ವೀಡಿಯೊ…: ಆನೆ-ಘೇಂಡಾಮೃಗದ ನಡುವೆ ನಡೆದ ಭೀಕರ ಕಾಳಗ-ಮುಂದೇನಾಯ್ತು | ವೀಕ್ಷಿಸಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ಆನೆ ಮತ್ತು ಘೇಂಡಾಮೃಗಗಳ ನಡುವಿನ ಕಾಳಗವನ್ನು ತೋರಿಸುತ್ತದೆ. ವೀಡಿಯೊವನ್ನು ಚಿತ್ರೀಕರಿಸಿದ ಸ್ಥಳದ ಬಗ್ಗೆ ತಿಳಿದಿಲ್ಲ, ಆದರೆ ಪ್ರಾಣಿ ಸಾಮ್ರಾಜ್ಯದ ಎರಡು ಅತ್ಯಂತ ಅಪಾಯಕಾರಿ ಪ್ರಾಣಿಗಳ ಕಾಳಗವನ್ನು ಇದು ತೋರಿಸುತ್ತದೆ.
ರಾತ್ರಿಯಲ್ಲಿ ಚಿತ್ರೀಕರಿಸಿದ ಕ್ಲಿಪ್ ಅನ್ನು ಹಲವಾರು ಭಾರತೀಯ ಅರಣ್ಯ ಅಧಿಕಾರಿಗಳು (IFS) ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇದು ಅನೇಕ ಬಳಕೆದಾರರ ಗಮನ ಸೆಳೆದಿದೆ. ಅವರು ಅದನ್ನು ಡೇವಿಡ್ ವಿರುದ್ಧ ಗೋಲಿಯಾತ್ ಯುದ್ಧದೊಂದಿಗೆ ಹೋಲಿಸಿದ್ದಾರೆ.
ಐಎಫ್‌ಎಸ್‌ ಅಧಿಕಾರಿ ಸುಸಾಂತ ನಂದಾ ಅವರು ಕ್ಲಿಪ್ ಅನ್ನು “ಕ್ಲಾಷ್ ಆಫ್ ದಿ ಟೈಟಾನ್ಸ್” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಇದು ಎರಡು ಪ್ರಾಣಿಗಳು ಮುಖಾಮುಖಿಯಾಗಿ ಪರಸ್ಪರ ಗುರಾಯಿಸಿಕೊಂಡು ನೋಡುತ್ತಿರುವುದನ್ನು ತೋರಿಸುತ್ತದೆ. ಆನೆಯು ತನ್ನ ಬಲಾಢ್ಯ ಆನೆ ತನ್ನ ಮೇಲೆ ದಾಳಿ ಮಾಡಿದ ಘೇಂಡಾ ಮೃಗದ ಮೇಲೆ ದಂತಗಳೊಂದಿಗೆ ದಾಳಿಗೆ ಮುಂದಾಗುತ್ತದೆ.

ಆದರೆ ತನ್ನ ಸ್ನಾಯುವಿನ ರಚನೆ ಮತ್ತು ಅಸಾಧಾರಣ ಕೊಂಬಿನೊಂದಿಗೆ, ಖಡ್ಗಮೃಗವು ಎದುರಿಸಲು ಮುಂದಾಗುತ್ತದೆ. ವೀಡಿಯೊ ಮುಂದುವರೆದಂತೆ, ಘೇಂಡಾಮೃಗವು ಆನೆಯ ಕಡೆ ಏರಿ ಹೋಗುತ್ತದೆ. ಆದರೆ ಅದರ ಪಾದಗಳ ಬಳಿ ಸ್ವಲ್ಪ ನಿಲ್ಲುತ್ತದೆ. ಯಾವುದೇ ಅನಗತ್ಯ ಘರ್ಷಣೆಯನ್ನು ತಪ್ಪಿಸಲು ಆನೆಯು ಜಾಗರೂಕತೆ ತೋರುತ್ತದೆ.
ಖಡ್ಗಮೃಗವು ಮತ್ತೆ ಚಾರ್ಜ್ ಆಗುತ್ತದೆ, ಆದರೆ ಅಷ್ಟರಲ್ಲಾಗಲೇ ಆನೆ ತಾಳ್ಮೆ ಕಳೆದುಕೊಂಡಿರುತ್ತದೆ. ಆನೆಯು ಎರಡು ಕೊಂಬಿನ ಘೇಂಡಾಮೃಗಕ್ಕೆ ಪ್ರಬಲವಾದ ಹೊಡೆತವನ್ನು ನೀಡುತ್ತದೆ, ಅದನ್ನು ನೆಲಕ್ಕೆ ಉರುಳಿಸುತ್ತದೆ. ನಂತರ ಆನೆಯು ತನ್ನ ದಂತಗಳಿಂದ ಘೇಂಡಾಮೃಗವನ್ನು ನೆಲಕ್ಕೆ ಒತ್ತಿ ಹಿಡಿಯುತ್ತದೆ. ನಂತರ ಘೇಂಡಾಮೃಗವು ಆನೆ ಕೊಟ್ಟ ಡಿಚ್ಚಿಗೆ ನೋವಿನಿಂದ ಓಡಿಹೋಗುತ್ತಿರುವುದನ್ನು ಕಾಣಬಹುದು.

ಪ್ರಮುಖ ಸುದ್ದಿ :-   ಕಾಂಗ್ರೆಸ್‌ ನಾಯಕ ಅಧೀರ್‌ ಹೇಳಿಕೆ ತಿರಸ್ಕರಿಸಿದ ನಂತರ ಪಶ್ಚಿಮ ಬಂಗಾಳ ಕಾಂಗ್ರೆಸ್ ಕಚೇರಿ ಮುಂದಿನ ಮಲ್ಲಿಕಾರ್ಜುನ ಖರ್ಗೆ ಪೋಸ್ಟರ್‌ಗಳಿಗೆ ಮಸಿ

ನಮೀಬಿಯಾದಲ್ಲಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಿಕೊಂಡು ಕೆಲವು ಬಳಕೆದಾರರು ಸ್ಥಳಗಳನ್ನು ಊಹಿಸಲು ಪ್ರಯತ್ನಿಸಿದ್ದಾರೆ. ಆದರೆ ನಿಖರವಾಗಿ ಎಲ್ಲಿಯದ್ದು ಎಂಬುದು ತಿಳಿದಿಲ್ಲ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement