಇದನ್ನು ಗಮನಿಸಿದ್ದಾರೆ ಬಿಳಿ ಗಾಳೆಯ ಮೇಲೆ ಕೆಂಪು ಬಣ್ಣದ ಮಾರ್ಕರ್ ನಿಂದ ಈ ಬರಹಗಳನ್ನು ಬರೆಯಲಾಗಿದೆ.
ಈ ಬರಹಗಳನ್ನು ಯಾರು ಬರೆದು ಅಂಟಿಸಿದ್ದಾರೆಂಬುದು ಗೊತ್ತಾಗಿಲ್ಲ. ಇಂಗ್ಲಿಷ್ ನಲ್ಲಿ ಬರೆದಿರುವ ಬರಹ ಸರಿಯಾಗಿ ಅರ್ಥವಾಗುತ್ತಿಲ್ಲ. ಮೇಲ್ಗಡೆ ಸಂಗ್ಲಾನಿ ವೆಲ್ ಫೇರ್ ಟ್ರಸ್ಟ್ ಎಂದು ಬರೆದಿದ್ದು ಅದರ ಕೆಳಗೆ ಪಾಕಿಸ್ತಾನ ಕಾಂಟ್ರಾಕ್ಟ್ ಎಂದು ಬರೆಯಲಾಗಿದೆ. ಮುಂದಿನ ಬರಹಗಳು ನಿಗೂಢವಾಗಿದೆ. ಕೆಲವು ಹೈಸ್ಕೂಲ್ ಮತ್ತು ಟ್ರಸ್ಟಗಳ ಹೆಸರುಗಳನ್ನು ಬರೆದಿದ್ದು ಫಾರೆಸ್ಟ್ , ಪೊಲೀಸ್ ಎಂಬ ಪದಗಳನ್ನೂ ಬರೆಯಲಾಗಿದೆ. ಕೊನೆಯಲ್ಲಿ ಇಂತಿ ನಿಮ್ಮ ನಾಗರಿಕ ಎಂದು ಬರೆಯಲಾಗಿದೆ.
ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಜೈಹಿಂದ್ ಹೈಸ್ಕೂಲ್, ಪಿ.ಎಂ.ಹೈಸ್ಕೂಲ್, ಕೆನರಾ ವೆಲಫರ್ ಟ್ರಸ್ಟ್ ಮತ್ತು ಕೆ.ಎಲ್. ಇ ಕಾಲೇಜುಗಳ ಹೆಸರು, ಪೊಲೀಸ್ ಮತ್ತು ಫಾರೆಸ್ಟ್‌ ಇಲಾಖೆ ಹೆಸರು ಕಾಣಬಹುದು. ಅಲ್ಲದೆ, ಚಿತ್ರ ವಿಚಿತ್ರವಾಗಿ ಬರೆಯಲಾಗಿದೆ. ಹಾಗೂ ಇಂಡಿಯಾ ಫಾರೆಸ್ಟ ಮಾರಿದ್ದಾರೆ, 20 ವರ್ಷಗಳಲ್ಲಿ ಎಲ್ಲಾ ಬೆಟ್ಟ ನೆಲಸಮವಾಗುತ್ತದೆ, ಎಲ್ಲರ ಜಾಗ ಸಿಗುತ್ತದೆ ಎಂದು ಸಹ ಬರೆಯಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

ಎರಡನೇ ಪೋಸ್ಟರ್ ಕೆಳ ಭಾಗ ಬಹುತೇಕ ಅಳಿಸಿ ಹೋಗಿದ್ದು ಮೇಲ್ಬಾಗದಲ್ಲಿ ಎವಿಲ್ ಐಟಮ್ಸ್‌ ಎಂದು ತಲೆಬರಹ ನೀಡಲಾಗಿದ್ದು ಒಂದು ಧರ್ಮದ ಪವಿತ್ರ ಸ್ಥಳ, ಪ್ರಾರ್ಥನಾ ಮಂದಿರಗಳ ಹೆಸರು ಬರೆಯಲಾಗಿದೆ
ಮತ್ತೊಂದು ಪೋಸ್ಟರ್ ನಲ್ಲಿ ಬರೆದ ಬರಹ ಸ್ವಲ್ಪ ಅಳಿಸಿದೆ. ಮೂರನೆ ಪೋಸ್ಟರ್ ನಲ್ಲಿ ಹೈಸ್ಕೂಲ್ ಗರ್ಲ್ಸ್ ಎಂಡ್ ಬಾಯ್ಸ್ ಎಂದು ಬರೆಯಲಾಗಿದೆ. ಹಾಗೂ 100 ಬಿಲಿಯನ್ ಡಾಲರ್ ಎಂದೂ ಬರೆಯಲಾಗಿದೆ.
ಈ ಪೋಸ್ಟರ್ ಗಳು ಎಷ್ಟು ದಿನಗಳಿಂದ ಇದ್ದವು ಎಂಬ ಬಗ್ಗೆ ಮಾಹಿತಿ ಇಲ್ಲ. ಶನಿವಾರ ಕೆಲವರು ಪೋಟೋ ತೆಗೆದ ನಂತರ ಈ ಪೋಸ್ಟರ್ ಆ ಸ್ಥಳದಿಂದ ತೆಗೆಯಲಾಗಿದೆ.ಪೋಸ್ಟರ್ ಬರಹಗಳು ತುಂಬಾ ವಿಚಿತ್ರವಾಗಿದ್ದು ಮಾನಸಿಕ ಅಸ್ವಸ್ಥರು ಬರೆದು ಅಂಟಿಸಿದಂತೆ ಮೇಲ್ನೋಟಕ್ಕೆ ಕಂಡು ಬಂದರೂ ಪಾಕಿಸ್ತಾನದ ಕಾಂಟ್ರಾಕ್ಟ್ ಎಂದು ಬರೆದಿರುವುದು ಸ್ಥಳೀಯ ಶೈಕ್ಷಣಿಕ ಸಂಸ್ಥೆಗಳ ಹೆಸರು ಉಲ್ಲೇಖಿಸಿರುವುದು ಸಂಶಯಗಳಿಗೆ ಕಾರಣವಾಗಿದೆ, ಕನ್ನಡ ಮತ್ತು ಇಂಗ್ಲಿಷ್ ಅಕ್ಷರಗಳಲ್ಲಿ ಬರೆದಿರುವುದರಿಂದ ಸ್ಥಳೀಯರ ಕೃತ್ಯ ಆಗಿರುವ ಸಾಧ್ಯತೆ ಇದೆ ಎಂದು ಊಹಿಸಲಾಗಿದೆ. ಇದನ್ನು ಯಾವ ಉದ್ದೇಶದಿಂದ ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು? ಎಂಬುದರ ಕುರಿತು ಕೂಲಂಕುಷ ತನಿಖೆ ನಡೆಸಬೇಕಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement