ಕೇರಳಕ್ಕೆ ಆಗಮಿಸಿದ ನೈಋತ್ಯ ಮಾನ್ಸೂನ್….ಆದರೆ

ನವದೆಹಲಿ: ಭಾರತದ ಅರ್ಥವ್ಯವಸ್ಥೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅತ್ಯಂತ ಪ್ರಮುಖವಾದ ನೈರುತ್ಯ ಮುಂಗಾರು (ಮಾನ್ಸೂನ್‌) ಗುರುವಾರ ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಜೂನ್ 1ರಂದು ಮುಂಗಾರು ಕೇರಳ ಪ್ರವೇಶಿಸುವುದು ವಾಡಿಕೆ. ಆದರೆ ಈ ಸಲ ಒಂದು ವಾರ ತಡವಾಗಿ ಜೂನ್‌ ೮ರಂದು ಕೇರಳ ಪ್ರವೇಶಿಸಿದೆ. ಜೂನ್ 4ರಂದು ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎಂದು ಕಳೆದ ತಿಂಗಳು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ನಂತರ ಜೂನ್‌ ೮ ಅಥವಾ ೯ರಂದು ಪ್ರವೇಶಿಸಲಿದೆ ಎಂದು ಹೇಳಿತ್ತು.
ಕಮೋರಿನ್, ಮನ್ನಾರ್‌ನ ಕೊಲ್ಲಿ ಪ್ರದೇಶಗಳಲ್ಲಿ, ನೈರುತ್ಯ, ಕೇಂದ್ರ ಹಾಗೂ ಈಶಾನ್ಯದ ಬಂಗಾಳ ಕೊಲ್ಲಿ ಭಾಗಗಳಲ್ಲಿ ಮುಂಗಾರು ಚುರುಕುಗೊಂಡಿದೆ. ’ಬಿಪರ್‌ ಜೋಯ್‌’ ಚಂಡಮಾರುತವು ನೈರುತ್ಯ ಮಾನ್ಸೂನ್‌ ಮೇಲೆ ಪ್ರಭಾವ ಬೀರಿದ್ದು, ಕೇರಳದಲ್ಲಿ ಮುಂಗಾರು ಪ್ರಭಾವ ಸೌಮ್ಯವಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬಿಪರ್‌ ಜೋಯ್‌ ಚಂಡಮಾರುತದಿಂದ ಮೊದಲ ವಾರದಲ್ಲಿ ಮಾನ್ಸೂನ್‌ ನಿಧಾನವಾಗುವ ಸಾಧ್ಯತೆಯಿದೆ. ಹಗೂ ಚಂಡಮಾರುತವು ಚದುರಿದ ನಂತರ ಮಾನ್ಸೂನ್ ಹರಿವು ಸರಿಯಾಗಿ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ.
ಮುಂದಿನ 24 ಗಂಟೆಗಳಲ್ಲಿ ಬಿಪರ್‌ ಜೋಯ್‌ ಚಂಡಮಾರುತ ಉತ್ತರದ ಕಡೆಗೆ ಚಲಿಸುವ ನಿರೀಕ್ಷೆಯಿದ್ದು, ತೀವ್ರ ಚಂಡಮಾರುತವಾಗಿ ತೀವ್ರಗೊಳ್ಳುತ್ತದೆ. ನಂತರದ ಮೂರು ದಿನಗಳಲ್ಲಿ ಉತ್ತರ – ವಾಯವ್ಯ – ಪಶ್ಚಿಮ ದಿಕ್ಕಿನಲ್ಲಿ ಚಲಿಸುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಮುಖ ಸುದ್ದಿ :-   ಭಾರತ-ಕೆನಡಾ ಬಾಂಧವ್ಯ ಹಾಳು ಮಾಡಲು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿತ್ತು ಪಾಕಿಸ್ತಾನದ ಐಎಸ್‌ಐ : ವರದಿ

ಕಳೆದ 150 ವರ್ಷಗಳಿಂದ ಕೇರಳಕ್ಕೆ ಮುಂಗಾರು ಪ್ರವೇಶದಲ್ಲಿನ ದಿನಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. 1918ರಲ್ಲಿ ಮೇ 11ಕ್ಕೆ ಮುಂಗಾರು ಪ್ರವೇಶಿಸಿತ್ತು. ಹಾಗೆಯೇ 1972ರಲ್ಲಿ ಜೂನ್ 18ರಂದು ಪ್ರವೇಶಿಸಿತ್ತು. 2022ರಲ್ಲಿ ಮೇ 29ರಂದು, 2021ರಲ್ಲಿ ಜೂನ್ 3 ರಂದು, 2020ರಲ್ಲಿ ಜೂನ್ 1 ರಂದು, 2019ರಲ್ಲಿ ಜೂನ್ 8ರಂದು ಹಾಗೂ 2018ರಲ್ಲಿ ಮೇ 29ರಂದು ಮುಂಗಾರು ಪ್ರವೇಶಿಸಿದೆ. ಎಲ್‌ ನಿನೊ ಪರಿಸ್ಥಿತಿಯ ನಡುವೆಯೂ ಈ ಬಾರಿ ಮುಂಗಾರು ಸಾಮಾನ್ಯವಾಗಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೇರಳಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿರುವುದರಿಂದ ದೇಶದ ಇತರ ಭಾಗಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಡಿಮೆ. ವಾಯವ್ಯ ಭಾಗದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆ, ಪೂರ್ವ, ಈಶಾನ್ಯ, ಕೇಂದ್ರ ಭಾಗದಲ್ಲಿ ಶೇ 94ರಿಂದ 106ರಷ್ಟು ಪ್ರಮಾಣದಲ್ಲಿ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನೈಋತ್ವ ಮುಂಗಾರು ಮಳೆ ಭಾರತಕ್ಕೆ ಅತ್ಯಂತ ಪ್ರಮುಖವಾದುದು. ಭಾರತದ ಬಹಳಷ್ಟು ಬೆಳೆ, ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆಗೆ ಅರಬ್ಬಿ ಸಮುದ್ರದಿಂದ ಬರುವ ನೈರುತ್ಯ ಮಾನ್ಸೂನ್‌ ಭಾರತದ ಜಲಸಂಪನ್ಮೂಲಕ್ಕೆ ಜೀವನಾಧಾರವಾಗಿದೆ.

ಇಂದಿನ ಪ್ರಮುಖ ಸುದ್ದಿ :-   ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನಿವಾಸ ನವೀಕರಣ ಪ್ರಕರಣ : ಸಿಬಿಐ ತನಿಖೆಗೆ ಕೇಂದ್ರ ಗೃಹ ಸಚಿವಾಲಯ ಆದೇಶ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

3 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement