ಜಪಾನಿಯರಿಗೆ ಹಾಲಿವುಡ್‌ ಸ್ಟೈಲ್ ನಗು ಬೇಕಂತೆ: ಅದಕ್ಕಾಗಿ ಒಂದು ತಾಸಿನ ಕ್ಲಾಸ್‌ ಗೆ 4500 ರೂಪಾಯಿ ಕೊಡ್ತಾರೆ…!

ಜಪಾನ್‌ನ ವಿದ್ಯಾರ್ಥಿಗಳು ಮಾಸ್ಕ್‌ ಗಳನ್ನು ಧರಿಸಲು ಒಗ್ಗಿಕೊಂಡ ನಂತರ ಈಗ ಹೇಗೆ ನಗುವುದು ಎಂದು ತಿಳಿಯಲು ವೃತ್ತಿಪರ ತರಬೇತುದಾರರ ತರಗತಿಗಳಿಗೆ ಹೋಗುತ್ತಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸಾಂಕ್ರಾಮಿಕ ರೋಗವು ಪ್ರಾರಂಭವಾದ ಮೂರು ವರ್ಷಗಳ ನಂತರ ಮಾರ್ಚ್‌ನಲ್ಲಿ ಸರ್ಕಾರವು ಮಾಸ್ಕ್‌ ಧರಿಸಬೇಕೆಂಬ ನಿಯಮ ಸಡಿಲಿಸಿದ ನಂತರ ಹೆಚ್ಚಿನ ಜನರು ಸಾರ್ವಜನಿಕವಾಗಿ ತಮ್ಮ ನಗು ಮುಖಗಳನ್ನು ತೋರಿಸುವುದಕ್ಕೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ದೇಶದಲ್ಲಿ ʼಸ್ಮೈಲ್ ಕೋಚಿಂಗ್ʼ ಸೇವೆಗಳ ಬೇಡಿಕೆ ಹೆಚ್ಚಾಗಿದೆ.
ಜಪಾನ್‌ ಜನರು ನಗುವುದನ್ನು ಮರೆತಿದ್ದಾರೆ ಎಂಬ ಸುದ್ದಿ ಎಲ್ಲಡೆ ವೈರಲ್‌ ಆಗಿತ್ತು. ಇದೀಗ ನಗುವಿನಲ್ಲೂ ‘ಹಾಲಿವುಡ್ ಸ್ಮೈಲ್’ ಎಂಬ ಪ್ರಕಾರವನ್ನು ಕಲಿಯಲು ಅಲ್ಲಿನ ಜನರು ಆಸಕ್ತರಾಗಿದ್ದಾರೆ. ಹೀಗಾಗಿ ಅಲ್ಲಿನ ಜನರು ಹಾಲಿವುಡ್‌ ಸ್ಮೈಲ್‌ ಅನ್ನು ನಮಗೂ ಕಲಿಸಿಕೊಡಿ ಎಂದು ಹೇಳುತ್ತಿದ್ದಾರಂತೆ.
ಹಾಲಿವುಡ್ ಸ್ಟೈಲ್ ಸ್ಮೈಲಿಂಗ್ ಎಂದರೆ ಕೇವಲ 8 ಹಲ್ಲುಗಳನ್ನು ತೋರಿಸಿ ನಗುವುದಾಗಿದೆ. ಹೀಗೆ ನಕ್ಕರೆ ಕಣ್ಣುಗಳು ಅರ್ಧ ಚಂದ್ರನಂತೆ ಕಾಣುತ್ತದೆ. ಕೆನ್ನೆ ದುಂಡಗೆ ಕಾಣಿಸುತ್ತದೆ. ಈ ರೀತಿಯಾಗಿ ನಕ್ಕರೆ ತುಂಬಾ ಸುಂದವಾಗಿ ಕಾಣಿಸುತ್ತಾರಂತೆ. ಹೀಗಾಗಿ ಜನರು ಹಾಲಿವುಡ್‌ ಸ್ಮೈಲ್‌ ಕಲಿಯಬೇಕೆಂದು ನಗುವಿನ ಕ್ಲಾಸ್‌ ಗೆ ಹೋಗುತ್ತಿದ್ದಾರಂತೆ.
“ಕೋವಿಡ್ ಸಮಯದಲ್ಲಿ ನಾನು ನನ್ನ ಮುಖದ ಸ್ನಾಯುಗಳನ್ನು ಹೆಚ್ಚು ಬಳಸಿರಲಿಲ್ಲ.‌ ಆದ್ದರಿಂದ ನುಗುವುದು ಈಗ ಉತ್ತಮ ವ್ಯಾಯಾಮವಾಗಿದೆ” ಎಂದು 20 ವರ್ಷದ ಕಲಾ ವಿದ್ಯಾರ್ಥಿ ಹಿಮವಾರಿ ಯೋಶಿಡಾ ರಾಯಿಟರ್ಸಿಗೆ ತಿಳಿಸಿದ್ದಾಳೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

“ಜನರು ಹೆಚ್ಚು ಕಿರುನಗೆಗೆ ಪ್ರಯತ್ನಿಸುತ್ತಿಲ್ಲ” ಎಂದು ತರಬೇತುದಾರಳಾದ ಕವಾನೊ ಎಂಬವಳು ಮೇ ಆರಂಭದಲ್ಲಿ ನ್ಯೂಯಾರ್ಕ್ ಟೈಮ್ಸ್‌ಗೆ ತಿಳಿಸಿದ್ದಳು.
ಕವಾನೊ, ಮಾಜಿ ರೇಡಿಯೋ ಹೋಸ್ಟ್, “ಸ್ಮೈಲ್ ಕಂಪನಿ” ಎಂಬ ಭಾಷಾಂತರದ “Egaoiku” ಎಂಬ ಕಂಪನಿಯನ್ನು ನಡೆಸುತ್ತಾಳೆ. ಐಬಿಎಂ ಜಪಾನ್ ಸೇರಿದಂತೆ ಕಾರ್ಪೊರೇಟ್ ಉದ್ಯೋಗಿಗಳಿಗೆ ತರಬೇತಿ ನೀಡುವ ಮೊದಲು ಜಿಮ್‌ನಲ್ಲಿ ನಗುತ್ತಿರುವುದನ್ನು ಕಲಿಸಲು ಪ್ರಾರಂಭಿಸಿದ್ದಳು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಸ್ಮೈಲ್‌ ತರಬೇತುಗಾರ್ತಿ ಕೀಕೊ ಕವಾನೊ ಜನರಿಗೆ ನಗುವುದನ್ನು ಕಲಿಸುತ್ತಿದ್ದಾಳೆ. ಜಪಾನಿನಲ್ಲಿ ಇವರ ತರಗತಿಗೆ ಬೇಡಿಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳು ಕನ್ನಡಿ ಹಿಡಿದು ತಮ್ಮ ಬೆರಳುಗಳಿಂದ ಬಾಯಿಯ ಬದಿಗಳನ್ನು ಅಗಲಿಸಿ ಹೇಗೆ ನಗಬೇಕೆಂದು ಅಭ್ಯಾಸ ಮಾಡುತ್ತಿದ್ದಾರಂತೆ. ಕವಾನೋ ವಿದ್ಯಾರ್ಥಿಗಳಿಗೆ ನಗುವುದು ಎಷ್ಟು ಮುಖ್ಯ, ನಕ್ಕರೇ ಏನು ಲಾಭಗಳಿವೆ ಎಂಬ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾಳೆ. ಕವಾನೊ ಕಂಪನಿ ‘ಎಗೊಯಿಕು’ ಕಳೆದ ವರ್ಷಕ್ಕೆ ಹೋಲಿಸಿದರೆ ನಾಲ್ಕು ಪಟ್ಟು ಬೇಡಿಕೆಯನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ ಒಂದು ಗಂಟೆಯ ಅವಧಿಯ ಪಾಠಕ್ಕೆ 7,700 ಯೆನ್ (4,500 ರೂ.) ವೆಚ್ಚವಾಗುತ್ತದೆ.

ಅಲ್ಲದೆ ನ್ಯೂಯಾರ್ಕ್ ಟೈಮ್ಸ್‌ನ ಪ್ರಕಾರ, ನಗುವ ತರಬೇತುದಾರರಾಗಲು ಬಯಸುವವರಿಗೆ, ಕವಾನೊ 80,000 ಜಪಾನೀಸ್ ಯೆನ್‌ ಶುಲ್ಕಕ್ಕೆ ಒಂದು ದಿನದ ತರಬೇತಿ ಕಾರ್ಯಾಗಾರಗಳನ್ನು ಸಹ ನೀಡುತ್ತಾಳೆ.
ಕೋವಿಡ್‌-19 ಸಾಂಕ್ರಾಮಿಕ ರೋಗ ತನ್ನ ವ್ಯವಹಾರಕ್ಕೆ ನಷ್ಟ ಉಂಟು ಮಾಡಿದಾಗ ಅವಳಿಗೆ ಕೆಲವೇ ಗ್ರಾಹಕರು ಮಾತ್ರ ಇದ್ದರು. ಆದರೆ, ದೇಶದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ಆದೇಶಗಳನ್ನು ತೆಗೆದುಹಾಕಿದ ನಂತರ ಆಕೆಯ ಗ್ರಾಹಕರ ಸಂಖ್ಯೆ ಒಮ್ಮೆಲೇ ಹೆಚ್ಚಾಯಿತು.
ಜಪಾನಿನ ಸಾರ್ವಜನಿಕ ಪ್ರಸಾರಕ NHK ಪ್ರಕಾರ, ಸಾಂಕ್ರಾಮಿಕ ಪೂರ್ವದ ದಿನಗಳಲ್ಲಿ ಸಹ, ವಿಶೇಷವಾಗಿ ಚಳಿಗಾಲ ಮತ್ತು ವಸಂತ ಋತುಗಳಲ್ಲಿ ಶೀತ ಅಥವಾ ಜ್ವರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಯಸುವ ಜಪಾನಿ ಜನರಿಗೆ ಮಾಸ್ಕ್‌ಗಳನ್ನು ಧರಿಸುವುದು ರೂಢಿಯಾಗಿದೆ. ಫೆಬ್ರವರಿಯಲ್ಲಿ ಅದು ನಡೆಸಿದ 1,200 ಕ್ಕೂ ಹೆಚ್ಚು ಜನರ ಸಮೀಕ್ಷೆಯು ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸಬೇಕೆಂಬ ಮಾರ್ಗಸೂಚಿಯನ್ನು ತೆಗೆದುಹಾಕುವ ಸರ್ಕಾರದ ನಿರ್ಧಾರ ಅವರ ನಡವಳಿಕೆಯ ಮೇಲೆ ಪರಿಣಾಮ ಬೀರಿಲ್ಲ ಎಂದು ತೋರಿಸಿದೆ: ಪ್ರತಿಕ್ರಿಯಿಸಿದವರಲ್ಲಿ ಕೇವಲ 6%ರಷ್ಟು ಜನರು ಮಾತ್ರ ತಾವು ಮಾಸ್ಕ್‌ ಧರಿಸುವುದನ್ನು ನಿಲ್ಲಿಸುವುದಾಗಿ ಹೇಳಿದ್ದಾರೆ ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement