ಹೆಸರಾಂತ ಧಾರಾವಾಹಿ ‘ಮಹಾಭಾರತʼದ ಶಕುನಿ ಮಾಮಾ ಖ್ಯಾತಿಯ ಗುಫಿ ಪೈಂಟಲ್ ಇನ್ನಿಲ್ಲ….

ಮುಂಬೈ: ಹಿರಿಯ ನಟ ಗುಫಿ ಪೈಂಟಲ್ ಅವರು ಸೋಮವಾರ ಬೆಳಿಗ್ಗೆ 79 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ದೃಢಪಡಿಸಿದೆ. 1980ರ ದಶಕದ ಬಿ.ಆರ್. ಚೋಪ್ರಾ ಅವರ ಮಹಾಭಾರತ ಟಿವಿ ಧಾರಾವಾಹಿಯಲ್ಲಿ ಶಕುನಿ ಮಾಮಾ ಪಾತ್ರದಲ್ಲಿನ ನಟನೆಗೆ ದೇಶಾದ್ಯಂತ ಮನೆಮಾತಾಗಿದ್ದ ಗುಫಿ ಪೈಂಟಲ್‌ ಅವರು ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ಸೋಮವಾರ ಮುಂಬೈನಲ್ಲಿ ನಿಧನರಾದರು.
“ದುರದೃಷ್ಟವಶಾತ್, ಅವರು ಇನ್ನಿಲ್ಲ. ಅವರು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಹೃದಯ ಕೈಕೊಟ್ಟಿತು. ಅವರು ನಿದ್ರೆಯಲ್ಲೇ ಶಾಂತವಾಗಿ ನಿಧನರಾದರು” ಎಂದು ಅವರ ಸೋದರಳಿಯ ಹಿತೇನ್ ಪೈಂಟಲ್‌ ತಿಳಿಸಿದ್ದಾರೆ.
ಗುಫಿ ಅವರು ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸೋಮವಾರ ಸಂಜೆ 4 ಗಂಟೆಗೆ ಉಪನಗರ ಅಂಧೇರಿಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಗುಫಿ ಪೈಂಟಲ್ ಅವರ ಬಗ್ಗೆ…
ಗುಫಿ ಫೈಂಟಲ್‌ ಅನೇಕ ಟಿವಿ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಬಹದ್ದೂರ್ ಶಾ ಜಾಫರ್, ಮಹಾಭಾರತ, ಕಾನೂನ್, ಓಂ ನಮಃ ಶಿವಾಯ, ಸಿಐಡಿ, ಶ್‌… ಕೋಯಿ ಹೈ, ದ್ವಾರಕಾಧೀಶ ಭಗವಾನ್ ಶ್ರೀ ಕೃಷ್ಣ, ರಾಧಾಕೃಷ್ಣ ಮತ್ತು ಜೈ ಕನ್ಹಯಾ ಲಾಲ್ ಕಿ ಹಾಗೂ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಅವರು 1975 ರ ರಫೂ ಚಕ್ಕರ್ ಚಲನಚಿತ್ರದೊಂದಿಗೆ ಸಿನೆಮಾ ಲೋಕಕ್ಕೆ ಪ್ರವೇಶ ಮಾಡಿದರು. ಇದರ ನಂತರ, ದಿಲ್ಲಗಿ, ದೇಶ್ ಪರದೇಶ್ ಮತ್ತು ಸುಹಾಗ್ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ನಟಿಸಿದರು.

ಪ್ರಮುಖ ಸುದ್ದಿ :-   ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ 11ರಲ್ಲಿ 9 ಸ್ಥಾನ ಗೆದ್ದು ಬೀಗಿದ ಬಿಜೆಪಿ-ಮಿತ್ರಪಕ್ಷಗಳು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement