ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್ : ಪುರುಷರ ಸಿಂಗಲ್ಸ್ ನಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಏಕೈಕ ಆಟಗಾರ

ಪ್ಯಾರಿಸ್‌ : ನೊವಾಕ್ ಜೊಕೊವಿಕ್ ಅವರು ಭಾನುವಾರ (ಜೂನ್ 11) ಪುರುಷರ ಸಿಂಗಲ್ಸ್‌ನಲ್ಲಿ ಫ್ರೆಂಚ್ ಓಪನ್ ಟಿನಿಸ್‌ ಪ್ರಶಸ್ತಿ ಗೆದ್ದಿದ್ದಾರೆ ಹಾಗೂ ಆ ಮೂಲಕ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎಂಬ ದಾಖಲೆಯನ್ನೂ ಬರೆದಿದ್ದಾರೆ.
ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ. 3 ಆಟಗಾರ ನೊವಾಕ್ ಜೊಕೊವಿಕ್ ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ 4 ನೇ ಶ್ರೇಯಾಂಕದ ಕ್ಯಾಸ್ಪರ್ ರೂಡ್ ಅವರನ್ನು  7-6 (1), 6-3, 7-5 ನೇರ ಸೆಟ್‌ಗಳಿಂದ ಸೋಲಿಸಿದರು.
ಕಳೆದ ವರ್ಷ ರೊಲ್ಯಾಂಡ್ ಗ್ಯಾರೋಸ್‌ನಲ್ಲಿ 22ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದ ಹಾಗೂ ಗಾಯದ ಕಾರಣ ಪ್ಯಾರಿಸ್‌ನಲ್ಲಿ ಈ ವರ್ಷದ ಫ್ರಂಚ್‌ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ರಾಫೆಲ್ ನಡಾಲ್ ಅವರನ್ನು ನೊವಾಕ್ ಜೊಕೊವಿಕ್ ಹಿಂದಿಕ್ಕಿದರು. ನಡಾಲ್ ಅವರು ಪುರುಷರ ಸಿಂಗಲ್ಸ್‌ನಲ್ಲಿ 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದಿದ್ದಾರೆ. ಜೊಕೊವಿಕ್ ಅವರು ಮಣ್ಣಿನ ಅಂಕಣ(ಕ್ಲೇ-ಕೋರ್ಟ್‌)ದಲ್ಲಿ ತಮ್ಮ 3 ನೇ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ನೊವಾಕ್ ಜೊಕೊವಿಕ್ ಕ್ರೀಡಾ ಇತಿಹಾಸದಲ್ಲಿ ಕನಿಷ್ಠ ಮೂರು ಬಾರಿ ಎಲ್ಲಾ 4 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎನಿಸಿಕೊಂಡರು. 35 ನೇ ವಯಸ್ಸಿನಲ್ಲಿ, ಜೊಕೊವಿಕ್ ಪುರುಷರ ಸಿಂಗಲ್ಸ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಮಹಿಳಾ ಸಿಂಗಲ್ಸ್‌ನಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಮಹಿಳಾ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ರೊಂದಿಗೆ ಸಮಬಲ ಸಾಧಿಸಿದ್ದಾರೆ.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement