ಮದುವೆಯಾಗಲು ಹೆಣ್ಣು ಹುಡುಕಿಕೊಡಿ ಎಂದು ಪಿಡಿಒಗೆ ಪತ್ರ ಬರೆದ ಯುವಕ…!

ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎನ್ನುವುದು ಯುವಕರ ಗೋಳಾಗಿದೆ. ಕಾರು, ಬೈಕು, ಜಮೀನು ಇದೆ. ಲಕ್ಷ ಲಕ್ಷ ಸಂಪಾನೆ ಇದ್ದರೂ ಹುಡುಗಿ ಸಿಗುತ್ತಿಲ್ಲ. ಈಗ ಇಲ್ಲೊಬ್ಬ ವ್ಯಕ್ತಿ ಸತತ ಏಳು ವರ್ಷದಿಂದ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿದ್ದರೂ ಆತನಿಗೆ ಹುಡುಗಿ ಸಿಕ್ಕಿಲ್ಲವಂತೆ. ಹೀಗಾಗಿ ಆತ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗೆ ಹುಡುಗಿ ಹುಡುಕಿ ಕೊಡಿ ಎಂದು ಪತ್ರ ಬರೆದಿದ್ದಾನೆ. ಈ ಪತ್ರ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.
ಆ ಪತ್ರದಲ್ಲಿ ಆತ ತಾನು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕ ಮುತ್ತು ಹೂಗಾರ (27) ಎಂದು ಹೇಳಿಕೊಂಡಿದ್ದಾನೆ. ಕಳೆದ ಏಳು ವರ್ಷದಿಂದ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದಾನೆ. ಆದರೆ ಬಹುತೇಕರು ಸರ್ಕಾರಿ ನೌಕರಿ ಇದ್ದರೆ ಮಾತ್ರ ಕನ್ಯೆ ನೀಡುತ್ತೇವೆ ಎಂದು ಹೇಳುತ್ತಿದ್ದಾರಂತೆ. ಹುಡುಗಿ ಹುಡುಕಿ ಹುಡುಕಿ ಸಾಕಾಗಿ ಮುತ್ತು ಹೂಗಾರ ಈಗ ಪಿಡಿಒಗೆ ಪತ್ರ ಬರೆದು ಕನ್ಯಾ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾನೆ.

ಈತ ಗ್ರಾಪಂವ್ಯಾಪ್ತಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನಂತೆ. ಕುಟುಂಬ ನಿರ್ವಹಿಸುವಷ್ಟು ಸಂಪಾದನೆ ಮಾಡುತ್ತಿದ್ದೇನೆ. ಆದರೆ ಸರ್ಕಾರಿ ಕೆಲಸ ಇಲ್ಲ ಎಂದು ಹೆಣ್ಣು ಕೊಡಲು ಯಾರು ಮುಂದೆ ಬರುತ್ತಿಲ್ಲ ಎಂದು ಹೇಳಿಕೊಂಡಿದ್ದಾನೆ. ಬರೆದಿರುವ ಪತ್ರದಲ್ಲಿ ಒಬ್ಬನೇ ಮಗ, ವೃತ್ತಿಯಿಂದ ಗುತ್ತಿಗೆದಾರ.. ಅನೇಕ ವರ್ಷಗಳಿಂದ ಹುಡುಗಿ ಹುಡುಕಿ ಜೀವನದಲ್ಲಿ ಜಿಗುಪ್ಸೆ ಬಂದಿದೆ.. ಜೀವನ ಸಂಗಾತಿಯನ್ನ ಹುಡುಕಲು ಹೋದಾಗ ಸರ್ಕಾರಿ ನೌಕರಿ ಇದ್ದವರಿಗೆ ಮಾತ್ರ ಕೊಡುತ್ತೇವೆ ಎಂದು ಹೇಳಿಕೊಂಡಿದ್ದಾನೆ. ದಯಾಳುಗಳಾದ ತಾವು ಯಾವುದೇ ಸಮುದಾಯದ ಹುಡುಗಿಯನ್ನಾದರೂ ಹುಡುಕಿಕೊಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ.. ಯುವಕನ ‘ಈ ಪ್ರಯತ್ನ’ ರಾಜ್ಯಾದ್ಯಂತ ಸದ್ದು ಮಾಡಿದೆ.

ಪ್ರಮುಖ ಸುದ್ದಿ :-   ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಬಾಲ ಸಾಹಿತ್ಯ ಪುರಸ್ಕಾರ ವಿಜೇತರ ಹೆಸರು ಪ್ರಕಟ; ಕನ್ನಡದಲ್ಲಿ ಶ್ರುತಿ ಬಿಆರ್ ಯುವ ಪುರಸ್ಕಾರಕ್ಕೆ, ಕೃಷ್ಣಮೂರ್ತಿ ಬಿಳಿಗೆರೆ ಬಾಲ ಪುರಸ್ಕಾರಕ್ಕೆ ಆಯ್ಕೆ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement