ನವದೆಹಲಿ: 2024 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ವಿರುದ್ಧ ಹೋರಾಡಲು ತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳು ಜೂನ್ 23 ರಂದು ಪಾಟ್ನಾದಲ್ಲಿ ಒಗ್ಗೂಡಲಿವೆ. ಅದಕ್ಕೂ ಕೆಲವು ದಿನಗಳ ಮೊದಲು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ ಅವರು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಮೈತ್ರಿಕೂಟದ ಭಾಗವಾಗದಿರುವ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಆರ್ಟಿಕಲ್ 370 ರದ್ದತಿ ಬಗ್ಗೆ ಮೌನ ವಹಿಸಿದ್ದಕ್ಕಾಗಿ ಅವರು ಅರವಿಂದ್ ಕೇಜ್ರಿವಾಲ್ ವಿರುದ್ಧ ಅವರು ನೇರ ವಾಗ್ದಾಳಿ ನಡೆಸಿದರು.
ಜಮ್ಮು ಮತ್ತು ಕಾಶ್ಮೀರದ ಹೊರಗೆ ನಾವು (ಕೊಡುಗೆ) ಏನು ಹೊಂದಿದ್ದೇವೆ? ನಮ್ಮಲ್ಲಿ ಒಟ್ಟು ಐದು (ಲೋಕಸಭಾ) ಸ್ಥಾನಗಳಿವೆ ಈ ಸ್ಥಾನಗಳಲ್ಲಿ ನಾವು ಬಿಜೆಪಿ ವಿರುದ್ಧ ಹೋರಾಡಬೇಕಾಗಿದೆ ಎಂದು ಅವರು ಹೇಳಿದರು. ಮತ್ತು ಜಮ್ಮು ಮತ್ತು ಕಾಶ್ಮೀರಕ್ಕೆ ಇಂತಹ ಮೈತ್ರಿಯಿಂದ ಯಾವುದೇ ಪ್ರಯೋಜನವಿಲ್ಲ. ಅವರಿಗೆ ಬೇಕಾದಾಗ ಅವರು ನಮ್ಮ ಬಾಗಿಲು ಬಡಿಯುತ್ತಾರೆ ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ. (ದೆಹಲಿ ಮುಖ್ಯಮಂತ್ರಿ ಅರವಿಂದ್) ಕೇಜ್ರಿವಾಲ್ ಸಂಕಷ್ಟದಲ್ಲಿದ್ದಾಗ, ಅವರಿಗೆ ನಮ್ಮ ಬೆಂಬಲ ಬೇಕು ಆದರೆ 2019 ರಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವಾಗ ಹಾಗೂ ಜಮ್ಮು ಮತ್ತು ಕಾಶ್ಮೀರವನ್ನು ವಿಭಜಿಸುವಾಗ ಈ ನಾಯಕರು ಎಲ್ಲಿದ್ದರು ಎಂದು ಪ್ರಶ್ನಿಸಿದ್ದಾರೆ.
370 ನೇ ವಿಧಿಯನ್ನು ತೆಗೆದುಹಾಕುವ ಸಮಯದಲ್ಲಿ ಆಮ್ ಆದ್ಮಿ ಪಕ್ಷದ ಅನುಪಸ್ಥಿತಿಯನ್ನು ಪ್ರತಿಪಕ್ಷಗಳಿಗೆ ನೆನಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, “ನಾವು ಪ್ರಜಾಪ್ರಭುತ್ವದ ಕೊಲೆಯನ್ನು ಎದುರಿಸಿದಾಗ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಕೂಗೆಬ್ಬಿಸುವವರು ಆಗ ಎಲ್ಲಿದ್ದರು. ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿ ರದ್ದು ಪಡಿಸುವಾಗ ಅವರು ಎಲ್ಲಿದ್ದರು. ಅವರು ಅದರ ವಿರುದ್ಧ ಮಾತನಾಡಲಿಲ್ಲ ಮತ್ತು ವಾಸ್ತವದ ಸಂಗತಿಯೆಂದರೆ ಅವರು ಈ ಕ್ರಮವನ್ನು (ಸಂಸತ್ತಿನಲ್ಲಿ) ಬೆಂಬಲಿಸಿದರು ಎಂದು ವಾಗ್ದಾಳಿ ನಡೆಸಿದರು.
ನಿಮ್ಮ ಕಾಮೆಂಟ್ ಬರೆಯಿರಿ