ತನ್ನದೇ ಇಂಟರ್ನೆಟ್ ಸೇವೆ ಆರಂಭಿಸಿ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕೇರಳ : ಈ ಬಗ್ಗೆ ತಿಳಿದುಕೊಳ್ಳಬೇಕಾದದ್ದು

ತಿರುವನಂತಪುರಂ: ಸಾಮಾನ್ಯ ಜನರಿಗೂ ಇಂಟರ್ನೆಟ್ ಲಭ್ಯತೆ ಸುಧಾರಿಸುವ ಪ್ರಯತ್ನದಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರವು ಪ್ರಾರಂಭಿಸಿದ ರಾಜ್ಯ ಸರ್ಕಾರ-ಚಾಲಿತ ಉಪಕ್ರಮವಾದ K-FON ಅಥವಾ ‘ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್’ ತನ್ನದೇ ಆದ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸುವ ಮೂಲಕ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ.
ಸೇವೆಯನ್ನು ಪ್ರಾರಂಭಿಸುವಾಗ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಸಾರ್ವತ್ರಿಕ ಇಂಟರ್ನೆಟ್ ಲಭ್ಯತೆ ಬಗ್ಗೆ ಪ್ರತಿಪಾದಿಸಿದರು ಮತ್ತು ಕೇರಳವನ್ನು ಜ್ಞಾನದ ಆರ್ಥಿಕತೆಯಾಗಿ ಪರಿವರ್ತಿಸುವ ಮತ್ತು ನಾವೀನ್ಯತೆ-ಚಾಲಿತ ಸಮಾಜವನ್ನು ಬೆಳೆಸುವ ಪ್ರಮುಖ ಹೆಜ್ಜೆ ಎಂದು ಈ ಉಪಕ್ರಮವನ್ನು ಬಣ್ಣಿಸಿದರು. ಅರಣ್ಯದ ಒಳಭಾಗದಲ್ಲಿರುವ ಇಡಮಲಕುಡಿ ಸೇರಿದಂತೆ ಕೆ-ಫೋನ್ ಮೂಲಕ ಎಲ್ಲ ಸ್ಥಳಗಳಲ್ಲಿಯೂ ಇಂಟರ್ನೆಟ್‌ ಸಂಪರ್ಕ ಖಾತ್ರಿಪಡಿಸುವ ಮೂಲಕ, “ಯಾರೂ ಹಿಂದೆ ಉಳಿಯುವುದಿಲ್ಲ, ಎಲ್ಲರಿಗೂ ಇಂಟರ್ನೆಟ್‌ ಲಭ್ಯವಾಗುವಂತೆ ಮಾಡಲಾಗುತ್ತದೆ” ಎಂದು ಪಿಣರಾಯಿ ವಿಜಯನ್‌ ಹೇಳಿದರು.
K-FON ಅಥವಾ ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ ಬಗ್ಗೆ ತಿಳಿದುಕೊಳ್ಳಬೇಕಾದದ್ದು:
* ಕಾರ್ಪೊರೇಟ್-ಚಾಲಿತ ಟೆಲಿಕಾಂ ವಲಯಕ್ಕೆ ಪರ್ಯಾಯ ಮಾದರಿಯಾಗಿ K-FON ಅನ್ನು ಕೇರಳದಲ್ಲಿ ಪರಿಚಯಿಸಲಾಗಿದೆ. ಈ ಕ್ರಮವು “ಖಾಸಗಿ ವಲಯದ ಕೇಬಲ್ ನೆಟ್‌ವರ್ಕ್‌ಗಳು ಮತ್ತು ಮೊಬೈಲ್ ಸೇವಾ ಪೂರೈಕೆದಾರರ ಶೋಷಣೆಯಿಂದ ಜನರನ್ನು ಮುಕ್ತಗೊಳಿಸುವ ಮೂಲಕ ಡಿಜಿಟಲ್ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವಾಗಿದೆ” ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

* ಈ ಸರ್ಕಾರಿ ಚಾಲಿತ ಸೇವೆಯು ಕೈಗೆಟುಕುವ ದರಗಳಲ್ಲಿ ಇತರ ಇಂಟರ್ನೆಟ್‌ ಸೇವಾ ಪೂರೈಕೆದಾರರಿಗೆ ಸಮಾನವಾದ ಹೆಚ್ಚಿನ ವೇಗ ಮತ್ತು ಗುಣಮಟ್ಟವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ಅತ್ಯಂತ ಮೂಲಭೂತ ಯೋಜನೆಯು 20 Mbps ವೇಗದೊಂದಿಗೆ ತಿಂಗಳಿಗೆ ₹299 (GST ಹೊರತುಪಡಿಸಿ) ಶುಲ್ಕ ವಿಧಿಸಲಾಗುತ್ತದೆ. ಇದು ಪ್ರತಿ ತಿಂಗಳು 3,000 GB ಉಚಿತ ಡೌನ್‌ಲೋಡ್ ಮಿತಿಯೊಂದಿಗೆ ಬರುತ್ತದೆ. K-FON ನ ಅತ್ಯುನ್ನತ ಯೋಜನೆಯು 250 Mbps ವೇಗದೊಂದಿಗೆ ₹1,249 (GST ಹೊರತುಪಡಿಸಿ) ಬೆಲೆ ಹೊಂದಿದೆ. ಈ ಯೋಜನೆಯು ತಿಂಗಳಿಗೆ 5,000 GB ಉಚಿತ ಡೌನ್‌ಲೋಡ್ ಮಿತಿಯೊಂದಿಗೆ ಬರುತ್ತದೆ.
* ವೆಬ್‌ಸೈಟ್‌ನ ಪ್ರಕಾರ, ಇದು ಮೂಲಭೂತ ನೆಟ್‌ವರ್ಕ್ ಮೂಲಸೌಕರ್ಯವಾಗಿದೆ – “ಮಾಹಿತಿ ಹೆದ್ದಾರಿ ಎಂದು ಕರೆಯುವ ಇದು “ಎಲ್ಲಾ ಸೇವಾ ಪೂರೈಕೆದಾರರಿಗೆ ತಾರತಮ್ಯವಿಲ್ಲದೆ ಪ್ರವೇಶದ ಲಭ್ಯತೆ ಹೆಚ್ಚಿಸಲು ₹1,500 ಕೋಟಿ ವೆಚ್ಚದಲ್ಲಿ ರಾಜ್ಯದಾದ್ಯಂತ 35,000 ಕಿಮೀ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಸ್ಥಾಪಿಸುವ ಯೋಜನೆಯಾಗಿದೆ. ಇದಕ್ಕೆ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕೆಐಐಎಫ್‌ಬಿ) ಧನಸಹಾಯ ನೀಡಿದೆ.

ಇಂದಿನ ಪ್ರಮುಖ ಸುದ್ದಿ :-   ಆಸ್ಟ್ರೇಲಿಯಾ ವಿರುದ್ಧ ಗೆಲುವು ; ಪಾಕಿಸ್ತಾನ ಹೊರದಬ್ಬಿ ವಿಶ್ವದ ನಂ.1 ತಂಡವಾದ ಭಾರತ; ಎಲ್ಲ ಸ್ವರೂಪದ ಕ್ರಿಕೆಟ್‌ನಲ್ಲೂ ಅಗ್ರಸ್ಥಾನ ಪಡೆದ ಏಷ್ಯಾದ ಮೊದಲ ತಂಡ ಭಾರತ

* ಯೋಜನೆಯು ಎರಡು ಟ್ರ್ಯಾಕ್‌ಗಳಲ್ಲಿ ಪೂರ್ಣಗೊಳ್ಳುತ್ತದೆ. ಅದರ ಮೊದಲ ಹಂತದಲ್ಲಿ, 30,000+ ಸರ್ಕಾರಿ ಸಂಸ್ಥೆಗಳಿಗೆ ಸಂಪರ್ಕವನ್ನು ಒದಗಿಸಲು ರಾಜ್ಯಾದ್ಯಂತ ಕೋರ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ ಸಂಪರ್ಕ ನೀಡಲಾಗುತ್ತದೆ. ಎರಡನೇ ಹಂತದಲ್ಲಿ, K-FON ಮೂಲಸೌಕರ್ಯವನ್ನು ಬಳಸಿಕೊಂಡು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತ ಇಂಟರ್ನೆಟ್ ಮತ್ತು ಇತರರಿಗೆ ಸಬ್ಸಿಡಿ ಸಂಪರ್ಕವನ್ನು ಒದಗಿಸಲು ಸರ್ಕಾರ ಯೋಜಿಸಿದೆ.
* 20 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಇಂಟರ್ನೆಟ್ ಪ್ರವೇಶವನ್ನು ಒದಗಿಸುವುದು ಯೋಜನೆಯ ಅಂತಿಮ ಉದ್ದೇಶವಾಗಿದೆ ಎಂದು ವೆಬ್‌ಸೈಟ್ ಹೇಳುತ್ತದೆ. ಈ ಉಪಕ್ರಮವು ಕೇರಳದ ಸುಮಾರು 14,000 ಕುಟುಂಬಗಳನ್ನು ಒಳಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಪಿಣರಾಯಿ ಹೇಳಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಶರದ್ ಪವಾರ್ ಬಣದ ಎನ್‌ಸಿಪಿಯ 10 ಶಾಸಕರ ವಿರುದ್ಧ ಅನರ್ಹತೆ ಅರ್ಜಿ ಸಲ್ಲಿಸಿದ ಅಜಿತ ಪವಾರ್ ಬಣ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement