ಸ್ಟಾರ್ ವಾರ್ಸ್‌ನ ದೈತ್ಯಾಕಾರದ ಸರ್ಲಾಕ್ ನಂತೆ ಕಾಣುವ ವಿಲಕ್ಷಣ ಬಾಯಿಯ ಸಮುದ್ರ ಜೀವಿ ಕಂಡುಹಿಡಿದ ಅಮೆರಿಕದ ಮೀನುಗಾರ

ಅಮೆರಿಕದಲ್ಲಿ ಮೀನುಗಾರರೊಬ್ಬರು ಇತ್ತೀಚೆಗೆ “ವಿಲಕ್ಷಣ” ಬಾಯಿಯ ಸಮುದ್ರ ಜೀವಿಯನ್ನು ಹಿಡಿದಿದ್ದಾರೆ. ನ್ಯೂಯಾರ್ಕ್‌ನ ಹಡ್ಸನ್ ಕಣಿವೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಎರಿಕ್ ಒಸಿಂಕಿ ಎಂಬ ಮೀನುಗಾರನಿಗೆ ವಿಚಿತ್ರವಾಗಿ ಕಾಣುವ ಸಮುದ್ರ ಪ್ರಾಣಿ ಕಂಡುಬಂತು. ಈಲ್ ತರಹದ ಪ್ರಾಣಿಯ ಫೋಟೋಗಳನ್ನು ಅವರು ಕ್ಯಾಟ್‌ಸ್ಕಿಲ್ ಔಟ್‌ಡೋರ್ಸ್ ಫೇಸ್‌ಬುಕ್ ಗುಂಪಿನಲ್ಲಿ ಅವರು ಹಂಚಿಕೊಂಡಿದ್ದಾರೆ.
ನ್ಯೂಸ್‌ವೀಕ್‌ನೊಂದಿಗೆ ಮಾತನಾಡುತ್ತಾ, ಒಸಿಂಕಿ ಅವರು, “ಇದು ನಾನು ಹಿಡಿದ ವಿಲಕ್ಷಣವಾದ ಸಮುದ್ರ ಜೀವಿಯಾಗಿದೆ”. ಸಮುದ್ರ ಜೀವಿಯು 2-ಅಡಿ ಉದ್ದವಾಗಿದೆ ಮತ್ತು ಅದರ ಬಾಯಿ “ಸ್ಟಾರ್ ವಾರ್ಸ್‌ನ ಸಾರ್ಲಾಕ್ ಪಿಟ್ ನಂತೆ ಕಾಣುತ್ತದೆ ಎಂದು ಹೇಳಿದ್ದಾರೆ. “ನಾನು ಅದನ್ನು ತಪ್ಪಾಗಿ ಭಾವಿಸಿ ಹಿಡಿದೆ. ಮೊದಲಿಗೆ ಅದು ಕೋಲು ಎಂದು ನಾನು ಭಾವಿಸಿದೆ” ಎಂದು ಒಸಿನ್ಸ್ಕಿ ಅವರು ಅದನ್ನು ಹಿಡಿದ ಬಗ್ಗೆ ಹೇಳಿದರು.

ವಿಚಿತ್ರವಾಗಿ ಕಾಣುವ ಪ್ರಾಣಿಯು ಈಲ್ ಮತ್ತು ಲೀಚ್ ನಡುವಿನ ಹೋಲಿಕೆಯಂತೆ ಕಾಣುತ್ತದೆ. “ನಾನು ಅದನ್ನು ನನ್ನ ನೆಟ್‌ನಿಂದ ಎತ್ತಿಕೊಂಡ ತಕ್ಷಣ ಅದು ಏನೆಂಬುದು ನನಗೆ ತಿಳಿಯಿತು. ಇದು ತಂಪಾಗಿತ್ತು. ವೈಯಕ್ತಿಕವಾಗಿ ನಾನು ಇದನ್ನು ಮೊದಲು ನೋಡಿಲ್ಲ ಎಂದು ಅವರು ಹೇಳಿದ್ದಾರೆ.
ಒಸಿಂಕಿ ಕಳೆದ ತಿಂಗಳು ಫೇಸ್‌ಬುಕ್‌ನಲ್ಲಿ ಚಿತ್ರವನ್ನು ಹಂಚಿಕೊಂಡಿದ್ದಾರೆ ಮತ್ತು ಅಂದಿನಿಂದ ಅವರ ಪೋಸ್ಟ್ ವೈರಲ್ ಆಗಿದೆ.
ನ್ಯೂಯಾರ್ಕ್ ಸ್ಟೇಟ್ ಡಿಪಾರ್ಟ್ಮೆಂಟ್ ಆಫ್ ಎನ್ವಿರಾನ್ಮೆಂಟ್ ಕನ್ಸರ್ವೇಶನ್ (ಡಿಇಸಿ) ಅನ್ನು ಉಲ್ಲೇಖಿಸಿ, ನ್ಯೂಸ್‌ ವೀಕ್‌ ಜೀವಿಯನ್ನು ಸಮುದ್ರ ಲ್ಯಾಂಪ್ರೇ ( sea lamprey) ಎಂದು ವರದಿ ಮಾಡಿದೆ. ಅದು ಪರಾವಲಂಬಿಯಾಗಿದೆ ಮತ್ತು ಅದರ ಹೀರಿಕೊಳ್ಳುವ ಡಿಸ್ಕ್ ಬಾಯಿ ಮತ್ತು ಚೂಪಾದ ಹಲ್ಲುಗಳನ್ನು ಬಳಸಿಕೊಂಡು ಅದು ಇತರ ಮೀನುಗಳನ್ನು ತಿನ್ನುತ್ತದೆ ಎಂದು ಔಟ್ಲೆಟ್ ಹೇಳಿದೆ.

ಇಂದಿನ ಪ್ರಮುಖ ಸುದ್ದಿ :-   ಅದ್ಭುತ ಕ್ಯಾಚ್‌...: ಎರಡನೇ ಸ್ಲಿಪ್‌ನಲ್ಲಿ ರೀ ಬೌಂಡ್‌ ಆದ ಅಸಾಧಾರಣವಾದ ಕ್ಯಾಚ್‌ ಅನ್ನು ಒಂದೇ ಕೈಯಲ್ಲಿ ಹಿಡಿದ ಆಟಗಾರ | ವೀಕ್ಷಿಸಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement