ವೀಡಿಯೊ : ನೋಡನೋಡುತ್ತಲೇ ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದ ಚತುಷ್ಪಥ ಸೇತುವೆ | ವೀಕ್ಷಿಸಿ

ಭಾಗಲ್ಪುರ: ಬಿಹಾರದ ಭಾಗಲ್ಪುರದಲ್ಲಿ ಮುಖ್ಯಮಂತ್ರಿ ನಿತೀಶಕುಮಾರ ಅವರು ಶಂಕುಸ್ಥಾಪನೆ ಮಾಡಿದ 3160 ಮೀಟರ್ ಉದ್ದದ ಸೇತುವೆಯ ಅಡಿಪಾಯ ಭಾನುವಾರ ಸಂಜೆ ಎರಡನೇ ಬಾರಿಗೆ ಕುಸಿದಿದೆ. ಸ್ಥಳೀಯರು ಸೇತುವೆ ಕುಸಿಯುತ್ತಿರುವ ವೀಡಿಯೊಗಳನ್ನು ಸೆರೆಹಿಡಿದಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಆಗುವಾನ್-ಸುಲ್ತಂಗಂಜ್ ಸೇತುವೆಯು ಕೆಲವೇ ಸೆಕೆಂಡುಗಳಲ್ಲಿ ಬಿದ್ದುಹೋಯಿತು.
ನಿತೀಶಕುಮಾರ ಅವರ ಕನಸಿನ ಯೋಜನೆಯಾಗಿದ್ದ 1,710 ಕೋಟಿ ರೂಪಾಯಿ ವೆಚ್ಚದ ಸೇತುವೆಯ ಸುಮಾರು 100 ಮೀಟರ್‌ನ ಒಂದು ಭಾಗವು ಗಂಗಾ ನದಿಗೆ ಕುಸಿದುಬಿದ್ದಿದೆ. ಚತುಷ್ಪಥ ಸೇತುವೆಯು ಖಗಾರಿಯಾ ಮತ್ತು ಭಾಗಲ್ಪುರ್ ಜಿಲ್ಲೆಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿತ್ತು
2014 ರಲ್ಲಿ ಮುಖ್ಯಮಂತ್ರಿ ನಿತೀಶ ಕುಮಾರ ಶಂಕುಸ್ಥಾಪನೆ ನೆರವೇರಿಸಿದ ಸೇತುವೆ ಸುಲ್ತಂಗಂಜ್ ಮತ್ತು ಖಗರಿಯಾ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ.
ನಿರ್ಮಾಣ ಹಂತದಲ್ಲಿರುವ ಸೇತುವೆಯ ಸೂಪರ್ ಸ್ಟ್ರಕ್ಚರ್ ನದಿಗೆ ಬಿದ್ದಿದ್ದು, ಅದನ್ನು ಸ್ಥಳೀಯರು ವೀಡಿಯೊದಲ್ಲಿ ಸೆರೆ ಹಿಡಿದಿದ್ದಾರೆ.
ನಿರ್ಮಾಣ ಹಂತದ ಸೇತುವೆ ಕುಸಿತದ ಘಟನೆ ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ. ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿದ ವರದಿಯಾಗಿಲ್ಲ. ಸ್ಥಳದಲ್ಲೇ ಸ್ಥಳೀಯ ಆಡಳಿತ ಬೀಡುಬಿಟ್ಟಿದೆ. ನಾವು ನಿರ್ಮಾಣ ನಿಗಮ’ದಿಂದ ವರದಿ ಕೇಳಿದ್ದೇವೆ,” ಎಂದು ಜಿಲ್ಲೆಯ ಉನ್ನತ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

ಘಟನೆಯ ಕುರಿತು ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ, ಬೇಗುಸರಾಯ್ ಜಿಲ್ಲೆಯ ಬುರ್ಹಿ ಗಂಡಕ್ ನದಿಗೆ ಸೇತುವೆಯೊಂದು ಎರಡು ತುಂಡಾಗಿ ಬಿದ್ದಿತ್ತು. ಸಂಪರ್ಕ ರಸ್ತೆ ಇಲ್ಲದ ಕಾರಣ ಸೇತುವೆಯನ್ನು ಸಾರ್ವಜನಿಕರಿಗೆ ಇನ್ನೂ ಔಪಚಾರಿಕವಾಗಿ ತೆರೆಯದ ಕಾರಣ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. “ಇದನ್ನು ಶೀಘ್ರದಲ್ಲೇ ಉದ್ಘಾಟನೆ ಮಾಡಬೇಕಾಗಿತ್ತು ಆದರೆ ಅದಕ್ಕೂ ಮೊದಲು ಅದು ಕುಸಿದಿದೆ” ಎಂದು ಕಳೆದ ವರ್ಷ ಅಪಘಾತದ ಸಮಯದಲ್ಲಿ ಅಧಿಕಾರಿಯೊಬ್ಬರು ಹೇಳಿದರು.
ಏತನ್ಮಧ್ಯೆ, ವಿಪಕ್ಷ ನಾಯಕ ವಿಜಯಕುಮಾರ ಸಿನ್ಹಾ ಅವರು ಇದು ಬಿಹಾರ ಮುಖ್ಯಮಂತ್ರಿಯ ಮನಸ್ಥಿತಿಯ ಪರಿಣಾಮ ಎಂದು ಹೇಳಿದ್ದಾರೆ, ಇದು ರಾಜಕೀಯ ಅಸ್ಥಿರತೆ, ಆಡಳಿತಾತ್ಮಕ ಅರಾಜಕತೆ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಯಿತು ಎಂದು ಹೇಳಿದರು.

2024 ರ ಲೋಕಸಭಾ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ನಿತೀಶಕುಮಾರ ಅವರ ಪ್ರಯತ್ನವನ್ನು ಟೀಕಿಸಿದ ಸಿನ್ಹಾ, ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯು ಕುಸಿಯುತ್ತಿದೆ ಆದರೆ ರಾಜ್ಯ ಸರ್ಕಾರವು ಪ್ರತಿಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಿದೆ ಎಂದು ಹೇಳಿದರು.
ಈ ವರ್ಷದ ಕೊನೆಯಲ್ಲಿ ನವೆಂಬರ್-ಡಿಸೆಂಬರ್ ವೇಳೆಗೆ ಸೇತುವೆಯ ಉದ್ಘಾಟನೆ ನಡೆಯಲಿದೆ ಎಂದು ನಾವು ನಿರೀಕ್ಷಿಸಿದ್ದೆವು. ಆದರೆ ಅದು ಕುಸಿದ ರೀತಿ ದುರದೃಷ್ಟಕರ. ಘಟನೆಯ ಬಗ್ಗೆ ತನಿಖೆ ನಡೆಯಬೇಕು ಎಂದು ಸುಲ್ತಂಗಂಜ್‌ನ ಜನತಾ ದಳ-ಯುನೈಟೆಡ್ (ಜೆಡಿಯು) ಶಾಸಕ ಲಲಿತ್ ನಾರಾಯಣ ಮಂಡಲ್ ಹೇಳಿದರು.

ಪ್ರಮುಖ ಸುದ್ದಿ :-   ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ ಸಹೋದರ ನೇಹಲ್ ಮೋದಿ ಅಮೆರಿಕದಲ್ಲಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement