ಅಬುಧಾಬಿಯ ‘ಬಿಗ್ ಟಿಕೆಟ್’ ಲಾಟರಿಯಲ್ಲಿ 45 ಕೋಟಿ ರೂ. ಗೆದ್ದ ಕೇರಳದ ನರ್ಸ್ ..!

ತಿರುವನಂತಪುರಂ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಒಬ್ಬರು ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ (ಸುಮಾರು 45 ಕೋಟಿ ರೂ.) ಗೆದ್ದಿದ್ದಾರೆ.
ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಲವ್‌ ಮೋಲ್ ಅಚ್ಚಮ್ಮಾ ಈ ಬಹುಮಾನ ಗೆದ್ದಿದ್ದಾರೆ. ತನ್ನ ಕುಟುಂಬದೊಂದಿಗೆ ಅವರು ಕಳೆದ 21 ವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ ಪತಿ ಪ್ರತಿ ತಿಂಗಳು ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಿಗ್ ಟಿಕೆಟ್ ತೆಗೆದುಕೊಳ್ಳುತ್ತಿದ್ದರು ಎಂದು ಅಚ್ಚಮ್ಮಾ ಹೇಳಿದ್ದಾರೆ.
ಮಲಯಾಳಿ ನರ್ಸ್ ಬಹುಮಾನದ ಮೊತ್ತದ ಒಂದು ಭಾಗವನ್ನು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳುವುದಾಗಿ ಹೇಳಿದರು. ಮತ್ತು ಉಳಿದಿದ್ದನ್ನು ತಮ್ಮ ಮಕ್ಕಳ ಶಿಕ್ಷಣ ಹಾಗೂ ದಾನ ನೀಡುವುದಾಗಿ ಹೇಳಿದ್ದಾರೆ.
ಶನಿವಾರ ನಡೆದ ಇತರ ಡ್ರಾಗಳಲ್ಲಿ ನಾಲ್ವರು ಕೇರಳಿಗರು ಗೆದ್ದಿದ್ದಾರೆ. ಯುಎಇಯ ರಾಜಧಾನಿ ಅಬುಧಾಬಿಯು ಕಳೆದ ಐದು ದಶಕಗಳಿಂದ ಅಪಾರ ವಲಸಿಗ ಕೇರಳೀಯರ ನೆಲೆಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement