ಫ್ರೀ ಬಸ್‌ ಪ್ರಯಾಣಕ್ಕೆ ಹೊರ ರಾಜ್ಯದ ಮಹಿಳೆಯರ ಐನಾತಿ ಐಡಿಯಾ: ಆಧಾರ್‌ ಕಾರ್ಡ್‌ ನೋಡಿ ದಂಗಾದ ಬಸ್‌ ಕಂಡಕ್ಟರ್‌

ಬೆಂಗಳೂರು : ಶಕ್ತಿ ಯೋಜನೆಯಡಿ ಸರ್ಕಾರ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಭಾಗ್ಯ ಕಲ್ಪಿಸಿದ್ದು, ಬೇರೆ ರಾಜ್ಯಗಳ ಮಹಿಳೆಯರ ಖತರ್ನಾಕ್‌ ಐಡಿಯಾಕ್ಕೆ ಬಸ್‌ ಕಂಡಕ್ಷರ್‌ಗಳೇ ಬೆಚ್ಚಿಬಿದ್ದಿದ್ದಾರೆ.
ಋಾಜ್ಯ ಸರ್ಕಾರದ ಶಕ್ತಿ ಯೋಜನೆಯಡಿ ಕಳೆದ ಮೂರು ದಿನಗಳಿಂದ ಬಿಎಂಟಿಸಿ ಸೇರಿದಂತೆ ಸಾಮಾನ್ಯ ಕೆಎಸ್‍ಆರ್‌ಟಿಸಿ ಬಸ್‍ಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಸ್ಮಾರ್ಟ್ ಕಾರ್ಡ್ ವಿತರಿಸದ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಸೇರಿದಂತೆ ಸರ್ಕಾರದ ನೀಡಿರುವ ಗುರುತಿನ ಚೀಟಿ ತೋರಿಸಿ ಉಚಿತವಾಗಿ ಮಹಿಳೆಯರು ಪ್ರಯಾಣಿಸಬಹುದಾಗಿದೆ. ಶಕ್ತಿ ಯೋಜನೆ ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯವಾಗಲಿದೆ. ರಾಜ್ಯದ ನಿವಾಸಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಶೂನ್ಯ ಟಿಕೆಟ್ ನೀಡುವಂತೆ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಬೆಂಗಳೂರಿನಲ್ಲಿ ನೆಲೆಸಿರುವ ಪಶ್ಚಿಮಬಂಗಾಳ ಮತ್ತು ತಮಿಳುನಾಡಿನ ಮಹಿಳೆಯರು ಕನ್ನಡದಲ್ಲಿ ನಕಲಿ ಆಧಾರ್ ಕಾರ್ಡ್‍ಗಳನ್ನು ಪ್ರಿಂಟ್ ಮಾಡಿಸಿಕೊಂಡು ಉಚಿತವಾಗಿ ಪ್ರಯಾಣಿಸುತ್ತಿದ್ದಾಗ ಕಂಡಕ್ಟರ್ ಒಬ್ಬರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹಣ ಕೊಟ್ಟು ಪ್ರಯಾಣ ಮಾಡುವಂತೆ ತಾಕೀತು ಮಾಡಿದ್ದಾರೆ.

ಬಸ್‍ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದು, ಪ್ರತಿಯೊಬ್ಬ ಮಹಿಳೆಯರ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಲು ಸಾಧ್ಯವಾಗುವುದಿಲ್ಲ. ಪರಿಶೀಲನೆ ಮಾಡದೇ ಬಿಟ್ಟರೆ ಕಂಡೆಕ್ಟರ್‌ ಅವರಿಗೆ ದಂಡದ ಭಯ ಬೇರೆ.
ಕೆಲ ಬೇರೆ ರಾಜ್ಯಗಳ ಮಹಿಳೆಯರು ವಿಶೇಷವಾಗಿ ಬೆಂಗಳೂರಿನಲ್ಲಿ ಈ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ವಾಸವಾಗಿರುವ ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಇತರೆ ರಾಜ್ಯಗಳ ಮಹಿಳೆಯರು ತಮ್ಮ ಮೂಲ ಆಧಾರ್‌ಕಾರ್ಡ್‌ ಪ್ರತಿಯಲ್ಲಿ ತಮ್ಮದೇ ರಾಜ್ಯದ ಅಧಿಕೃತ ಭಾಷೆಯ ಬದಲಾಗಿ ಕನ್ನಡದಲ್ಲಿ ಮುದ್ರಣವನ್ನು ಮಾಡಿಸಿಕೊಂಡಿದ್ದಾರೆ. ಮೂಲ ವಿಳಾಸ ಬಂಗಾಳ, ತಮಿಳುನಾಡಿನ ಗ್ರಾಮದ ವಿಳಾಸವನ್ನು ಹೊಂದಿದ್ದರೂ ಕೂಡ ಆ ಹೆಸರು ಮತ್ತು ವಿಳಾಸವನ್ನು ಕನ್ನಡದಲ್ಲಿ ಮುದ್ರಣ ಮಾಡಿಸಿಕೊಂಡಿದ್ದಾರೆ. ಇಂತಹ ದಾಖಲೆಗಳನ್ನು ಬಸ್‌ನಲ್ಲಿ ತೋರಿಸಿ ಪ್ರಯಾಣ ಮಾಡುತ್ತಿರುವುದು ಕಂಡಕ್ಟರ್‌ಗಳಿಗೆ ಪತ್ತೆಯಾಗಿದೆ. ಇಂತಹ ಆಧಾರ್ ಕಾರ್ಡ್ ತೋರಿಸಿದ ಇಬ್ಬರೂ ಮಹಿಳೆಯರು, ಕಂಡಕ್ಟರ್‌ ಬಳಿ ಸಿಕ್ಕಿಕೊಂಡಿದ್ದಾರೆ. ಈ ಬಗ್ಗೆ ಫೊಟೋಗಳನ್ನು ತೆಗೆದುಕೊಂಡು ಸಾರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಕಂಡಕ್ಟರ್‌ಗಳು ಎಚ್ಚೆತ್ತುಕೊಳ್ಳಬೇಕಿದೆ.

ಇಂದಿನ ಪ್ರಮುಖ ಸುದ್ದಿ :-   ಸಂಸತ್ತಿನಲ್ಲಿ ಮುಸ್ಲಿಂ ಸಂಸದರನ್ನು ನಿಂದಿಸಿದ ಬಿಜೆಪಿ ನಾಯಕನಿಗೆ ಪಕ್ಷದಿಂದ ನೋಟಿಸ್

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement